For Quick Alerts
ALLOW NOTIFICATIONS  
For Daily Alerts

Closing Bell: ಸೆನ್ಸೆಕ್ಸ್ 209 ಪಾಯಿಂಟ್ಸ್ ಏರಿಕೆ, ನಿಫ್ಟಿ 15,750 ಮಟ್ಟಕ್ಕಿಂತ ಹೆಚ್ಚಳ

|

ಭಾರತೀಯ ಷೇರುಪೇಟೆ ಗುರುವಾರ ಸಕಾರಾತ್ಮಕ ಸೂಚನೆಗಳ ಮೂಲಕ ದಿನದ ವಹಿವಾಟು ಅಂತ್ಯಗೊಳಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 209 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 69 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.40ರಷ್ಟು ಅಥವಾ 209.36 ಪಾಯಿಂಟ್ಸ್ ಹೆಚ್ಚಳಗೊಂಡು 52,653.07 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.44ರಷ್ಟು ಅಥವಾ 69.10 ಪಾಯಿಂಟ್ಸ್‌ ಏರಿಕೆಗೊಂಡು 15,778.50 ಪಾಯಿಂಟ್ಸ್ ಮುಟ್ಟಿದೆ.

 
Closing Bell: ಸೆನ್ಸೆಕ್ಸ್ 209 ಪಾಯಿಂಟ್ಸ್ ಏರಿಕೆ

ದಿನದ ವಹಿವಾಟು ಅಂತ್ಯಕ್ಕೆ 1781 ಷೇರುಗಳು ಏರಿಕೆಗೊಂಡರೆ, 1170 ಷೇರುಗಳು ಕುಸಿದಿವೆ ಮತ್ತು 109 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಹಿಂಡಾಲ್ಕೊ, ಟಾಟಾ ಸ್ಟೀಲ್, ಬಜಾಜ್ ಫಿನ್‌ಸರ್ವ್, ಎಸ್‌ಬಿಐ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ನಿಫ್ಟಿಯಲ್ಲಿ ಅಗ್ರಸ್ಥಾನಗಳಿಸಿದ ಷೇರುಗಳಾಗಿದ್ದು, ಮಾರುತಿ ಸುಜುಕಿ, ಪವರ್ ಗ್ರಿಡ್ ಕಾರ್ಪ್, ಬಜಾಜ್ ಆಟೋ, ಐಟಿಸಿ ಮತ್ತು ಕೋಲ್ ಇಂಡಿಯಾ ಕುಸಿತ ಕಂಡಿವೆ.

ಲೋಹದ ಸೂಚ್ಯಂಕ ಶೇಕಡಾ 5ರಷ್ಟು ಗಳಿಸಿದರೆ, ಐಟಿ, ಪಿಎಸ್‌ಯು ಬ್ಯಾಂಕ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇಕಡಾ 1 ರಿಂದ 3ರಷ್ಟು ಏರಿಕೆಯಾಗಿದೆ. ಆದರೆ, ಎಫ್‌ಎಂಸಿಜಿ ಸೂಚ್ಯಂಕ ಶೇ 1ರಷ್ಟು ಕುಸಿದಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.4 ರಿಂದ 0.9 ರಷ್ಟು ಏರಿಕೆಯಾಗಿದೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ 9 ಡಾಲರ್ ಹೆಚ್ಚಳದಿಂದ ಪ್ರತಿ ಡಾಲರ್‌ಗೆ 74.28 ಕ್ಕೆ ತಲುಪಿದೆ.

English summary

Sensex Up 209 Points: Nifty Ends Above 15750

Sensex was up 209.36 points or 0.40% at 52653.07, and the Nifty was up 69.10 points or 0.44% at 15778.50.
Story first published: Thursday, July 29, 2021, 17:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X