ಎರಡು ದಿನಗಳ (ಬುಧವಾರ, ಶುಕ್ರವಾರ- ರಾಮನವಮಿ ಪ್ರಯುಕ್ತ ಗುರುವಾರ ಕಾರ್ಯ ನಿರ್ವಹಿಸಿರಲಿಲ್ಲ.) ವಹಿವಾಟಿನಲ್ಲಿ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 4,88,033.66 ಕೋಟಿ ಕೊಚ್ಚಿಹೋಗಿದೆ. ಕೊರೊನಾ ತನ್ನ ಹಿಡಿತವನ್ನು ದಿನೇ ದಿನೇ ಬಿಗಿಗೊಳಿಸುತ್ತಿದ್ದು, ಸೋಂಕಿತರು- ಮೃತಪಟ್ಟವರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದಂತೆ ಈಕ್ವಿಟಿ ಷೇರುಗಳ ಮಾರಾಟ ಒತ್ತಡ ಕಂಡುಬಂದಿದೆ.
ಸೆನ್ಸೆಕ್ಸ್ ಸೂಚ್ಯಂಕವು ಶುಕ್ರವಾರ 674.36 ಪಾಯಿಂಟ್ ಕುಸಿತ ಕಂಡು, ದಿನಾಂತ್ಯಕ್ಕೆ 27,590.95 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿದೆ. "ಕೊರೊನಾ ವೈರಾಣು ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ಬ್ಯಾಂಕಿಂಗ್ ವಲಯದ ಬಗ್ಗೆ ಮೂಡೀಸ್ ವರದಿ ಈ ಎರಡೂ ಅಂಶಗಳು ಹೂಡಿಕೆದಾರರ ಭಾವನೆಗಳಿಗೆ ಪೆಟ್ಟು ನೀಡಿವೆ" ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಡುತ್ತಾರೆ.

ಸೆನ್ಸೆಕ್ಸ್ ನಲ್ಲಿ ಆಕ್ಸಿಸ್ ಬ್ಯಾಂಕ್ ಅತಿ ಹೆಚ್ಚು ನಷ್ಟ ಅನುಭವಿಸಿದ ಷೇರು. ಆ ನಂತರ ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟೈಟಾನ್, ಎಸ್ ಬಿಐ, ಮಾರುತಿ ಹಾಗೂ ಎಚ್ ಡಿಎಫ್ ಸಿ ನಷ್ಟ ಅನುಭವಿಸಿವೆ. ಇನ್ನು ಸನ್ ಫಾರ್ಮಾ, ಐಟಿಸಿ, ಒಎನ್ ಜಿಸಿ, ಎಂ ಅಂಡ್ ಎಂ ಮತ್ತು ಟೆಕ್ ಮಹೀಂದ್ರಾ ಷೇರುಗಳು ಏರಿಕೆ ಕಂಡಿವೆ.


Click it and Unblock the Notifications