ಕಳೆದ ವಾರ ಟಾಪ್ 10ರಲ್ಲಿ 6 ಕಂಪನಿಗೆ ಲಾಭ, RILಗೆ ಭರ್ಜರಿ ಬೆಳೆ

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ (ಆಗಸ್ಟ್ 14ರ ತನಕ) 6 ಕಂಪನಿಗಳ ಮೌಲ್ಯ ಹೆಚ್ಚಳ ಕಂಡಿದ್ದು, ಒಟ್ಟಾರೆ 1,56,247.35 ಕೋಟಿ ರು ಹೆಚ್ಚಳ ಕಂಡಿದೆ.

ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ ಪೈಕಿ ಅತಿ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅತಿ ಹೆಚ್ಚು ಲಾಭ ಗಳಿಸಿದೆ. ಇನ್ಫೋಸಿಸ್, ಎಚ್ಎಎಲ್ ಹಾಗೂ ಎಲ್ಐಸಿ ಹೆಚ್ಚಿನ ನಷ್ಟ ಅನುಭವಿಸಿವೆ.

ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ, ಆಮದು -ರಫ್ತು ನಿರ್ಬಂಧ, ಜಿಎಸ್ಟಿ ಸಭೆ, ಸಮ್ಮೇಳನ ನಂತರ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸವಾಗಿದೆ.

ಕಳೆದ ವಾರದಲ್ಲಿ 30 ಷೇರುಗಳ ಬಾಂಬೆ ಮಾರುಕಟ್ಟೆ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್ 1,074 ಅಂಕ ಅಥವಾ ಶೇಕಡ 1.83ರಷ್ಟು ಏರಿಕೆಯನ್ನು ಕಂಡಿದೆ. ನಿಫ್ಟಿ 300 ಅಂಕಗಳು ಅಥವಾ ಶೇ 1.95 ರಷ್ಟು ಏರಿಕೆ ಕಂಡಿತ್ತು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಅತಿ ಹೆಚ್ಚು ಮೌಲ್ಯಯುತ ಕಂಪನಿ

ಅತಿ ಹೆಚ್ಚು ಮೌಲ್ಯಯುತ ಕಂಪನಿ

ಅತಿ ಹೆಚ್ಚು ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ 66,772.08 ಕೋಟಿ ರು ಹೆಚ್ಚಳ ಕಂಡು 17,81,028.47 ಕೋಟಿ ರುಗೆ ಏರಿಕೆಯಾಗಿದೆ. ದೇಶದ ಅತಿ ದೊಡ್ಡ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯವು ರೂಪಾಯಿ 12,642.03 ಕೋಟಿರು ಏರಿಕೆ ಕಂದು 12,44,004.29 ಕೋಟಿ ರು ಗೆ ಏರಿಕೆಯಾಗಿದೆ.

 

ಎಚ್‌ಡಿಎಫ್‌ಸಿ ಬ್ಯಾಂಕ್‌

ಎಚ್‌ಡಿಎಫ್‌ಸಿ ಬ್ಯಾಂಕ್‌

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಈ ಹಿಂದಿನ ಮಾರುಕಟ್ಟೆ ಮೌಲ್ಯಕ್ಕೆ 32,346.90 ಕೋಟಿ ರೂಪಾಯಿ ಸೇರಿಸಿಕೊಂಡು 8,25,207.35 ಕೋಟಿ ರೂಪಾಯಿ ತಲುಪಿದೆ. ಐಸಿಐಸಿಐ ಬ್ಯಾಂಕ್ ಸಂಸ್ಥೆ ಮೌಲ್ಯ 25,467.37 ಕೋಟಿ ರು ಏರಿಕೆ ಕಂಡು 6,08,729.12 ಕೋಟಿ ರು ಆಗಿದೆ. ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯ 18,679.93 ಕೋಟಿ ರೂಪಾಯಿ ಇಳಿಕೆಯಾಗಿ 4,45,759.90 ಕೋಟಿ ರು ಗೆ ತಲುಪಿದೆ.

ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯ

ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯ

ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯವು ರೂಪಾಯಿ 339.04 ಕೋಟಿ ರೂಪಾಯಿ ಹೆಚ್ಚಳ ಕಂಡು 4,42,496.12 ಕೋಟಿ ರುಗೆ ಏರಿಕೆಯಾಗಿದೆ. ಎರಡನೇ ಅತಿದೊಡ್ದ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಕಂಪನಿಯ ಮಾರುಕಟ್ಟೆ ಮೌಲ್ಯ9,262.29 ಕೋಟಿ ರು ಇಳಿಕೆ ಕಂಡು 6,70,920.64 ಕೋಟಿ ರುಗೇರಿದೆ. ಇನ್ನು ಹಿಂದೂಸ್ತಾನ್ ಯೂನಿಲಿವರ್ ಮಾರುಕಟ್ಟೆ ಮೌಲ್ಯ ಮತ್ತೆ ಈ ವಾರವು ಕುಸಿದಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯವು 11,454.26 ಕೋಟಿ ರೂಪಾಯಿ ಇಳಿಕೆಯಾಗಿ 6,09,765.92 ಕೋಟಿ ರು ಗೆ ತಲುಪಿದೆ.

ಅತೀ ದೊಡ್ಡ ಜೀವ ವಿಮಾ ಸಂಸ್ಥೆ

ಅತೀ ದೊಡ್ಡ ಜೀವ ವಿಮಾ ಸಂಸ್ಥೆ

ಈ ನಡುವೆ ಸತತವಾಗಿ ಕುಸಿತ ಕಾಣುತ್ತಿದ್ದ ಭಾರತದ ಅತೀ ದೊಡ್ಡ ಜೀವ ವಿಮಾ ಸಂಸ್ಥೆ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರುಕಟ್ಟೆ ಮೌಲ್ಯವು ಇಳಿಕೆಯಾಗಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು ಸುಮಾರು 3,289.00 ಕೋಟಿ ರು ಇಳಿಕೆಯಾಗಿ 4,31,459.72 ಕೋಟಿ ರೂಪಾಯಿಗೆ ತಲುಪಿದೆ. ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮಾರುಕಟ್ಟೆ ಮೌಲ್ಯವು ಸ್ಥಿರವಾಗಿದ್ದು, 4,73,584.52 ಕೋಟಿ ರೂಪಾಯಿನಂತೆ ಇದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿಕೊಂಡಿದೆ. ಅದರ ಬಳಿಕ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್ ಹಾಗೂ ಎಲ್‌ಐಸಿ ಟಾಪ್ 10 ಕಂಪನಿಗಳು ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+