ಇತ್ತೀಚೆಗೆ ಸೆಲೆಬ್ರೆಟಿಗಳು ಅತೀ ದುಬಾರಿ ಕಾರುಗಳನ್ನು ಖರೀದಿ ಮಾಡುವ ಸುದ್ದಿ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ ಕೆಜಿಎಫ್ ಸ್ಟಾರ್ ಯಶ್ ಸುಮಾರು 4 ಕೋಟಿ ರೂಪಾಯಿಯ ಎಸ್‌ಯುವಿ ಖರೀದಿಸಿದ್ದಾರೆ. ಈಗ ಅತೀ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾದ ಶಿಖರ್ ಧವನ್ ಕೂಡಾ ಅತೀ ದುಬಾರಿ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಆದರೆ ಈಗಾಗಲೇ ಶಿಖರ್ ಧವನ್ ಬಳಿ ಹಲವಾರು ದುಬಾರಿ ಕಾರುಗಳು ಇದೆ.
ತನ್ನ ದುಬಾರಿ ಕಾರುಗಳ ಕಲೆಕ್ಷನ್‌ಗೆ ಲ್ಯಾಂಡ್ ರೇಂಜ್ ರೋವರ್ ಎಸ್‌ಯುವಿಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ತನ್ನ ಈ 4 ಕೋಟಿ ರೂಪಾಯಿಯ ಕಾರಿನ ವಿಡಿಯೋವನ್ನು ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಶಿಖರ್ ಧವನ್ ಹಂಚಿಕೊಂಡಿದ್ದಾರೆ. ರೇಂಜ್ ರೋವರ್ ಕಾರಿನ ಈ ವಿಡಿಯೋವನ್ನು ಹಲವಾರು ಬಾಲಿವುಡ್ ನಟಿಯರು ಸೇರಿದಂತೆ ಸೆಲೆಬ್ರಿಟಿಗಳು ಲೈಕ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಶಿಖರ್ ಧವನ್ ಯಾವ ಮಾಡೆಲ್‌ನ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ ಎಂಬ ಮಾಹಿತಿ ಇನ್ನು ತಿಳಿದಿಲ್ಲ. ರೇಂಜ್ ರೋವರ್ ಮಾಡೆಲ್‌ಗಳ ಬೆಲೆಯು ಕನಿಷ್ಠ 3.5 ಕೋಟಿ ರೂಪಾಯಿಯಿಂದ 4 ಕೋಟಿ ರೂಪಾಯಿ ಆಗಿದೆ. ಹೊಚ್ಚಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಶಿಖರ್ ಧವನ್ ಮರ್ಸಿಡಿಸ್-ಬೆನ್ಜ್ ಜಿಎಲ್-ಕ್ಲಾಸ್ ಮತ್ತು ಬಿಎಂಡಬ್ಲ್ಯು ಎಂ8 ಅನ್ನು ಕೂಡಾ ಹೊಂದಿದ್ದಾರೆ.
ದುಬಾರಿ ಕಾರು ಖರೀದಿ ಮಾಡಿದವರ ಪಟ್ಟಿ
ಕೆಜಿಎಸ್, ರಾಮಚಾರಿ ಸಿನಿಮಾದ ಮೂಲಕ ಜನಪ್ರಿಯತೆಯನ್ನು ಪಡೆದಿರುವ ಯಶ್ ಕಳೆದ ನಾಲ್ಕೈದು ದಿನಗಳ ಹಿಂದೆ ದುಬಾರಿಯಾದ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಈ ಎಸ್‌ಯುವಿ ಬೆಲೆಯು ಸುಮಾರು ನಾಲ್ಕು ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಕಾರಿನ ಮುಂದೆ ನಿಂತು ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬ ಫೋಟೋಗೆ ಫೋಸ್ ನೀಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜನಪ್ರಿಯ ಭಾರತೀಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಈಗ ಅತೀ ದುಬಾರಿಯಾದ, ಅತೀ ವೇಗವಾದ ಎಸ್‌ಯುವಿ ಲ್ಯಾಂಬೋರ್ಗಿನಿ ಉರುಸ್ ಎಸ್ ಅನ್ನು ಖರೀದಿ ಮಾಡಿದ್ದಾರೆ. ಈ ಕ್ರಿಕೆಟ್ ದಿಗ್ಗಜನ ಗ್ಯಾರೇಜ್‌ನಲ್ಲಿ ಈಗಾಗಲೇ ಹಲವಾರು ದುಬಾರಿ ಕಾರುಗಳು ಇದೆ. ಭಾರತದಲ್ಲಿನ ಇತ್ತೀಚಿನ ಲ್ಯಾಂಬೋರ್ಗಿನಿಗಳಲ್ಲಿ ಲ್ಯಾಂಬೋರ್ಗಿನಿ ಉರುಸ್ ಎಸ್ ಕೂಡಾ ಒಂದಾಗಿದೆ.
ಇತ್ತೀಚೆಗೆ ನಟಿ ಕಿಯಾರಾ ಅಡ್ವಾಣಿ 2.69 ಕೋಟಿ ರೂಪಾಯಿ ಮೌಲ್ಯದ ಹೊಸ ಮರ್ಸಿಡಿಸ್-ಮೇಬ್ಯಾಕ್ ಎಸ್580 ಐಷಾರಾಮಿ ಸೆಡಾನ್ ಖರೀದಿಸಿದ್ದಾರೆ. ಭೂಲ್ ಭೂಲೈಯಾ 2 ಸ್ಟಾರ್ ಕಿಯಾರಾ ಅಡ್ವಾಣಿ ಈಗಾಗಲೇ ತನ್ನ ದುಬಾರಿ ಕಾರು ಸಂಗ್ರಹಣೆಗೆ ಹೆಸರುವಾಸಿಯಾಗಿದ್ದಾರೆ, ಈಗ ತನ್ನ ಗ್ಯಾರೇಜ್‌ನಲ್ಲಿ ಮರ್ಸಿಡಿಸ್-ಮೇಬ್ಯಾಕ್ S580 ಅನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.
ಅಜಯ್ ದೇವ್‌ಗನ್ ಇತ್ತೀಚೆಗೆ ತನ್ನ ಈ ಕಾರುಗಳ ಸಂಗ್ರಹಕ್ಕೆ ಹೊಸ ಸೇರ್ಪಡೆಯನ್ನು ಮಾಡಿಕೊಂಡಿದ್ದಾರೆ. ವರದಿಯ ಪ್ರಕಾರ ನಟ ಅಜಯ್ ದೇವ್‌ಗನ್ ಸುಮಾರು 1.95 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ i7 ಐಷಾರಾಮಿ ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ.
ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಈ ಹಿಂದೆ ಅತೀ ದುಬಾರಿ ಎಸ್‌ಯುವಿಯನ್ನು ಆಮದು ಮಾಡಿಕೊಂಡಿದ್ದಾರೆ. ನಿಸ್ಸಾನ್‌ನ ಈ ಪಟ್ರೋಲ್ ಎಸ್‌ಯುವಿ ಬುಲೆಟ್ ಪ್ರೂಫ್ ಅನ್ನು ಹೊಂದಿದ್ದು, ಇದು ಈವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗದ ಎಸ್‌ಯುವಿ ಆಗಿದೆ. ಅತೀ ದುಬಾರಿ ಎಸ್‌ಯುವಿಗಳಲ್ಲಿ ಇದು ಒಂದಾಗಿದೆ.


Click it and Unblock the Notifications