ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಖಾತೆಯನ್ನು ತೆರೆದಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ನವದೆಹಲಿಯಲ್ಲಿನ ಸಂಸದ್ ಮಾರ್ಗ್ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ (MSSC) ಖಾತೆಯನ್ನು ತೆರೆದಿದ್ದಾರೆ.
ಅಂಚೆ ಕಚೇರಿಯ ಸಾಮಾನ್ಯ ಗ್ರಾಹಕಿಯಾಗಿ ಕೌಂಟರ್‌ಗೆ ಹೋಗಿ ಖಾತೆ ತೆರೆಯುವ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು. ಅಂಚೆ ಕಚೇರಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಎಂಎಸ್‌ಎಸ್‌ಸಿ ಖಾತೆಯನ್ನು ತೆರೆದಿದ್ದಾರೆ. ಕಂಪ್ಯೂಟರ್ ಸಹಾಯದಿಂದ ಪ್ರಿಂಟ್ ಮಾಡಲಾದ ಪಾಸ್‌ಬುಕ್ ಅನ್ನು ಕೌಂಟರ್‌ನಲ್ಲಿಯೇ ಅಂಚೆ ಕಚೇರಿ ಸಿಬ್ಬಂದಿಗಳು ಸ್ಮೃತಿ ಇರಾನಿಗೆ ಹಸ್ತಾಂತರ ಮಾಡಿದ್ದಾರೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ ಸ್ಮೃತಿ ಇರಾನಿ
ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಇಂದು ಸಂಸದ್ ಮಾರ್ಗ್ ಪೋಸ್ಟ್ ಆಫೀಸ್‌ನಲ್ಲಿ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ (ಎಂಎಸ್‌ಎಸ್‌ಸಿ) ಖಾತೆಯನ್ನು ತೆರೆಯಲಾಗಿದೆ. ಮಹಿಳೆಯರು ಮತ್ತು ಯುವತಿಯರು ಎಂಎಸ್‌ಎಸ್‌ಸಿಗೆ ಅರ್ಜಿ ಸಲ್ಲಿಸಿ ಖಾತೆಯನ್ನು ತೆರೆಯಿರಿ. ಈ ಸಣ್ಣ ಉಳಿತಾಯ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ನಾನು ಒತ್ತಾಯಿಸುತ್ತೇನೆ," ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
ಇನ್ನು ಮಾಹಿತಿ ಮತ್ತು ಸಂವಹನ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ತೆರೆಯುವ ಸಂದರ್ಭದಲ್ಲೇ ಸ್ಮೃತಿ ಇರಾನಿ ಅಂಚೆ ಕಚೇರಿ ಸಿಬ್ಬಂದಿ ಮತ್ತು ಕೆಲವು ಎಂಎಸ್‌ಎಸ್‌ಸಿ, ಸುಕನ್ಯಾ ಸಮೃದ್ಧಿ ಯೋಜನೆ ಖಾತೆದಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಹಾಗೆಯೇ ಈ ಯೋಜನೆಗೆ ಅರ್ಹರಾಗಿರುವವರು ಖಾತೆಯನ್ನು ತೆರೆಯಬೇಕು ಎಂದು ಮನವಿ ಮಾಡಿದ್ದಾರೆ.
ಯೋಜನೆಯ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು ಹಣಕಾಸು ವರ್ಷ 2023-24ರ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿವೆ ಮಹಿಳಾ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಕೂಡಾ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಸಣ್ಣ ಉಳಿತಾಯ ಯೋಜನೆಯಾದ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರವು 2023, ಏಪ್ರಿಲ್ 2023ರಿಂದ ಜಾರಿಗೆ ಬರುತ್ತದೆ.
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಖಾತೆ ತೆರೆಯುವುದು ಹೇಗೆ?
ಹಂತ 1: ಸಮೀಪದ ಅಂಚೆ ಕಚೇರಿ ಬ್ರ್ಯಾಂಚ್‌ಗೆ ಭೇಟಿ ನೀಡಿ, ಫಾರ್ಮ್ ಅನ್ನು ಪಡೆದುಕೊಳ್ಳಿ
ಹಂತ 2: ಫಾರ್ಮ್ ಅನ್ನು ಭರ್ತಿ ಮಾಡಿ, ಅಂಚೆ ಕಚೇರಿಯಲ್ಲಿ ಸಲ್ಲಿಸಿ
ಹಂತ 3: ಕೆವೈಸಿ ದಾಖಲೆ ಪ್ರತಿ (ಆಧಾರ್ ಮತ್ತು ಪ್ಯಾನ್ ಕಾರ್ಡ್), ಹೊಸ ಖಾತೆದಾರರಿಗೆ ಕೆವೈಸಿ ಫಾರ್ಮ್, ಪೇ ಸ್ಲಿ, ಚೆಕ್ ಅಥವಾ ಮೊತ್ತವನ್ನು ಫಾರ್ಮ್‌ನೊಂದಿಗೆ ನೀಡಿ
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಏನು?
ಬಜೆಟ್ 2023ರಲ್ಲಿ ಜಾರಿ ಮಾಡಲಾದ ಭಾರತ ಸರ್ಕಾರದ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಹೊಸ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಒಂದು ಸಮಯ ಯೋಜನೆಯಾಗಿದೆ. ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಾರ್ಚ್ 2025ರವರೆಗಿನ ಅಂದರೆ 2 ವರ್ಷದ ಅವಧಿಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ ಸುಮಾರು 2 ಲಕ್ಷ ರೂಪಾಯಿ ಮೊತ್ತವನ್ನು 2 ವರ್ಷದವರೆಗೆ ಡೆಪಾಸಿಟ್ ಮಾಡಬಹುದಾಗಿದೆ.
ಅರ್ಹತೆ, ಗರಿಷ್ಠ ಹಾಗೂ ಕನಿಷ್ಠ ಹೂಡಿಕೆ ಮೊತ್ತ
ಅರ್ಹತೆ: ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ ಮಾತ್ರ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆಯನ್ನು ತೆರೆಯುವ ಅವಕಾಶವಿದೆ. ಇಲ್ಲಿ ಯಾವುದೇ ವಯೋಮಿತಿಗಳು ಇಲ್ಲ. ಹೆಣ್ಣಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಅನ್ನು ಪಡೆಯುವ ಅವಕಾಶವಿದೆ.
ನೀವು ಕನಿಷ್ಠವಾಗಿ 100 ರೂಪಾಯಿಯಂತೆ 1000 ರೂಪಾಯಿಯನ್ನು ಕನಿಷ್ಠವಾಗಿ ಹೂಡಿಕೆ ಮಾಡಬಹುದಾಗಿದೆ. ಇನ್ನು ಓರ್ವ ವ್ಯಕ್ತಿಯ ಖಾತೆಗೆ ಗರಿಷ್ಠ ಮೊತ್ತದ ಮಿತಿಯು 2 ಲಕ್ಷ ರೂಪಾಯಿ ಆಗಿದೆ. ಒಂದು ಖಾತೆಯನ್ನು ತೆರೆದ ಬಳಿಕ ನೀವು ಇನ್ನೊಂದು ಖಾತೆಯನ್ನು ತೆರೆಯಲು ಬಯಸಿದರೆ, ಎರಡು ಖಾತೆ ಆರಂಭದ ದಿನದಲ್ಲಿ ಮೂರು ತಿಂಗಳುಗಳ ಕಾಲಾವಧಿ ಇರಬೇಕು.


Click it and Unblock the Notifications