ಭಾರತದ ಷೇರುಪೇಟೆ ಸೋಮವಾರ ಇಂಟ್ರಾಡೇ ಲಾಭಗಳನ್ನು ಅಳಿಸಿಹಾಕಿತು. ಆದ್ರೆ ಆಟೋ, ಬ್ಯಾಂಕ್, ಮೆಟಲ್, ಪವರ್ ಮತ್ತು ರಿಯಾಲ್ಟಿ ಸ್ಟಾಕ್‌ಗಳ ಬೆಂಬಲದೊಂದಿಗೆ ಅಕ್ಟೋಬರ್ 11 ರಂದು ಹೊಸ ದಾಖಲೆಯ ಗರಿಷ್ಠ ಮಟ್ಟದಲ್ಲಿ ಮುಚ್ಚಲ್ಪಟ್ಟವು.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ 76.72 ಪಾಯಿಂಟ್ಸ್ ಅಥವಾ ಶೇಕಡಾ 0.13ರಷ್ಟು ಏರಿಕೆಗೊಂಡು 60,135.78 ಪಾಯಿಂಟ್ಸ್ ತಲುಪಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50.80 ಪಾಯಿಂಟ್ಸ್ ಅಥವಾ ಶೇಕಡಾ 0.28ರಷ್ಟು ಹೆಚ್ಚಾಗಿ 17,946.00 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಅಂತ್ಯದಲ್ಲಿ 1814 ಷೇರುಗಳು ಏರಿಕೆಗೊಂಡರೆ, 1375 ಷೇರುಗಳು ಕುಸಿದವು ಮತ್ತು 141 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಪ್ರಮುಖ ಷೇರುಗಳು
ಟಾಟಾ ಮೋಟಾರ್ಸ್, ಕೋಲ್ ಇಂಡಿಯಾ, ಮಾರುತಿ ಸುಜುಕಿ, ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಪವರ್ ಗ್ರಿಡ್ ಕಾರ್ಪ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿವೆ.
ಬಾಟಾ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ವೋಲ್ಟಾಸ್, ಡಿಬಿ ರಿಯಾಲ್ಟಿ ಸೇರಿದಂತೆ 350ಕ್ಕೂ ಕಂಪನಿಯ ಷೇರುಗಳು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ಟಾಟಾ ಮೋಟಾರ್ಸ್ ಕ್ಯೂ2 ಮಾರಾಟ ಇಳಿಕೆ
ಸೆಪ್ಟೆಂಬರ್ 2021 ಕ್ಕೆ ಕೊನೆಗೊಳ್ಳುವ ಎರಡನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಚಿಲ್ಲರೆ ಮಾರಾಟವನ್ನು ವರದಿ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ 92,710 ವಾಹನಗಳು ಮಾರಾಟಗೊಂಡಿದ್ದು, ಕಳೆದ ವರ್ಷ ಕ್ಯೂ 2 ರಲ್ಲಿ ಮಾರಾಟವಾದ 1,13,569 ವಾಹನಗಳಿಗಿಂತ ಶೇಕಡಾ 18.4ರಷ್ಟು ಕಡಿಮೆಯಾಗಿದೆ.
ಉತ್ತರ ಅಮೆರಿಕಾ (ಶೇಕಡಾ 15.6), ಚೀನಾ (ಶೇಕಡಾ 6.3 ), ಯುರೋಪ್ (ಶೇಕಡಾ 17.0 ), ಮತ್ತು ಯುಕೆ (47.6 ಪ್ರತಿಶತದಷ್ಟು) ಸೇರಿದಂತೆ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಚಿಲ್ಲರೆ ವ್ಯಾಪಾರವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಆದರೆ ವಿದೇಶಿ ಮಾರುಟ್ಟೆಯಲ್ಲಿ ಶೇಕಡಾ 10ರಷ್ಟು ಮಾರಾಟ ಹೆಚ್ಚಾಗಿದೆ.
ಟಾಟಾ ಮೋಟಾರ್ಸ್ 52 ವಾರಗಳ ಗರಿಷ್ಠ ಮಟ್ಟವಾದ 420.75 ರೂ.ಗಳನ್ನು ಮುಟ್ಟಿತು ಮತ್ತು ಬಿಎಸ್‌ಇಯಲ್ಲಿ ರೂ. 32.65 ರೂಪಾಯಿ ಅಥವಾ ಶೇ. 8.53 ರಷ್ಟು ಏರಿಕೆಯಾಗಿ ರೂ 415.60 ಕ್ಕೆ ದಿನದ ವಹಿವಾಟು ಮುಗಿಸಿತು.
ಇಳಿಕೆಗೊಂಡ ಪ್ರಮುಖ ಷೇರುಗಳು
ಟಿಸಿಎಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ವಿಪ್ರೊ ದೊಡ್ಡ ನಷ್ಟ ಅನುಭವಿಸಿದ ಷೇರುಗಳಾಗಿವೆ. ಐಟಿ ಸೂಚ್ಯಂಕವು 3 ಪ್ರತಿಶತದಷ್ಟು ಕುಸಿದಿದ್ದು, ಆಟೋ, ಬ್ಯಾಂಕ್, ಲೋಹ, ವಿದ್ಯುತ್ ಮತ್ತು ರಿಯಾಲ್ಟಿ ಸೂಚ್ಯಂಕಗಳು ಶೇಕಡಾ 1 ರಿಂದ 2.5ರಷ್ಟು ಸೇರಿಸಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.5ರಷ್ಟು ಏರಿಕೆಯಾಗಿದೆ.
ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?
ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.


Click it and Unblock the Notifications