ಸಾಫ್ಟ್‌ಬ್ಯಾಂಕ್‌ಗೆ 1 ಲಕ್ಷದ 34 ಸಾವಿರ ಕೋಟಿ ರುಪಾಯಿ ನಷ್ಟ

ಜಪಾನ್ ಮೂಲದ 'ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್' ವಾರ್ಷಿಕ 1.9 ಟ್ರಿಲಿಯನ್ ಯೆನ್ (17.7 ಬಿಲಿಯನ್ ಡಾಲರ್) ನಷ್ಟು ಕಾರ್ಯಾಚರಣೆ ನಷ್ಟ ಅನುಭವಿಸಿರುವುದಾಗಿ ವರದಿ ಮಾಡಿದೆ. ಸೋಮವಾರ ತನ್ನ ಬೃಹತ್ ವಿಷನ್ ಫಂಡ್‌ನಲ್ಲಿ ನಷ್ಟದ ವರದಿ ಪ್ರಕಟಿಸಿರುವ ಸಾಫ್ಟ್‌ಬ್ಯಾಂಕ್, ಇದು ಸಂಸ್ಥೆಯು ಹಿಂದೆದೂ ಕಾಣದ ನಷ್ಟ ಎಂದು ಬಣ್ಣಿಸಿದೆ.

ಭಾರತದ ರುಪಾಯಿಗಳಲ್ಲಿ ಬರೋಬ್ಬರಿ 1 ಲಕ್ಷದ 34 ಸಾವಿರ ಕೋಟಿ ನಷ್ಟ ಅನುಭವಿಸಿದೆ. ಇಷ್ಟು ದೊಡ್ಡ ಮಟ್ಟಿಗೆ ನಷ್ಟವಾಗಲು ಕಾರಣ ಸಾಫ್ಟ್‌ ಬ್ಯಾಂಕ್‌ ಕಾರ್ಪ್‌ ಒಟ್ಟು 88 ಸ್ಟಾರ್ಟ್‌ಅಪ್‌ ಗಳಲ್ಲಿ ಸುಮಾರು 75 ಬಿಲಿಯನ್‌ ಡಾಲರ್‌ಗಳಷ್ಟು ಹೂಡಿಕೆ ಮಾಡಿತ್ತು. ಆದರೆ, ಕಳೆದ ಮಾರ್ಚ್‌ನಲ್ಲಿ ಈ ಹೂಡಿಕೆಯ ಮೌಲ್ಯ 69.6 ಬಿಲಿಯನ್‌ ಡಾಲರ್‌ಗೆ ಕುಸಿದಿದೆ.

ಸಾಫ್ಟ್‌ಬ್ಯಾಂಕ್‌ಗೆ 1 ಲಕ್ಷದ 34 ಸಾವಿರ ಕೋಟಿ ರುಪಾಯಿ ನಷ್ಟ

ಆಫೀಸ್ ಸ್ಪೇಸ್ ಶೇರಿಂಗ್ ಸಂಸ್ಥೆ 'ವೀವರ್ಕ್ ಮತ್ತು ನಗರ ಸಾರಿಗೆ ಸಂಸ್ಥೆ ಉಬರ್‌ನಿಂದಲೇ 10 ಬಿಲಿಯನ್ ಡಾಲರ್‌ ನಷ್ಟ ಅನುಭವಿಸಿರುವುದಾಗ ವರದಿಯಲ್ಲಿ ತಿಳಿಸಿದೆ. ಜೊತೆಗೆ ಇತರ ಟೆಕ್ ಹೂಡಿಕೆಗಳ ಮೂಲಕ 7.5 ಬಿಲಿಯನ್ ಡಾಲರ್‌ ನಷ್ಟ ಅನುಭವಿಸಿದೆ. ಕೊರೊನಾ ವೈರಸ್‌ ಲಾಕ್‌ಡೌನ್‌ ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನೂ ದೃಢೀಕರಿಸದ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದರಿಂದ ಸಾಫ್ಟ್‌ಬ್ಯಾಂಕ್‌ ಭಾರೀ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಈ ಕುರಿತು ಈಗಾಗಲೇ ಎಚ್ಚೆತ್ತುಕೊಂಡಿರುವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಮಸಯೋಶಿ ಅವರು ಈ ಬೃಹತ್ ನಷ್ಟವನ್ನು ಸರಿದೂಗಿಸಲು ಕಾರ್ಯತಂತ್ರ ಹೆಣೆದಿದ್ದಾರೆ. ಆದರೆ ಈ ಭಾರೀ ನಷ್ಟದ ಬೆನ್ನಲ್ಲೇ ಅಲಿಬಾಬಾ ಕಂಪೆನಿಯ ಸಹ ಸಂಸ್ಥಾಪಕ ಜಾಕ್ ಮಾ ಅವರು ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+