ಷೇರು ಮಾರುಕಟ್ಟೆ ತಲ್ಲಣ; 700 ಪಾಯಿಂಟ್ ಗೂ ಹೆಚ್ಚು ಕುಸಿದ ಸೆನ್ಸೆಕ್ಸ್

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಶುಕ್ರವಾರ (ಜನವರಿ 22, 2021) ಭಾರೀ ಇಳಿಕೆ ಕಂಡಿದೆ. ಸೆನ್ಸೆಕ್ಸ್ 746.22 ಪಾಯಿಂಟ್ ಕುಸಿತ ಕಂಡು, 48,878.54ರಲ್ಲಿ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 218.50 ಪಾಯಿಂಟ್ ಕುಸಿದು 14,371.90 ತಲುಪಿದರೆ, ಬ್ಯಾಂಕ್ ನಿಫ್ಟಿ 1019.60 ಇಳಿಕೆ ಕಂಡಿತು.

ಇಂದಿನ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಕಂಪೆನಿಯ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡುಬಂತು.

ಸತತ ಎರಡನೇ ದಿನ ಲಾಭದ ನಗದೀಕರಣ ಕಾರಣಕ್ಕೆ ಸೂಚ್ಯಂಕಗಳು ಭಾರೀ ಪ್ರಮಾಣದಲ್ಲಿ ಇಳಿದವು. ಇಂದಿನ ವಹಿವಾಟಿನಲ್ಲಿ 960 ಕಂಪೆನಿ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡುಬಂದರೆ, 1961 ಕಂಪೆನಿಯ ಷೇರುಗಳು ದರ ಇಳಿದವು. ಇನ್ನು 132 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ನಿಫ್ಟಿ ಬ್ಯಾಂಕ್, ಲೋಹ ಮತ್ತು ಪಿಎಸ್ ಯು ಬ್ಯಾಂಕ್ ಸೂಚ್ಯಂಕಗಳು ತಲಾ 3 ಪರ್ಸೆಂಟ್ ಕುಸಿತ ಕಂಡರೆ, ಎನರ್ಜಿ, ಫಾರ್ಮಾಸ್ಯುಟಿಕಲ್ಸ್ ಮತ್ತು ಮೂಲಸೌಕರ್ಯ ವಲಯದ ಷೇರುಗಳು ತಲಾ 1 ಪರ್ಸೆಂಟ್ ಇಳಿಕೆ ಕಂಡವು. ಇನ್ನು ವಾಹನ ವಲಯದ ಸೂಚ್ಯಂಕ 1 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳು
ಬಜಾಜ್ ಆಟೋ

ಹೀರೋ ಮೋಟೋಕಾರ್ಪ್

ಐಷರ್ ಮೋಟಾರ್ಸ್

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್

ಟಿಸಿಎಸ್

ಷೇರು ಮಾರುಕಟ್ಟೆ ತಲ್ಲಣ; 700 ಪಾಯಿಂಟ್ ಗೂ ಹೆಚ್ಚು ಕುಸಿದ ಸೆನ್ಸೆಕ್ಸ್

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ ಐದು ಷೇರುಗಳು
ಆಕ್ಸಿಸ್ ಬ್ಯಾಂಕ್

ಏಷ್ಯನ್ ಪೇಂಟ್ಸ್

ಜೆಎಸ್ ಡಬ್ಲ್ಯು ಸ್ಟೀಲ್

ಹಿಂಡಾಲ್ಕೋ ಇಂಡಸ್ಟ್ರೀಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+