ಬುಧವಾರ ಸಾಕಷ್ಟು ನಷ್ಟಕ್ಕೆ ಸಾಕ್ಷಿಯಾಗಿದ್ದ ಭಾರತದ ಷೇರುಪೇಟೆ ಗುರುವಾರ (ಜುಲೈ 29) ಹಸಿರು ಬಣ್ಣದಲ್ಲಿ ಮಾರುಕಟ್ಟೆ ತೆರೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 224 ಪಾಯಿಂಟ್ಸ್ ಏರಿಕೆಗೊಂಡಿದ್ದು, ನಿಫ್ಟಿ 70 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬೆಳಿಗ್ಗೆ 9.16ಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.43ರಷ್ಟು ಅಥವಾ 224.86 ಪಾಯಿಂಟ್ಸ್ ಹೆಚ್ಚಳಗೊಂಡು 52668.57 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.45ರಷ್ಟು ಅಥವಾ 70.60 ಪಾಯಿಂಟ್ಸ್ ಏರಿಕೆಗೊಂಡು 15780 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಆರಂಭದಲ್ಲಿ 1484 ಷೇರುಗಳು ಏರಿಕೆಗೊಂಡರೆ, 353 ಷೇರುಗಳು ಕುಸಿದವು ಮತ್ತು 61 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಭಾರತೀಯ ಷೇರುಪೇಟೆ ಬುಧವಾರ ದುರ್ಬಲ ಜಾಗತಿಕ ಸೂಚನೆ ಹಿನ್ನಲೆಯಲ್ಲಿ ನಷ್ಟದೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿತು. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 135 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 37.05 ಪಾಯಿಂಟ್ಸ್ ಇಳಿಕೆಯೊಂದಿಗೆ 15700 ಮಟ್ಟದಲ್ಲೇ ಉಳಿದಿತ್ತು.
ಏರಿಕೆಗೊಂಡ ಷೇರುಗಳು:
ಟಾಟಾ ಮೋಟಾರ್ಸ್‌ನ ಷೇರುಗಳು 5 ರೂ.ಗಳ ಲಾಭದೊಂದಿಗೆ 289.70 ರೂ., ಎಚ್‌ಸಿಎಲ್ ಟೆಕ್ ಷೇರುಗಳು 13 ರೂ.ಗಳ ಏರಿಕೆ ಕಂಡು 996.25 ರೂ., ಟೆಕ್ ಮಹೀಂದ್ರಾ ಷೇರುಗಳು 14 ರೂ.ಗಳ ಏರಿಕೆ ಕಂಡು 1,134.00 ರೂ., ಭಾರ್ತಿ ಏರ್‌ಟೆಲ್‌ನ ಷೇರು 7 ರೂ.ಗಳ ಲಾಭದೊಂದಿಗೆ 574.40 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು 2 ರೂ.ಗಳ ಏರಿಕೆ ಕಂಡು 173.25 ರೂ. ತಲುಪಿದೆ
ಇಳಿಕೆಗೊಂಡ ಷೇರುಗಳು:
ಮಾರುತಿ ಸುಜುಕಿಯ ಷೇರು ಸುಮಾರು 104 ರೂ.ಗಳಷ್ಟು ಇಳಿಕೆಯಾಗಿ 7,060.65 ರೂ., ನೆಸ್ಲೆ ಷೇರುಗಳು ರೂ. 103 ರಷ್ಟು ಇಳಿಕೆಯಾಗಿ ರೂ 17,920.00 ಕ್ಕೆ ಆರಂಭವಾಯಿತು. ಎಸ್‌ಬಿಐ ಲೈಫ್‌ನ ಷೇರುಗಳು ಸುಮಾರು 7 ರೂ.ಗಳಷ್ಟು ಇಳಿಕೆಯಾಗಿ 1,126.10 ರೂ., ಈಚರ್ ಮೋಟಾರ್ಸ್‌ನ ಷೇರುಗಳು 16 ರೂ.ಗಳಷ್ಟು ಇಳಿಕೆಯಾಗಿ 2,534.10 ರೂ.ಗೆ ಪ್ರಾರಂಭವಾಯಿತು. ಬಜಾಜ್ ಆಟೋ ಷೇರುಗಳು 16 ರೂ.ಗಳಷ್ಟು ಇಳಿಕೆಯಾಗಿ 3,802.40 ರೂ. ತಲುಪಿದೆ.


Click it and Unblock the Notifications