For Quick Alerts
ALLOW NOTIFICATIONS  
For Daily Alerts

ಟಾಪ್ 10 ಕಂಪನಿಗಳ ಪೈಕಿ 7 ಕಂಪನಿಗಳಿಗೆ 1.34 ಟ್ರಿಲಿಯನ್ ನಷ್ಟ!

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ(ಸೆ. 25ರ ತನಕ) 7 ಕಂಪನಿಗಳ ಮೌಲ್ಯ ಭಾರಿ ಕುಸಿತ ಕಂಡಿದ್ದು, 3 ಕಂಪನಿಗಳು ಮೌಲ್ಯ ಹೆಚ್ಚಿಸಿಕೊಂಡಿವೆ. 7 ಕಂಪನಿಗಳು 1,34,139.14 ಕೋಟಿ ರು ಕಳೆದುಕೊಂಡಿವೆ. ದೇಶದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ವಾರ ಭಾರಿ ನಷ್ಟ ಅನುಭವಿಸಿದ ಸಂಸ್ಥೆ ಎನಿಸಿಕೊಂಡಿದೆ.

ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 741.87 ಪಾಯಿಂಟ್‌ಗಳು ಅಥವಾ ಶೇಕಡಾ 1.26 ಇಳಿಕೆ ಕಂಡಿದೆ. ಹಿಂದೂಸ್ತಾನ್ ಯೂನಿ ಲಿವರ್ ಲಿಮಿಟೆಡ್, ಬಜಾಜ್ ಫೈನಾನ್ಸ್ ಹಾಗೂ ಐಟಿಸಿ ಹೊರತಪಡಿಸಿ ಟಾಪ್ 10 ಪಟ್ಟಿಯಲ್ಲಿರುವ ಮಿಕ್ಕ ಎಲ್ಲಾ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಭಾರಿ ಕುಸಿತ ಕಂಡಿದೆ.

ಅ.1ರಿಂದ 5ಜಿ ಮೊಬೈಲ್ ಸೇವೆ ಆರಂಭ, ಏನು? ಎತ್ತ? ಎಲ್ಲಿ?ಅ.1ರಿಂದ 5ಜಿ ಮೊಬೈಲ್ ಸೇವೆ ಆರಂಭ, ಏನು? ಎತ್ತ? ಎಲ್ಲಿ?

ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾಗಿಲ್ಲದ ಕಾರಣ 7 ಕಂಪನಿಗಳು ನಷ್ಟ ಅನುಭವಿಸಿವೆ. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಟಾಪ್ 10ರಲ್ಲಿ ಉಳಿದುಕೊಂಡಿದೆ

ಟಾಪ್ 10ರಲ್ಲಿ ಉಳಿದುಕೊಂಡಿದೆ

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ, ಆಮದು -ರಫ್ತು ನಿರ್ಬಂಧ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ರಿಲಯನ್ಸ್ ಇಂಡಸ್ಟ್ರೀಸ್, ಅತಿ ದೊಡ್ಡ ಐಟಿ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, , ಇನ್ಫೋಸಿಸ್ ಹಾಗೂ ಎಚ್ ಡಿ ಎಫ್ ಸಿ ನಷ್ಟ ಅನುಭವಿಸಿವೆ. ಅದಾನಿ ಸಂಸ್ಥೆ ಟಾಪ್ 10ರಲ್ಲಿ ಉಳಿದುಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 40,558.31 ಕೋಟಿ ರು ಕುಸಿತ ಕಂಡು 16,50,307.10 ಕೋಟಿ ರು ತಲುಪಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 9,458.65 ಕೋಟಿ ರು ಇಳಿಕೆ ಕಂಡು 9,458.65 ಕೋಟಿ ರು ಮೌಲ್ಯಕ್ಕೆ ತಲುಪಿದೆ. ಇನ್ಫೋಸಿಸ್ ಸಂಸ್ಥೆ 5,848.78 ಕೋಟಿ ರು ಇಳಿಕೆ ಕಂಡು 5,74,463.54 ಕೋಟಿ ರು ಮೌಲ್ಯಕ್ಕೇರಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್
 

ಎಚ್ ಡಿ ಎಫ್ ಸಿ ಬ್ಯಾಂಕ್

ಎಚ್ ಡಿ ಎಫ್ ಸಿ ಬ್ಯಾಂಕ್ 25,544.89 ಕೋಟಿ ರು ಇಳಿಕೆ ಕಂಡು 8,05,694.57 ಕೋಟಿ ರು ತಲುಪಿದೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 9,950.94 ಕೋಟಿ ರು ವ್ಯತ್ಯಾಸ ಕಂಡು 4,91,255.25 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕ್ 18,147.49 ಕೋಟಿ ರು ಕುಸಿತ ಕಂಡು 6,14,962.99 ಕೋಟಿ ರು ತಲುಪಿದೆ

ಅದಾನಿ ಟ್ರಾನ್ಸ್ ಮಿಷನ್

ಅದಾನಿ ಟ್ರಾನ್ಸ್ ಮಿಷನ್

ಆಗಸ್ಟ್ 30ರಂದು ಷೇರುಪೇಟೆಗೆ ಎಂಟ್ರಿ ಕೊಟ್ಟ ಅದಾನಿ ಟ್ರಾನ್ಸ್ ಮಿಷನ್ ಟಾಪ್ 10 ಅತಿ ಹೆಚ್ಚು ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲಿ ಉಳಿದುಕೊಂಡಿದೆ. ಕಳೆದ ವಾರ ಅದಾನಿ ಕಂಪನಿ 24,630.08 ಕೋಟಿ ರು ಇಳಿಕೆ ಕಂಡು 4,31,662.20 ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್

ಹಿಂದೂಸ್ತಾನ್ ಯೂನಿಲಿವರ್

ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 35,467.08 ಕೋಟಿ ರು ಏರಿಕೆ ಕಂಡು 6,29,525.99 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ ಸಂಸ್ಥೆ 13,128.73 ಕೋಟಿ ರು ಏರಿಕೆ ಕಂಡು 4,54,477.56 ಕೋಟಿ ರು ಮುಟ್ಟಿದೆ. ಐಟಿಸಿ ಮಾರುಕಟ್ಟೆ ಮೌಲ್ಯ 20, 381.61 ಕೋಟಿ ರು ಹೆಚ್ಚಳವಾಗಿ 4,29,198.61 ಕೋಟಿ ರು ತಲುಪಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್, ಅದಾನಿ ಟ್ರಾನ್ಸ್ ಮಿಷನ್ ಹಾಗೂ ಐಟಿಸಿ

English summary

Seven of top-10 firms lose Rs 1.34 trn in mcap; RIL biggest laggard

The combined market valuation of seven of the 10 most valued firms eroded by Rs 1,34,139.14 crore last week, with Reliance Industries taking the biggest hit
Story first published: Sunday, September 25, 2022, 11:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X