For Quick Alerts
ALLOW NOTIFICATIONS  
For Daily Alerts

ಬೆಳ್ಳಿ ಬೆಲೆಯಲ್ಲಿ ಒಂದೇ ತಿಂಗಳಲ್ಲಿ 25% ಏರಿಕೆ: ಕೇಜಿಗೆ 51,000 ರುಪಾಯಿ

|

ಭಾರತೀಯ ಮಾರುಕಟ್ಟೆಯಲ್ಲಿ ಜೂನ್ 1ರ ಸೋಮವಾರ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದ್ದು, ಇತ್ತೀಚಿನ ಗಳಿಕೆಯನ್ನು ಮುಂದುವರಿಸಿದೆ. ಸೋಮವಾರದಂದು ಎಂಸಿಎಕ್ಸ್ ನಲ್ಲಿ ಬೆಳ್ಳಿ ಫ್ಯೂಚರ್ಸ್ 817 ರುಪಾಯಿ ಅಥವಾ 1.6 ಪರ್ಸೆಂಟ್ ಏರಿಕೆ ಕಂಡು, ಕೇಜಿಗೆ 51,000 ರುಪಾಯಿ ಮುಟ್ಟಿತು. ಕಳೆದ ಶುಕ್ರವಾರ ಕೇಜಿಗೆ 1500 ರುಪಾಯಿ ಏರಿಕೆ ಕಂಡಿತ್ತು ಬೆಳ್ಳಿ.

ವಿವಿಧ ದೇಶಗಳ ಆರ್ಥಿಕತೆಯು ಪುನರಾರಂಭ ಆದಂತೆ ಕೈಗಾರಿಕೆಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಬೆಲೆ ಏರಿಕೆ ಆಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಜಾಗತಿಕವಾಗಿ ಆರ್ಥಿಕತೆ ಪುನರಾರಂಭದ ಪ್ರಯತ್ನ ಶುರುವಾಗಿರುವುದರಿಂದ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಕೊರೊನಾ ಬಿಕ್ಕಟ್ಟಿನ ವೇಳೆಯಲ್ಲಿ ಚಿನ್ನಕ್ಕೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಬೆಲೆ ಕುಸಿತ ಕಂಡಿತ್ತು ಬೆಳ್ಳಿ. ಆದರೆ ನಂತರ ಬಹಳ ಬೇಗ ಚೇತರಿಕೆ ಕಂಡಿದೆ.

ಚಿನ್ನದ ಬೆಲೆ ಮತ್ತೆ ಏರಿಕೆ: ಬೆಳ್ಳಿ ಕೆಜಿಗೆ 50 ಸಾವಿರ ರುಪಾಯಿಕ್ಕಿಂತ ಹೆಚ್ಚುಚಿನ್ನದ ಬೆಲೆ ಮತ್ತೆ ಏರಿಕೆ: ಬೆಳ್ಳಿ ಕೆಜಿಗೆ 50 ಸಾವಿರ ರುಪಾಯಿಕ್ಕಿಂತ ಹೆಚ್ಚು

ಬೆಳ್ಳಿಯು ಮೇ ತಿಂಗಳಲ್ಲಿ ಎಂಸಿಎಕ್ಸ್ ನಲ್ಲಿ 23% ಗಳಿಕೆ ದಾಖಲಿಸಿದೆ. ಇದೇ ವೇಗವನ್ನು ಇನ್ನೂ ಕೆಲ ಸೆಷನ್ ಮುಂದುವರಿಸುವ ಅಂದಾಜಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಾರೆ. ಇನ್ನು ಚಿನ್ನದ MCX ಫ್ಯೂಚರ್ ಬೆಲೆ ಹತ್ತು ಗ್ರಾಮ್ ಗೆ 47,000 ರುಪಾಯಿ ಇದೆ.

ಬೆಳ್ಳಿ ಬೆಲೆಯಲ್ಲಿ ಒಂದೇ ತಿಂಗಳಲ್ಲಿ 25% ಏರಿಕೆ: ಕೇಜಿಗೆ 51,000 ರು.

ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಸೋಮವಾರ ಎರಡು ಪರ್ಸೆಂಟ್ ಏರಿಕೆ ಕಂಡು, ಪ್ರತಿ ಔನ್ಸ್ ಗೆ $ 18.20 ತಲುಪಿದೆ. ಫೆಬ್ರವರಿ 26ರಿಂದ ಈಚೆಗೆ ಇದು ಅತ್ಯಂತ ಗರಿಷ್ಠ ಮಟ್ಟ. ಇನ್ನು ಬೆಳ್ಳಿ ವಹಿವಾಟು ಏರಿಳಿತಗಳನ್ನು ಕಾಣಬಹುದಾದರೂ ಒಟ್ಟಾರೆ ಏರಿಕೆಯನ್ನೇ ದಾಖಲಿಸಬಹುದು ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ ತಜ್ಞರು.

English summary

Silver Gained 25 Percent In One Month: Price Of One Kg 51,000

Silver price on Monday crossed 51,000 in Indian market. It gained 25 percent in one month.
Story first published: Monday, June 1, 2020, 12:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X