ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿದ್ದ ಭಾರತದ ಷೇರುಪೇಟೆ ಶುಕ್ರವಾರ ಮತ್ತಷ್ಟು ಕುಸಿದಿದ್ದು, ಆರಂಭಿಕ ವಹಿವಾಟಿನಲ್ಲಿ ನಷ್ಟ ಅನುಭವಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 438 ಪಾಯಿಂಟ್ಸ್ ಇಳಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 155 ಪಾಯಿಂಟ್ಸ್ ಕುಸಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.79ರಷ್ಟು ಅಥವಾ 438.56 ಪಾಯಿಂಟ್ಸ್ ಇಳಿಕೆಗೊಂಡು 55190.93 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 161.5 ಪಾಯಿಂಟ್ಸ್ ಅಥವಾ ಶೇಕಡಾ 0.97ರಷ್ಟು ಕುಸಿದು 16407.35 ಪಾಯಿಂಟ್ಸ್ ಮುಟ್ಟಿದೆ.
ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇಯಲ್ಲಿ ಒಟ್ಟು 2,101 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಯಿತು, ಅದರಲ್ಲಿ ಸುಮಾರು 411 ಷೇರುಗಳು ಏರಿಎಕಗೊಂಡರೆ ಮತ್ತು 1,578 ಕುಸಿತದೊಂದಿಗೆ ತೆರೆಯಲ್ಪಟ್ಟವು. ಅದೇ ಸಮಯದಲ್ಲಿ, 112 ಕಂಪನಿಗಳ ಷೇರು ಬೆಲೆ ಯಾವುದೇ ವ್ಯತ್ಯಾಸಗೊಂಡಿಲ್ಲ.

ಏರಿಕೆಗೊಂಡ ಪ್ರಮುಖ ಷೇರುಗಳು:
ಎಸ್‌ಬಿಐ ಲೈಫ್‌ನ ಷೇರುಗಳು 16 ರೂಪಾಯಿ ಏರಿಕೆಗೊಂಡು 1130.40 ಕ್ಕೆ ಪ್ರಾರಂಭವಾದವು. ಏಷ್ಯನ್ ಪೇಂಟ್ಸ್ ನ ಷೇರುಗಳು 32 ರೂಪಾಯಿಗಳಷ್ಟು ಏರಿಕೆಯಾಗಿ 3,033.45 ರೂ. ತಲುಪಿದೆ. ಭಾರ್ತಿ ಏರ್‌ಟೆಲ್‌ನ ಷೇರುಗಳು 8 ರೂಪಾಯಿಗಳಷ್ಟು ಏರಿಕೆಗೊಂಡು 630.65 ರಲ್ಲಿ ಆರಂಭವಾಗಿದೆ. ಮಾರುತಿ ಸುಜುಕಿಯ ಷೇರು 39 ರೂಪಾಯಿ ಹೆಚ್ಚಾಗಿ 6879.35 ಕ್ಕೆ ಪ್ರಾರಂಭವಾಯಿತು. ಇನ್ಫೋಸಿಸ್ ಷೇರುಗಳು 9 ರೂಪಾಯಿ ಏರಿಕೆಗೊಂಡು 1,742.70 ಕ್ಕೆ ತಲುಪಿದೆ.
ಇಳಿಕೆಗೊಂಡ ಪ್ರಮುಖ ಷೇರುಗಳು:
ಹಿಂಡಾಲ್ಕೊ ಷೇರುಗಳು 19 ರೂ. ಇಳಿಕೆಗೊಂಡು 408.35 ಕ್ಕೆ ಪ್ರಾರಂಭವಾದವು, ರೂ. 19 ರಷ್ಟು ಇಳಿದವು. ಟಾಟಾ ಸ್ಟೀಲ್ ನ ಷೇರುಗಳು ರೂ .441.10 ಕ್ಕೆ ಆರಂಭವಾಗಿದ್ದು, ಸುಮಾರು ರೂ. 59 ರಷ್ಟು ಇಳಿಕೆಯಾಗಿದೆ. ಒಎನ್ ಜಿಸಿ ಷೇರುಗಳು ರೂ. 108.85 ಕ್ಕೆ ಆರಂಭಗೊಂಡಿದ್ದು, ಸುಮಾರು ರೂ. ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ರೂ. 714.10 ಕ್ಕೆ ಆರಂಭವಾಗಿದ್ದು, ರೂ 23 ರಷ್ಟು ಇಳಿಕೆಯಾಗಿದೆ.
ಬಾಟಾ ಷೇರು ಜಿಗಿತ
ನಿಫ್ಟಿ 50 ರಲ್ಲಿನ ಶೇಕಡಾ 18ರ ಲಾಭಕ್ಕೆ ಹೋಲಿಸಿದರೆ ಬಾಟಾ ಕಂಪನಿ ಷೇರುಗಳು ಕೇವಲ 11 ಪ್ರತಿಶತದಷ್ಟು ಏರಿಕೆಯಾಗಿದೆ ಮತ್ತು ಎಸ್ & ಪಿ ಬಿಎಸ್ಇ 200 ಸೂಚ್ಯಂಕದಲ್ಲಿ 20 ಪ್ರತಿಶತದಷ್ಟು ಹೆಚ್ಚಾಗಿದೆ. ಆದಾಗ್ಯೂ, ಕಳೆದ ಮೂರು ತಿಂಗಳಲ್ಲಿ ಇದು ಶೇಕಡಾ 20 ಕ್ಕಿಂತ ಹೆಚ್ಚು ರ್ಯಾಲಿ ಮಾಡಿದೆ. ಇದು ಆಗಸ್ಟ್ 18 ರಂದು 52 ವಾರಗಳ ಗರಿಷ್ಠ ಮಟ್ಟವಾದ ರೂ .1767.90 ಅನ್ನು ಮುಟ್ಟಿತು.
ಡಾಲರ್ ರೂಪಾಯಿ ಮೌಲ್ಯ ಕುಸಿತ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು ದುರ್ಬಲತೆಯಿಂದ ಆರಂಭವಾಯಿತು. ಇಂದು ಡಾಲರ್ ಎದುರು ರೂಪಾಯಿ 15 ಪೈಸೆ ಏರಿಕೆಯೊಂದಿಗೆ 74.39 ರೂ. ದಾಖಲಾಯಿತು. ಇನ್ನು ಬುಧವಾರ, ಡಾಲರ್ ಎದುರು ರೂಪಾಯಿ 11 ಪೈಸೆ ಬಲಗೊಂಡು 74.24 ರೂ., ಮಂಗಳವಾರ, ಡಾಲರ್ ಎದುರು ರೂಪಾಯಿ 10 ಪೈಸೆ ಬಲಗೊಂಡು 74.35 ರೂ. ತಲುಪಿತ್ತು.
ಷೇರು ಮಾರುಕಟ್ಟೆಯಿಂದ ಷೇರುಗಳನ್ನು ಖರೀದಿಸುವುದು ಹೇಗೆ?
ಯಾರಾದರೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆಯನ್ನು ಹೊಂದಿದ್ದರೆ, ನಂತರ ಅವರು ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯುವ ಮೂಲಕ ನೀವು ಸುಲಭವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.


Click it and Unblock the Notifications