ಕಳೆದ ವಾರದ ಮಾರುಕಟ್ಟೆ ಮೌಲ್ಯ ಲೆಕ್ಕಚಾರದಲ್ಲಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಹೆಚ್ಚು ಕಳೆದುಕೊಂಡಿದ್ದರೆ, ಎಚ್ ಡಿ ಎಫ್ ಸಿ ಟ್ವಿನ್ಸ್ ಅತ್ಯಧಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ ಟಾಪ್ 10 ಕಂಪನಿಗಳ ಪೈಕಿ 6 ಕಂಪನಿಗಳಿಂದ 86,683.71 ಕೋಟಿ ರು ಮಾರುಕಟ್ಟೆ ಮೌಲ್ಯ ಸೇರ್ಪಡೆಯಾಗಿದೆ.
ಉತ್ತಮ ಗಳಿಕೆ ತೋರಿಸಿದ ಟಾಪ್ 10 ಪಟ್ಟಿಯಲ್ಲಿ ಎಚ್ ಡಿಎಫ್ ಬ್ಯಾಂಕ್, ಎಚ್ ಡಿ ಎಫ್ ಸಿ, ಐಸಿಐಸಿಐ, ಕೋಟಕ್ ಮಹೀಂದ್ರಾ ಬ್ಯಾಂಕ್, ಭಾರ್ತಿ ಏರ್ ಟೆಲ್ ಹಾಗೂ ಎಚ್ ಸಿಎಲ್ ಟೆಕ್ನಾಲಜೀಸ್ ವೆ.
ಕಳೆದ ವಾರದಲ್ಲಿ ಭಾರತದ ಅಗ್ರ ಎರಡು ಕಂಪನಿಗಳಾದ ರಿಲಯನ್ಸ್ ಮತ್ತು ಟಿಸಿಎಸ್ ಮಾರುಕಟ್ಟೆ ಮೌಲ್ಯ ಕುಸಿದಿದೆ. ನಂತರ ಇನ್ಫೋಸಿಸ್ ಹಾಗೂ ಹಿಂದೂಸ್ತಾನ್ ಲಿವರ್ ಲಿಮಿಟೆಡ್ ಕೂಡಾ ಇಳಿಮುಖ ಕಂಡಿವೆ.

ಮಾರುಕಟ್ಟೆ ಮೌಲ್ಯ ಟಾಪ್ ಗಳಿಕೆ ಹೊಂದಿದ ಸಂಸ್ಥೆಗಳು:
ಖಾಸಗಿ ವಲಯದ ಅತಿದೊಡ್ಡ ಹಣಕಾಸು ಸಂಸ್ಥೆ ಎಚ್ ಡಿಎಫ್ ಸಿ ಬ್ಯಾಂಕ್ ಮೌಲ್ಯ 20,198.59 ಕೋಟಿ ರು ಸೇರ್ಪಡೆಯಾಗಿ ಒಟ್ಟಾರೆ 6,80,092.72 ಕೋಟಿ ರು ಗೇರಿದೆ.
ಇದೇ ವೇಳೆ ಎಚ್ ಡಿಎಫ್ ಸಿ ಮಾರುಕಟ್ಟೆ ಮೌಲ(ಎಂ-ಕ್ಯಾಪ್) ಕೂಡಾ 18, 146. 58 ಕೋಟಿ ರು ಏರಿಕೆ ಕಂಡು ಒಟ್ಟಾರೆ 3,70,132.82 ಕೋಟಿ ರು ಗೇರಿದೆ.
ಭಾರ್ತಿ ಏರ್ಟೆಲ್ ಮೌಲ್ಯ ಕಳೆದ ವಾರ 17,894.22 ಕೋಟಿ ರು ಹೆಚ್ಚಳಗೊಂಡು 2,36,962.13 ಕೋಟಿ ರುಗೇರಿದೆ.

ಐಸಿಐಸಿಐ ಬ್ಯಾಂಕ್ ಎಂ ಕ್ಯಾಪ್ 14,415.27 ಕೋಟಿ ರು ಹೆಚ್ಚಳವಾಗಿ 2,87,490.70 ಕೋಟಿ ರು ಗೇರಿದೆ.
ಕೋಟಕ್ ಮಹೀಂದ್ರಾ ಮಾರುಕಟ್ಟೆ ಮೌಲ್ಯ 9,204.18 ಕೋಟಿ ರು ಏರಿಕೆ ಕಂಡು 2,73,760.15 ಕೋಟಿ ರುಗೇರಿದೆ.
ಎಚ್ ಸಿಎಲ್ ಟೆಕ್ನಾಲಜೀಸ್ 6,824.87 ಕೋಟಿ ರು ಗಳಿಕೆ ಹೆಚ್ಚಿಸಿಕೊಂಡು 2,31,272.11 ಕೋಟಿ ರು ಮೌಲ್ಯ ಹೊಂದಿದೆ.
ಮಾರುಕಟ್ಟೆ ಮೌಲ್ಯ ಟಾಪ್ ಗಳಿಕೆ ಹೊಂದಿದ ಸಂಸ್ಥೆಗಳು:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಕಳೆದ ವಾರದ42,567.02 ಕೋಟಿ ರು ಕಳೆದು ಕೊಂಡು 14,28,514.26 ಕೋಟಿ ಮಾರುಕಟ್ಟೆ ಮೌಲ್ಯಕ್ಕೆ ಕುಸಿದಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) 28,536.89 ಕೋಟಿ ರು ಕಳೆದುಕೊಂಡು 10,08,059.39 ಕೋಟಿ ರು ಗೆ ಇಳಿದಿದೆ.

ಹಿಂದೂಸ್ತಾನ್ ಲಿವರ್ ಮೌಲ್ಯ 1,574.2 ಕೋಟಿ ರು ಇಳಿಕೆಯಾಗಿ 5,03,756.61 ಕೋಟಿ ರು ಮೌಲ್ಯ ಹೊಂದಿದೆ.
ಅಕ್ಟೋಬರ್ 26ರಂತೆ ಟಾಪ್ 10 ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳು
* ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್)
* ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್)
* ಎಚ್ ಡಿ ಎಫ್ ಸಿ ಬ್ಯಾಂಕ್
* ಹಿಂದೂಸ್ತಾನ್ ಲಿವರ್ ಲಿಮಿಟೆಡ್
* ಇನ್ಫೋಸಿಸ್ ಟೆಕ್ನಾಲಜೀಸ್
* ಎಚ್ ಡಿ ಎಫ್ ಸಿ
* ಐಸಿಐಸಿಐ ಬ್ಯಾಂಕ್
* ಕೋಟಕ್ ಮಹೀಂದ್ರಾ ಬ್ಯಾಂಕ್
* ಭಾರ್ತಿ ಏರ್ಟೆಲ್
* ಎಚ್ ಸಿಎಲ್ ಟೆಕ್ನಾಲಜೀಸ್
More From GoodReturns

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications