ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆದ ಶೋಪಿಫೈ ತನ್ನ ಸಂಸ್ಥೆಯಲ್ಲಿ ಶೇಕಡ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಸಜ್ಜಾಗಿದೆ. ಅಂದರೆ ಶೋಪಿಫೈ ಸುಮಾರು 2000 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಲಾಗುವುದು. ಅಮೆರಿಕದ ಬಹುರಾಷ್ಟ್ರೀಯ ಸಂಸ್ಥೆಯಾದ ಫ್ಲೆಕ್ಸ್‌ಪೋರ್ಟ್ ಶಾಪಿಫೈ ಲಾಜಿಸ್ಟಿಕ್ಸ್ ಅನ್ನು ಖರೀದಿಸಲಿದೆ ಎಂದು ಕಂಪನಿಯು ಘೋಷಿಸಿದೆ.
"ಶಾಪಿಫೈ ಶೇಕಡ 20ರಷ್ಟು ಗಾತ್ರವನ್ನು ತಗ್ಗಿಸಲಿದೆ. ಶಾಪಿಫೈ ಲಾಜಿಸ್ಟಿಕ್ ಅನ್ನು ಫ್ಲೆಕ್ಸ್‌ಪೋರ್ಟ್ ಖರೀದಿ ಮಾಡಲಿದೆ. ಇದರರ್ಥ ಇಂದು ನಿಮ್ಮ ಪೈಕಿ ಕೆಲವರು ಸಂಸ್ಥೆಯನ್ನು ತೊರೆಯಲಿದ್ದಾರೆ. ಈ ನಿರ್ಧಾರವು ನಿಮ್ಮ ಮೇಲೆ ಅಧಿಕ ಪ್ರಭಾವ ಉಂಟು ಮಾಡಲಿದೆ ಎಂದು ನನಗೆ ತಿಳಿದಿದೆ. ಈ ನಿರ್ಧಾರವನ್ನು ನಾನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ," ಎಂದು ಶಾಪಿಫೈ ಸಿಇಒ ಟೊಬಿ ಲೊಕ್ಟೆ ಹೇಳಿದ್ದಾರೆ.

ಈ ಉದ್ಯೋಗ ಕಡಿತಕ್ಕೆ ಒಳಗಾದ ಶಾಪಿಫೈನಲ್ಲಿನ ಉದ್ಯೋಗಿಗಳಿಗೆ ಕನಿಷ್ಠ 16 ವಾರಗಳ ಪರಿಹಾರವನ್ನು ನೀಡಲಾಗುತ್ತದೆ. "ಇದೇ ಅವಧಿಗೆ ಆರೋಗ್ಯ ಪ್ರಯೋಜನ ಮತ್ತು ಉದ್ಯೋಗಿ ನೆರವು ಕಾರ್ಯಕ್ರಮಕ್ಕೆ (EAP) ಲಭ್ಯ ಇರಲಿದೆ. ನೀವು ಬಯಸಿದರೆ ನಾವು ಔಟ್‌ಪ್ಲೇಸ್‌ಮೆಂಟ್ ಸೇವೆಗಳನ್ನು ಸಹ ನೀಡುತ್ತೇವೆ. ನಾವು ಒದಗಿಸಿದ ಎಲ್ಲಾ ಕಚೇರಿಗೆ ಸೇರಿದ ವಸ್ತುಗಳನ್ನು ನೀವೇ ಇರಿಸಿಕೊಳ್ಳಬಹುದಾಗಿದೆ," ಎಂದು ಶಾಪಿಫೈ ಸಿಇಒ ಟೊಬಿ ಲೊಕ್ಟೆ ಗುರುವಾರ ತಡವಾಗಿ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ನಾವು ಕಾನೂನಾತ್ಮಕವಾಗಿ ಲ್ಯಾಪ್‌ಟಾಪ್ ಅನ್ನು ಹಿಂದಕ್ಕೆ ಪಡೆಯಬೇಕಾಗುತ್ತದೆ. ಆದರೆ ಆದರೆ ನಾವು ಉದ್ಯೋಗಿಗಳು ಹೊಸ ಲ್ಯಾಪ್‌ಟಾಪ್ ತೆಗೆದುಕೊಳ್ಳುವ ಬದಲಾಗಿ ಈ ಲ್ಯಾಪ್‌ಟಾಪ್ ಅನ್ನು ಇಟ್ಟುಕೊಳ್ಳಲು ಅನುವು ಮಾಡಿಕೊಡುತ್ತೇವೆ. ನೀವು ಉದ್ಯಮ ಮಾಡಲು ಬಯಸಿದರೆ, ನಿಮಗೆ ಶಾಪಿಫೈ ಪ್ಲ್ಯಾನ್‌ವ ಉಚಿತ ಆಕ್ಸಸ್ ಅನ್ನು ಹೊಂದಿರಲಿದ್ದೀರಿ," ಎಂದು ಕೂಡಾ ಸಿಇಒ ವಿವರಿಸಿದ್ದಾರೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಶಾಪಿಫೈ ಶೇಕಡ 10ರಷ್ಟು ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ. ಒಟ್ಟಾಗಿ ಸುಮಾರು ಶೇಕಡ 1000ದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆದ್ದರಿಂದಾಗಿ ಇದು ಎರಡನೇ ಹಂತದ ಉದ್ಯೋಗ ಕಡಿತವಾಗಿದೆ. ಇನ್ನು ಹಲವಾರು ಸಂಸ್ಥೆಗಳು ಈಗಾಗಲೇ ಎರಡನೇ ಮೂರನೇ ಹಂತದ ಉದ್ಯೋಗ ಕಡಿತವನ್ನು ಮಾಡಿದೆ.
2016ರಲ್ಲಿ 1,900ರಷ್ಟಿದ್ದ ಶಾಪಿಫೈನಲ್ಲಿ ಉದ್ಯೋಗಿಗಳ ಸಂಖ್ಯೆಯು 2021ಕ್ಕೆ 10000ಕ್ಕೆ ಏರಿಕೆಯಾಗಿದೆ. ಆದರೂ ಅಂತ್ಯದಲ್ಲಿ ಯಾವುದೇ ಫಲ ಲಭ್ಯವಾಗಿಲ್ಲ ಎಂದು ಶಾಪಿಫೈ ಸಿಇಒ ಟೊಬಿ ಲೊಕ್ಟೆ ಹೇಳಿದ್ದಾರೆ.
ಮಿಶೋದಲ್ಲಿಯೂ ಉದ್ಯೋಗ ಕಡಿತ
ಇ-ಕಾಮರ್ಸ್ ವ್ಯವಹಾರಗಳಿಗೆ ಸರಿಯಾದ ಸಮಯವಿಲ್ಲ ಎಂದು ತೋರುತ್ತಿದೆ. ಮಾರಾಟ ಕುಸಿತವಾಗುತ್ತಿರುವ ನಡುವೆ, ವೆಚ್ಚಗಳು ಹೆಚ್ಚಳವಾಗುತ್ತಿರುವ ನಡುವೆ ಅದನ್ನು ನಿರ್ವಹಣೆ ಮಾಡಲು ಅಮೆಜಾನ್‌ನಂತಹ ದೈತ್ಯ ಸಂಸ್ಥೆಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದಾರೆ. ಅದೇ ಸಂದರ್ಭದಲ್ಲಿ ಸಣ್ಣ ಕಂಪನಿಗಳು ವೆಚ್ಚವನ್ನು ಕಡಿತ ಮಾಡುವ ಮಾರ್ಗವನ್ನು ಹಿಡಿದಿದೆ.
ಇ-ಕಾಮರ್ಸ್ ಬ್ರ್ಯಾಂಡ್‌ಗಳು ಕೂಡಾ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಮೀಶೋ ಮತ್ತು ಶಾಪಿಫೈ ಕೂಡಾ ಉದ್ಯೋಗ ಕಡಿತ ಮಾಡುತ್ತಿದೆ. ಮೀಶೋ ಸುಮಾರು 250 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಅಂದರೆ ಮೀಶೋ ಸುಮಾರು ಶೇಕಡ 15ರಷ್ಟು ಉದ್ಯೋಗ ಕಡಿತವನ್ನು ಮಾಡಿದೆ. ವೆಚ್ಚ ಕಡಿತವನ್ನು ಮಾಡಿ, ಲಾಭವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಂಡಿದೆ. ಈಗಾಗಲೇ ಅಮೆಜಾನ್, ಇನ್ಫೋಸಿಸ್ ಸೇರಿದಂತೆ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ.


Click it and Unblock the Notifications