ಭಾರತದ ಮಲ್ಟಿ- ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ (MCX) ಮಂಗಳವಾರ ಬೆಳ್ಳಿ ಲೋಹವು 'ಚಿನ್ನದಂಥ' ದಾಖಲೆ ಬರೆದಿದೆ. ಆಗಸ್ಟ್/ಸೆಪ್ಟೆಂಬರ್ ಗೆ ಕೊನೆಯಾಗುವ ಕಾಂಟ್ರ್ಯಾಕ್ಟ್ ಗೆ ದಾಖಲೆಯ 140 ಟನ್ ಗೆ ಹತ್ತಿರ ಡೆಲಿವರಿ ಪಡೆಯಲಾಗಿದೆ. ಒಟ್ಟಾರೆ 139.96 ಟನ್ ಬೆಳ್ಳಿಯು ಬೆಳ್ಳಿ (30 Kg) ಸೆಪ್ಟೆಂಬರ್ ಕಾಂಟ್ರ್ಯಾಕ್ಟ್, ಸಿಲ್ವರ್ ಮಿನಿ (5 Kg), ಸಿಲ್ವರ್ ಮೈಕ್ರೋ (1 Kg) ಆಗಸ್ಟ್ ಕಾಂಟ್ರ್ಯಾಕ್ಟ್ ಎಂಸಿಎಕ್ಸ್ ನಲ್ಲಿ ಡೆಲಿವರಿ ಆಗಿದೆ ಎಂದು ತಿಳಿಸಲಾಗಿದೆ.
ಬೆಳ್ಳಿ (30 Kg) ಸೆಪ್ಟೆಂಬರ್ ಕಾಂಟ್ರ್ಯಾಕ್ಟ್ 127.50 ಟನ್ ಬೆಳ್ಳಿ ಡೆಲಿವರಿ ಆಗಿದೆ. ಇದು ಹನ್ನೆರಡು ವರ್ಷದಲ್ಲೇ ಒಂದು ಕಾಂಟ್ರ್ಯಾಕ್ಟ್ ನಲ್ಲಿನ ಡೆಲಿವರಿಯ ದಾಖಲೆ ಆಗಿದೆ. ಇನ್ನು ಈಚೆಗೆ ಸಿಲ್ವರ್ ಮಿನಿ (5 Kg) ಹಾಗೂ ಮೈಕ್ರೋ ಕಾಂಟ್ರ್ಯಾಕ್ಟ್ (1 Kg) ಡೆಲಿವರಿ ಕಡ್ಡಾಯಗೊಳಿಸಲಾಯಿತು. ಅವುಗಳ ಡೆಲಿವರಿ 8.4 ಟನ್ ಹಾಗೂ 4.0 ಟನ್ ಆಗಿದೆ. ಮೌಲ್ಯ ಕ್ರಮವಾಗಿ 54.78 ಕೋಟಿ ಮತ್ತು 26.41 ಕೋಟಿ ಆಗಿದೆ.
ಪ್ರತಿ ದಿನದ ಬುಲಿಯನ್ ಫ್ಯೂಚರ್ಸ್ ವಹಿವಾಟು ಎಂಸಿಎಕ್ಸ್ ನಲ್ಲಿ ಏಳು ವರ್ಷದ ಗರಿಷ್ಠ ಮಟ್ಟವಾದ 50,226 ಕೋಟಿ ರುಪಾಯಿ ಮೊತ್ತವನ್ನು ಜುಲೈ 28, 2020ರಲ್ಲಿ ತಲುಪಿತ್ತು. ಆಗಸ್ಟ್ 2020ರಲ್ಲಿ ಬೆಳ್ಳಿಯ ಕಾಂಟ್ರ್ಯಾಕ್ಟ್ ವಹಿವಾಟು 17,574 ಕೋಟಿ ರುಪಾಯಿ ಆಗಿದೆ.

ಸಿಲ್ವರ್ ಸ್ಪಾಟ್ ಮಾರ್ಕೆಟ್ ಗಳಲ್ಲಿ ವಿಪರೀತ ಏರಿಳಿತ ಇದ್ದರೂ ಖರೀದಿದಾರರು ಹಾಗೂ ಮಾರಾಟಗಾರರಿಗೆ ಎಂಸಿಎಕ್ಸ್ ಮೇಲೆ ನಂಬಿಕೆ ಇದೆ. ದಾಖಲೆ ಪ್ರಮಾಣದ ಡೆಲಿವರಿ ಅದನ್ನ್ ಸೂಚಿಸುತ್ತದೆ. ಇದರ ಜತೆಗೆ ಹೊಸದಾಗಿ ಮೈಕ್ರೋ- ಮಿನಿ ಬೆಳ್ಳಿ ಡೆಲಿವರಿ ಕಡ್ಡಾಯ ಮಾಡಿರುವುದನ್ನು ಹೂಡಿಕೆದಾರರು ಒಪ್ಪಿಕೊಂಡಿರುವಂತಿದೆ. 1 ಕೇಜಿ ತೂಕದ ಬೆಳ್ಳಿಯ ಯೂನಿಟ್ ಇದ್ದು, ಈಗಾಗಲೇ ನಾಲ್ಕು ಅವಧಿಗೆ 22.58 ಟನ್ ಡೆಲಿವರಿ ಪಡೆಯಲಾಗಿದೆ ಎಂದು ಎಂಸಿಎಕ್ಸ್ ಎಂ.ಡಿ. ಹಾಗೂ ಸಿಇಒ ಪಿ.ಎಸ್. ರೆಡ್ಡಿ ತಿಳಿಸಿದ್ದಾರೆ.


Click it and Unblock the Notifications