For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 250 ಪಾಯಿಂಟ್ಸ್ ಏರಿಕೆ: ನಿಫ್ಟಿ 70 ಪಾಯಿಂಟ್ಸ್ ಹೆಚ್ಚಳ

|

ಭಾರತೀಯ ಷೇರುಪೇಟೆ ಬುಧವಾರ ಭರ್ಜರಿ ಏರಿಕೆ ದಾಖಲಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 250 ಪಾಯಿಂಟ್ಸ್ ಜಿಗಿತಗೊಂಡಿದೆ. ರಾಷ್ಟ್ರೀಯ ಷೇರುಪೇಟೆ 70 ಪಾಯಿಂಟ್ಸ್‌ ಏರಿಕೆಗೊಂಡಿದೆ.

ಬೆಳಿಗ್ಗೆ 9.50ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 252.88 ಪಾಯಿಂಟ್ಸ್ ಅಥವಾ ಶೇಕಡಾ 0.47 ರಷ್ಟು ಹೆಚ್ಚಾಗಿ 56055.26 ಪಾಯಿಂಟ್ಸ್ ಏರಿಕೆಗೊಂಡಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 69.7 ಪಾಯಿಂಟ್ಸ್ ಅಥವಾ ಶೇಕಡಾ 0.42ರಷ್ಟು ಏರಿಕೆಗೊಂಡು 16684.10 ಪಾಯಿಂಟ್ಸ್ ತಲುಪಿದೆ.

ದಿನದ ವಹಿವಾಟು ಆರಂಭದಲ್ಲಿ 1,092 ಷೇರುಗಳು ಏರಿಕೆಗೊಂಡರೆ, 699 ಷೇರುಗಳು ಕುಸಿದಿವೆ ಮತ್ತು 79 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗದೆ ಉಳಿದಿವೆ.

ಸೆನ್ಸೆಕ್ಸ್ 250 ಪಾಯಿಂಟ್ಸ್ ಏರಿಕೆ: ನಿಫ್ಟಿ 70 ಪಾಯಿಂಟ್ಸ್ ಹೆಚ್ಚಳ

ಏರಿಕೆಗೊಂಡ ಷೇರುಗಳು

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳು 45 ರೂಪಾಯಿ ಏರಿಕೆಯಾಗಿ 1,559.45 ರೂ. ತಲುಪಿದೆ. ಐಷರ್ ಮೋಟಾರ್ಸ್‌ ಷೇರುಗಳು 41 ರೂಪಾಯಿ ಏರಿಕೆಗೊಂಡು 556.60 ರೂಪಾಯಿಗೆ ಜಿಗಿದಿದೆ.

ಎಚ್‌ಡಿಎಫ್‌ಸಿ ಷೇರುಗಳು 25 ರಷ್ಟು ರೂಪಾಯಿ 2,763.85 ರೂ., ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ರೂ. 76 ರಷ್ಟು ಏರಿಕೆಯಾಗಿ 7,485.00 ರೂ. , ನೆಸ್ಲೆ ಷೇರುಗಳು 165 ರೂ.ಗಳ ಏರಿಕೆಯೊಂದಿಗೆ 18,897.95 ಕ್ಕೆ ಪ್ರಾರಂಭವಾಯಿತು.

ಇಳಿಕೆಗೊಂಡ ಷೇರುಗಳು

ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು 8 ರೂಪಾಯಿ ಇಳಿಕೆಯಾಗಿ 735.80 ರೂಪಾಯಿಗೆ ಆರಂಭವಾಯಿತು. ಟಾಟಾ ಸ್ಟೀಲ್ ನ ಷೇರುಗಳು ಸುಮಾರು 10 ರೂ. ಕುಸಿದು 1,494.20 ಕ್ಕೆ ಪ್ರಾರಂಭವಾದವು. ಟಾಟಾ ಮೋಟಾರ್ಸ್ ನ ಷೇರುಗಳು 295 ರೂಪಾಯಿಗೆ ಇಳಿಕೆಯಾಗಿದ್ದು, ವಿಪ್ರೋ ಷೇರುಗಳು ರೂ. 630.90 ಕ್ಕೆ ಪ್ರಾರಂಭವಾದವು. ಐಸಿಐಸಿಐ ಬ್ಯಾಂಕ್‌ನ ಷೇರುಗಳು ಸುಮಾರು 697.10 ರೂ. ಆರಂಭವಾಗಿದೆ.

ಎಚ್‌ಡಿಎಫ್‌ಸಿ ಷೇರು ಜಿಗಿತ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಚ್‌ಡಿಎಫ್‌ಸಿ ಹೊಸ ಕ್ರೆಡಿಟ್ ಕಾರ್ಡುಗಳ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಸಡಿಲಿಸಿದ ನಂತರ ಆಗಸ್ಟ್ 18 ರಂದುಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಬೆಲೆಯು ಶೇಕಡ 3ರಷ್ಟು ಏರಿಕೆಯಾಗಿದೆ.

ಆರ್‌ಬಿಐ ಹೊಸ ಕ್ರೆಡಿಟ್ ಕಾರ್ಡ್‌ಗಳ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿದೆ. ಡಿಜಿಟಲ್ 2.0 ರ ಅಡಿಯಲ್ಲಿ ಯೋಜಿಸಲಾದ ಡಿಜಿಟಲ್ ಬಿಸಿನೆಸ್‌ನ ಎಲ್ಲಾ ಹೊಸ ಲಾಂಚ್‌ಗಳ ಮೇಲಿನ ನಿರ್ಬಂಧಗಳು ಆರ್‌ಬಿಐನ ಮುಂದಿನ ಪರಿಶೀಲನೆಯವರೆಗೂ ಮುಂದುವರಿಯುತ್ತದೆ ಎಂದು ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಚಿನ್ನದ ಬೆಲೆ ಏರಿಕೆ
ಕೋವಿಡ್-19 ಡೆಲ್ಟಾ ಹೊಸ ರೂಪಾಂತರದ ಹರಡುವಿಕೆಯಿಂದ ಆರ್ಥಿಕ ಕುಸಿತದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯು ಚಿನ್ನದ ಬೆಲೆಯನ್ನು ಬುಧವಾರ ಏರಿಕೆ ಮಾಡಿದೆ. ಇದು ಅಪಾಯಕಾರಿ ಸ್ವತ್ತುಗಳ ಕಡೆಗೆ ಭಾವನೆಯನ್ನು ಕುಗ್ಗಿಸಿತು, ಹಳದಿ ಲೋಹದ ಮೇಲಿನ ಹೂಡಿಕೆ ಮನೋಭಾವ ಹೆಚ್ಚಿಸಿದೆ.ರೂಪಾಯಿ ಬೆಲೆ ಏರಿಕೆ

ಭಾರತೀಯ ರೂಪಾಯಿ ಬುಧವಾರ ಡಾಲರ್‌ಗೆ 74.31 ರಷ್ಟು ಏರಿಕೆಗೊಂಡಿದೆ. ಡಾಲರ್ ಎದುರು ರೂಪಾಯಿ 5 ಪೈಸೆ ಬಲದೊಂದಿಗೆ 74.31 ರೂ. ಆಗಿದ್ದು, ಅದೇ ಸಮಯದಲ್ಲಿ, ಮಂಗಳವಾರ ರೂಪಾಯಿ 10 ಪೈಸೆ ಬಲಗೊಂಡು ಡಾಲರ್ ಎದುರು 74.35 ರೂ. ತಲುಪಿದೆ.

ಕಳೆದ 6 ದಿನಗಳ ರೂಪಾಯಿ ಮಟ್ಟ
ಮಂಗಳವಾರ, ಡಾಲರ್ ಎದುರು ರೂಪಾಯಿ 10 ಪೈಸೆ ಬಲದೊಂದಿಗೆ ರೂ 74.35 ಕ್ಕೆ ಕೊನೆಗೊಂಡಿತು.
ಶುಕ್ರವಾರ, ಡಾಲರ್ ಎದುರು ರೂಪಾಯಿ 1 ಪೈಸೆ ಬಲಗೊಂಡು 74.25 ರೂ.
ಗುರುವಾರ, ಡಾಲರ್ ಎದುರು ರೂಪಾಯಿ 18 ಪೈಸೆ ಏರಿಕೆ ಕಂಡು 74.26 ರೂ.
ಬುಧವಾರ, ಡಾಲರ್ ಎದುರು ರೂಪಾಯಿ 1 ಪೈಸೆ ದೌರ್ಬಲ್ಯದೊಂದಿಗೆ 74.43 ಮಟ್ಟದಲ್ಲಿ ಕೊನೆಗೊಂಡಿತು.
ಮಂಗಳವಾರ, ಡಾಲರ್ ಎದುರು ರೂಪಾಯಿ 16 ಪೈಸೆ ದೌರ್ಬಲ್ಯದೊಂದಿಗೆ 74.42 ರ ಮಟ್ಟದಲ್ಲಿ ಕೊನೆಗೊಂಡಿತು.
ಸೋಮವಾರ, ಡಾಲರ್ ಎದುರು ರೂಪಾಯಿ 10 ಪೈಸೆ ದುರ್ಬಲಗೊಂಡು 74.26 ರೂ.

English summary

Sensex Up 250 Points: Nify Rise 70 Points

Sensex was up 256.15 points or 0.46% at 56048.42, and the Nifty was up 71.70 points or 0.43% at 16686.30.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X