For Quick Alerts
ALLOW NOTIFICATIONS  
For Daily Alerts

ತಲ್ಲಣಿಸಿದ ಷೇರು ಮಾರ್ಕೆಟ್; 1100ಕ್ಕೂ ಹೆಚ್ಚು ಪಾಯಿಂಟ್ ನೆಲ ಕಚ್ಚಿದ ಸೆನ್ಸೆಕ್ಸ್

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಗುರುವಾರದಂದು (ಸೆಪ್ಟೆಂಬರ್ 24, 2020) ಭಾರೀ ಇಳಿಕೆ ಕಂಡಿದೆ. ಸೆನ್ಸೆಕ್ಸ್ 1114.82 ಪಾಯಿಂಟ್ ಗಳ ಇಳಿಕೆ ಕಂಡು, 36,553.60 ಅಂಶಗಳಿಗೆ ದಿನಾಂತ್ಯದ ವ್ಯವಹಾರ ಮುಕ್ತಾಯಗೊಳಿಸಿದೆ. ನಿಫ್ಟಿ ಸೂಚ್ಯಂಕವು 326.40 ಪಾಯಿಂಟ್ ಗಳ ಇಳಿಕೆಯಾಗಿ 10,805.50 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾಗೊಳಿಸಿದೆ.

ಮಾಹಿತಿ ತಂತ್ರಜ್ಞಾನ (ಐ.ಟಿ) ಹಾಗೂ ಲೋಹದ ಸೂಚ್ಯಂಕಗಳು ತಲಾ 4% ಇಳಿಕೆ ಕಂಡವು. ಅದರ ಬೆನ್ನಿಗೆ ವಾಹನ, ಪಿಎಸ್ ಯು ಬ್ಯಾಂಕ್, ಇನ್ ಫ್ರಾಸ್ಟ್ರಕ್ಚರ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಸಹ ಭಾರೀ ಇಳಿಕೆ ಕಂಡಿವೆ. ಇಂದಿನ ಸೆಷನ್ ನಲ್ಲಿ ಮಾರುಕಟ್ಟೆ ಬಂಡವಾಳ 3.87 ಲಕ್ಷ ಕೋಟಿ ರುಪಾಯಿ ಕೊಚ್ಚಿಹೋಗಿದೆ.

ನಿಫ್ಟಿಯಲ್ಲಿ ಭಾರೀ ಇಳಿಕೆ ಕಂಡ ಪ್ರಮುಖ ಷೇರುಗಳು
ಇಂಡಸ್ ಇಂಡ್ ಬ್ಯಾಂಕ್

ಬಜಾಜ್ ಬ್ಯಾಂಕ್

ಟಾಟಾ ಮೋಟಾರ್ಸ್

ಮಹೀಂದ್ರಾ ಅಂಡ್ ಮಹೀಂದ್ರಾ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ಷೇರು ಮಾರ್ಕೆಟ್; 1100ಕ್ಕೂ ಹೆಚ್ಚು ಪಾಯಿಂಟ್ ನೆಲ ಕಚ್ಚಿದ ಸೆನ್ಸೆಕ್ಸ್

ಸೆಪ್ಟೆಂಬರ್ 24ರ ಗುರುವಾರ ಫ್ಯೂಚರ್ಸ್ ಅಂಡ್ ಆಪ್ಷನ್ ಸೆಪ್ಟೆಂಬರ್ ತಿಂಗಳ ಕಾಂಟ್ರಾಕ್ಟ್ ಪೂರ್ಣಗೊಂಡಿತು. ಅದರ ಚುಕ್ತಾ ಹಾಗೂ ಇತರ ಜಾಗತಿಕ ಅಂಶಗಳು ಸೇರಿಕೊಂಡು, ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕವು ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿತು.

English summary

Sensex Tank More Than 1100 Points On September Month F and O Expiry

Sensex tank more than 1100 points and nifty 320 points on September 24, 2020 on F&O contract expiry.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X