ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ(ಅ.16ರ ತನಕ) 4 ಕಂಪನಿಗಳ ಮೌಲ್ಯ ಭಾರಿ ಹೆಚ್ಚಳ ಕಂಡಿದ್ದು, 6 ಕಂಪನಿಗಳು ಮೌಲ್ಯ ಕುಸಿತ ಕಂಡಿವೆ. 10 ಕಂಪನಿಗಳ ಪೈಕಿ 6 ಕಂಪನಿಗಳು 78,163 ಕೋಟಿ ರು ಕುಸಿತ ಕಂಡಿವೆ. ದೇಶದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ವಾರ ಭಾರಿ ನಷ್ಟ ಅನುಭವಿಸಿದ ಸಂಸ್ಥೆ ಎನಿಸಿಕೊಂಡಿದೆ.
ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 271.32 ಪಾಯಿಂಟ್‌ಗಳು ಅಥವಾ ಶೇಕಡಾ 0.46 ಏರಿಕೆ ಕಂಡಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ, ಆಮದು -ರಫ್ತು ನಿರ್ಬಂಧ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ.
ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದ ಕಾರಣ 10 ಕಂಪನಿಗಳು ಲಾಭದ ಅನುಭವಿಸಿವೆ. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..
ನಾಲ್ಕು ಕಂಪನಿಗಳಿಂದ ಎಷ್ಟು ನಷ್ಟ
ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್ ಟೆಲ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಬಜಾಜ್ ಫೈನಾನ್ಸ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕುಸಿತ ಕಂಡಿವೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್ ಹಾಗೂ ಎಚ್ ಡಿಎಫ್ ಸಿ ಲಾಭ ಗಳಿಸಿವೆ. ನಾಲ್ಕು ಕಂಪನಿಗಳಿಂದ 30,467.03 ಕೋಟಿ ಮೌಲ್ಯ ಹೆಚ್ಚಳ ಕಂಡಿವೆ.
ಯಾವ ಯಾವ ಕಂಪನಿ ಮೌಲ್ಯ ಇಳಿಕೆ
ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 42,113.47 ಕೋಟಿ ರು ಇಳಿಕೆ ಕಂಡು 16,04,069.19 ಕೋಟಿ ರು ತಲುಪಿದೆ. ಭಾರ್ತಿ ಏರ್ ಟೆಲ್ 15,159.81 ಕೋಟಿ ರು ಹೆಚ್ಚಳ ಕಂಡು 4,26,226.99 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕ್ 8,272.37 ಕೋಟಿ ರು ಕುಸಿತ ಕಂಡು 6,06,317.50 ಕೋಟಿ ರು ತಲುಪಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೌಲ್ಯ ಇಳಿಕೆ
ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 5,404.06 ಕೋಟಿ ರು ಇಳಿಕೆ ಕಂಡು 6,05,219.47 ಕೋಟಿ ರು ತಲುಪಿದೆ. ಬಜಾಜ್ ಫೈನಾನ್ಸ್ ಮೌಲ್ಯ 4,268.28 ಕೋಟಿ ರು ಕುಸಿತವಾಗಿ 4,40,295.38 ಕೋಟಿ ರು ತಲುಪಿದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,945.12 ಕೋಟಿ ರು ಇಳಿಕೆಯಾಗಿ 4,70,371.66 ಕೋಟಿ ರು ಗಳಿಸಿದೆ.
ಇನ್ಫೋಸಿಸ್ ಮೌಲ್ಯ
ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮೌಲ್ಯ 11,965 ಕೋಟಿ ರು ಹೆಚ್ಚಳ ಕಂಡು 11,33,446.05 ಕೋಟಿ ರು ಮುಟ್ಟಿದೆ. ದೇಶದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಮೌಲ್ಯ 9,383.46 ಕೋಟಿ ರು ಏರಿಕೆ ಕಂಡು 6,20,254.82 ಕೋಟಿ ರು ಮುಟ್ಟಿದೆ.
ಅದಾನಿ ಟ್ರಾನ್ಸ್ ಮಿಷನ್
ಎಚ್ ಡಿ ಎಫ್ ಸಿ 3,325.71 ಕೋಟಿ ರು ಏರಿಕೆ ಕಂಡು 4,26,135.93 ಕೋಟಿ ರು ತಲುಪಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ 5,792.76 ಕೋಟಿ ರು ಇಳಿಕೆ ಕಂಡು 8,02,686.8 ಕೋಟಿ ರು ತಲುಪಿದೆ.
ಆಗಸ್ಟ್ 30ರಂದು ಷೇರುಪೇಟೆಗೆ ಎಂಟ್ರಿ ಕೊಟ್ಟ ಅದಾನಿ ಟ್ರಾನ್ಸ್ ಮಿಷನ್ ಟಾಪ್ 10 ಅತಿ ಹೆಚ್ಚು ಮೌಲ್ಯಯುತ ಕಂಪನಿಗಳ ಪಟ್ಟಿಯಿಂದ ಹೊರಗುಳಿದಿದೆ.
ಯಾವ ಕಂಪನಿ ಯಾವ ಸ್ಥಾನ
ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್,ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಬಜಾಜ್ ಫೈನಾನ್ಸ್, ಭಾರ್ತಿ ಏರ್ ಟೆಲ್ ಹಾಗೂ ಎಚ್ ಡಿ ಎಫ್ ಸಿ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications