900ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ಸತತ ಏರಿಕೆ ನಂತರ ದೊಡ್ಡ ಬ್ರೇಕ್
ಸತತವಾಗಿ ಏರಿಕೆ ಕಾಣುತ್ತಾ ಬಂದಿದ್ದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಗುರುವಾರ ಮಧ್ಯಾಹ್ನ 2.15ರ ಹೊತ್ತಿಗೆ ಭಾರೀ ಇಳಿಕೆ ಆಗಿದೆ. ಸೆನ್ಸೆಕ್ಸ್ 943.24 ಪಾಯಿಂಟ್ ಗಳ ಇಳಿಕೆ ಕಂಡು, 39,851.50 ಪಾಯಿಂಟ್ ನೊಂದಿಗೆ ವ್ಯವಹಾರ ನಡೆಸಿದರೆ, ನಿಫ್ಟಿ 257.6 ಪಾಯಿಂಟ್ ಕುಸಿದು, 11,713.45 ಅಂಶದೊಂದಿಗೆ ವ್ಯವಹಾರ ನಡೆಸಿತು.
ಭಾರತದ ಆರ್ಥಿಕತೆ ಬಗ್ಗೆ ಮೂಡೀಸ್ ಹೇಳಿಕೆ, ರಿಲಯನ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್ ನಂಥ ಷೇರು ಗಳಲ್ಲಿ ಇಳಿಕೆ, ಐಟಿ ಹಾಗೂ ಫಾರ್ಮಾಸ್ಯುಟಿಕಲ್ಸ್ ಷೇರುಗಳ ಚಲನೆ ನಿಂತಿದ್ದು ಹಾಗೂ ಜಾಗತಿಕ ಮಟ್ಟದ ಷೇರು ಮಾರ್ಕೆಟ್ ಸೂಚ್ಯಂಕಗಳ ಪ್ರಭಾವ ಇವೆಲ್ಲವೂ ಸೇರಿ ಭಾರೀ ಇಳಿಕೆ ಕಂಡುಬಂತು.

ಎಚ್ ಸಿಎಲ್ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಭಾರ್ತಿ ಏರ್ ಟೆಲ್ ಹಾಗೂ ಇನ್ಫೋಸಿಸ್ ಷೇರು ಗಳು 3%ಗೂ ಹೆಚ್ಚು ಕುಸಿದವು. ಮುಖ್ಯವಾಗಿ ಐಟಿ ವಲಯದ ಪ್ರಮುಖ ಕಂಪೆನಿಗಳಾದ ಎಚ್ ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ ಹಾಗೂ ಇನ್ಫೋಸಿಸ್ ನಲ್ಲಿ ಮಾರಾಟ ಒತ್ತಡ ಕಂಡುಬಂತು.


Click it and Unblock the Notifications