For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಸೂಚ್ಯಂಕಗಳಲ್ಲಿ ಭಾರೀ ಇಳಿಕೆ; ಟಾಟಾ ಮೋಟಾರ್ಸ್ 6% ಏರಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರದಂದು (ಜನವರಿ 15, 2021) ಭಾರೀ ಇಳಿಕೆ ಕಂಡಿವೆ. ಬಿಎಸ್ ಇ ಸೆನ್ಸೆಕ್ಸ್ 549.49 ಪಾಯಿಂಟ್ ಕುಸಿದು, 49,034.67 ಪಾಯಿಂಟ್ ತಲುಪಿತು. ಇನ್ನು ಎನ್ ಎಸ್ ಇ ನಿಫ್ಟಿ ಸೂಚ್ಯಂಕವು 161.90 ಪಾಯಿಂಟ್ ಇಳಿಕೆ ಕಂಡು, 14,433.70 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿತು.

 

ದಶಕದಲ್ಲಿ ಮೊದಲ ಬಾರಿ GDP ದಾಟಿದ ಲಿಸ್ಟೆಡ್ ಕಂಪೆನಿ ಮಾರ್ಕೆಟ್ ಬಂಡವಾಳದಶಕದಲ್ಲಿ ಮೊದಲ ಬಾರಿ GDP ದಾಟಿದ ಲಿಸ್ಟೆಡ್ ಕಂಪೆನಿ ಮಾರ್ಕೆಟ್ ಬಂಡವಾಳ

ಜಾಗತಿಕ ಮಾರುಕಟ್ಟೆಯ ದುರ್ಬಲತೆ, ಲಾಭದ ನಗದೀಕರಣದ ಪ್ರಭಾವ ಷೇರು ಪೇಟೆ ಮೇಲೆ ಆಯಿತು. 1070 ಕಂಪೆನಿಯ ಷೇರುಗಳು ಇಂದಿನ ವಹಿವಾಟಿನಲ್ಲಿ ಏರಿಕೆ ಕಂಡರೆ, 1897 ಕಂಪೆನಿಯ ಷೇರುಗಳು ಇಳಿಕೆ ಕಂಡವು. 139 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎಲ್ಲ ವಲಯದ ಸ್ಸೂಚ್ಯಂಕಗಳೂ ಇಳಿಕೆ ಕಂಡವು. ಬಿಎಸ್ ಇ ಸ್ಮಾಲ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ 1 ಪರ್ಸೆಂಟ್ ಕುಸಿದವು.

 

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಟಾಟಾ ಮೋಟಾರ್ಸ್ 6.20

ಭಾರ್ತಿ ಏರ್ ಟೆಲ್ 3.81

ಯುಪಿಎಲ್ 2.58

ಐಟಿಸಿ 1.73

ಗ್ರಾಸಿಮ್ 1.25

ಷೇರುಪೇಟೆ ಸೂಚ್ಯಂಕಗಳಲ್ಲಿ ಭಾರೀ ಇಳಿಕೆ; ಟಾಟಾ ಮೋಟಾರ್ಸ್ 6% ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಟೆಕ್ ಮಹೀಂದ್ರಾ -4.30

ಗೇಲ್ -3.82

ಎಚ್ ಸಿಎಲ್ ಟೆಕ್ -3.69

ವಿಪ್ರೋ -3.48

ಒಎನ್ ಜಿಸಿ -3.47

English summary

Sensex Tank More Than 500 Points; Tata Motors Gain More Than 6 Percent

Indian stock market index sensex and nifty tank on global weak clues and Tata Motors gain more than 6%. Here is the nifty top gainers and losers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X