ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ದೀಮಂತ ನಾಯಕ ಎಸ್.ಎಂ ಕೇಷ್ಣ ಅವರು ಇಹಲೋಕ ತ್ಯಜಿಸಿದ್ದಾರೆ. ನವಬೆಂಗಳೂರು ಕನಸಿನ ರುವಾರಿ ಎಸ್.ಎಂ ಕೃಷ್ಣ ಅವರ ಸ್ಮರಣಾರ್ಥ ನಾಳೆ, ಅಂದರೆ ಡಿಸೆಂಬರ್ 11 ರಂದು ಶಾಲಾ-ಕಾಳೇಜುಗಳಿಗೆ ರಜೆ ಘೋಶಿಸಿ ರಾಜ್ಯ ಸರ್ಕಾರ ಅಧಿಸೂಚನೆಯನ್ನ ಹೊರಡಿಸಿದೆ. ರಾಜ್ಯ ಕಂಡ ಅಗ್ರಮಾನ್ಯ ರಾಜಕಾರಣಿ ವಿಧಿವಶರಾಗಿರುವ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನಗಳ ಕಾಲ, ಅಂದರೆ ಡಿಸೆಂಬರ್ 10 ರಿಂದ 12 ರವರೆಗೆ ಶೋಕಾಚರಣೆ ನಡೆಯಲಿದೆ ಎಂದು ಕರ್ನಾಟಕ ಸರ್ಕಾರ ಇಂದು ಅಧಿಸೂಚನೆಯನ್ನ ಹೊರಡಿಸಿದೆ.
ಹಾಗಾದ್ರೆ ಈ ಸರ್ಕಾರಿ ರಜೆ ಕೇವಲ ಶಾಲಾ-ಕಾಳಲೇಜುಗಳಿಗೆ ಮಾತ್ರವೇ ಅಥವಾ ಬ್ಯಾಂಕುಗಳಿಗೂ ನಾಳೆ ರಜೆ ಇರಲಿದೆಯೇ ಎಂದು ಬ್ಯಾಂಕ್ ಸಿಬ್ಬಂದಿ ತಲೆಕೆಡಿಸಿಕೊಂಡಿದ್ದಾರೆ. ಹಾಗಾದ್ರೆ, ನಾಳೆ ಬ್ಯಾಂಕುಗಳಿಗೆ ರಜೆ ಇದೆಯಾ ಅಥವಾ ಇಲ್ಲವಾ ಎಂಬ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯದಲ್ಲಿ ನಾಳೆ ಬ್ಯಾಂಕುಗಳಿಗೆ ರಜೆ ಇದ್ಯಾ?
ನಾಳೆ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಸೇರಿ ಹತ್ತು ಹಲವು ಉನ್ನತ ಹುದ್ದೆಗಳನ್ನ ನಿರ್ವಹಿಸಿರುವ ಎಸ್. ಎಂ ಕೃಷ್ಣ ಅವರ ಅಂತಿಮ ಸಂಸ್ಕಾರ ನಡೆಯಲಿದ್ದು, ರಾಜ್ಯಾದ್ಯಂತ ಶೋಕಾಚರಣೆ ಮುಂದುವರೆಯಲಿದೆ. ಆದರೆ ಈ ಬಗ್ಗೆ ಆರ್.ಬಿ.ಐ ಯಾವುದೇ ಅಧಿಸೂಚನೆಯನ್ನ ಇದುವರೆಗೂ ಹೊರಡಿಸಿಲ್ಲ. ಹಾಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿಪಡಿಸದ ಹೊರತು ಡಿಸೆಂಬರ್ 11 ರಂದು ಬ್ಯಾಂಕಿಂಗ್ ವಹಿವಾಟು ನಡೆಸಲು ಕರ್ನಾಟಕ ರಾಜ್ಯದ ಎಲ್ಲಾ ಬ್ಯಾಂಕುಗಳು ತೆರೆದಿರುತ್ತವೆ. ಇದುವರೆಗೂ ಯಾವುದೇ ಬ್ಯಾಂಕುಗಳಿಗೆ ರಜೆ ಘೋಷಣೆಯಾಗಿಲ್ಲ. ಹಾಗಾಗಿ ನಾಳೆ ಬ್ಯಾಂಕಿನಲ್ಲಿ ಎಂದಿನಂತೆ ಎಲ್ಲಾ ವಹಿವಾಟುಗಳು ನಡೆಯುವ ಸಾಧ್ಯತೆ ಅಧಿಕವಾಗಿದೆ.
ಇಂದು ನಿಧನರಾಗಿರುವ ಎಸ್.ಎಂ ಕೃಷ್ಣ ಅವರ ಹಿನ್ನೆಲೆ ಏನು?
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು 1932 ಮೇ 1 ರಂದು ಜನಿಸಿದರು. ಹುಟ್ಟೂರಿನಲ್ಲೇ ಪ್ರಥಮಿಕ- ಪ್ರೌಡ ಶಿಕ್ಷಣವನ್ನ ಪಡೆದ ಕೃಷ್ಣ ಅವರು, ಮೈಸುರು ಹಾಗೂ ಅಮೇರಿಕಾ ವಿಶ್ವವಿದ್ಯಾಲಯದಿಂದ ಪದವಿಯನ್ನ ಪಡೆದರು. ನಂತರ ನಂತರ 1962ರಲ್ಲಿ ರಾಜಕೀಯಕ್ಕೆ ದುಮುಖಿದ ಕೃಷ್ಣ ಅವರು ಮೊದಲ ಗೆಲುವಿನೊಂದಿಗೆ ರಾಜ್ಯಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದರು. ನಿಧಾನವಾಗಿ ರಾಜಕೀಯ ಮೈಲುಗಲ್ಲನ್ನ ಸಾಧಿಸುತ್ತಾ ಬಂದ ಅವರು ಮುಖ್ಯಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಸಂಸದ, ಕೇಂದ್ರ ಸಚಿವರಾಗಿ. ಅಷ್ಟೇ ಅಲ್ಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.2023 ರಲ್ಲಿ ಕೃಷ್ಣ ಅವರಿಗೆ ಭಾರತ ಸರ್ಕಾರ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿದೆ.
ಈ ಎಲ್ಲಾ ಕಾರಣಗಳಲ್ಲಿ ಎಸ್.ಎಂ ಕೃಷ್ಣ ಒಬ್ಬರು ದೀಮಂತ ರಾಜಕಾರಣಿ, ಅಜಾತ ಶತೃ ಎಂದು ಕರೆಯಲಾಗುತ್ತೆ.ಮುತ್ಸದ್ದಿ ರಾಜಕಾರಣಿಯ ಮರಣಕ್ಕೆ ಇಡೀ ದೇಶವೇ ಮಿಡಿದಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಆದರೆ ಬ್ಯಾಂಕು ಸಿಬ್ಬಂದಿ ಮಾತ್ರ ಇನ್ನೂ ಗೊಂದಲದಲ್ಲಿದ್ದು, ನಾಳಿನ ರಜೆಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಬಗ್ಗೆ ಆರ್‌ಬಿಐ ಇನ್ನೂ ಯಾವುದೇ ನಿರ್ಧಾರಗಳನ್ನ ತೆಗೆದುಕೊಂಡಿಲ್ಲ. ಹಾಗಾಗಿ ನಾಳೆ ಬ್ಯಾಂಕುಗಳು ಎಂದಿನಂತೆ ಎರೆದಿರುತ್ತದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ನಾಳಿನ ರಜೆ ನಿರೀಕ್ಷೆಯಲ್ಲಿದ್ದ ಬ್ಯಾಂಕ್ ಸಿಬ್ಬಂದಿಗೆ ಕೊಂಚ ನಿರಾಸೆಯುಂಟಾಗಬಹುದು. ಆದರೂ ಕೂಡ ಎಸ್.ಎಂ ಕೃಷ್ಣ ಅವರ ಸಾಧನೆಯನ್ನ ಮನದಲ್ಲಿಯೇ ನೆನೆದು ಬ್ಯಾಂಕ್ ಕೆಲಸಕ್ಕೆ ಹಾಜರಾಗುವುದು ಉತ್ತಮ. ಯಾಕೆಂದರೆ ಕೆಲಸದ ಮೂಲಕವು ಗಣ್ಯರ ಅಗಲಿಕೆ ಸಂತಾಪವನ್ನ ಸೂಚಿಸಬಹುದು.


Click it and Unblock the Notifications