ಕೆಲವು ಉದ್ಯೋಗಗಳ ಬಗ್ಗೆ ಹೇಳಿದರೆ, ಸುಮ್ಮನೆ ತಮಾಷೆ ಮಾಡಬೇಡಿ ಅಂತಲೇ ಹೇಳಬೇಕು ಹಾಗಿರುತ್ತವೆ. ಅದರಲ್ಲೂ ಕೊರೊನಾ ಕಾರಣಕ್ಕೆ ಕೆಲಸ ಸಿಗದೆ ಪರದಾಟ ಆಗಿರುವ ಕಾಲಘಟ್ಟದಲ್ಲಿ ಈ ಬಗ್ಗೆ ಹೇಳಿದರೆ ನಂಬುವುದು ಸಹ ಕಷ್ಟ ಬಿಡಿ. ಆದರೆ ಕೊರೊನಾ ತೊಲಗಿ, ಮುಂಚಿನಂತೆಯೇ ಎಲ್ಲ ಸರಿಹೋದಲ್ಲಿ ಈ ಕೆಲಸಗಳು ಸಿಗಬಹುದು. ಅಂಥ ವಿಚಿತ್ರ ಕೆಲಸಗಳ ಬಗ್ಗೆ ತಿಳಿಯಲು ಮುಂದೆ ಓದಿ.
ಹೋಟೆಲ್ ಗಳ ರೂಮ್ ಗಳಲ್ಲಿ ರಾತ್ರಿ ಹೊತ್ತು ಮಲಗುವುದಕ್ಕೆ ತಿಂಗಳಲ್ಲಿ ಒಮ್ಮೆಯೋ ಅಥವಾ ನಿಯಮಿತವಾಗಿ ಮ್ಯಾನೇಜರ್ ಗೋ ಅಥವಾ ಯಾರಾದರೂ ಸಿಬ್ಬಂದಿಗೋ ನಿಯೋಜನೆ ಮಾಡಲಾಗುತ್ತದೆ. ಅವರ ಕೆಲಸ ಏನೆಂದರೆ, ಹೋಟೆಲ್ ರೂಮ್ ಗೆ ರಾತ್ರಿ ಹೋಗಿ ಮಲಗಬೇಕು, ಬೆಳಗ್ಗೆ ಎದ್ದು ಹೋಗಬೇಕು.
ಹೋಟೆಲ್ ಟೆಸ್ಟರ್
ಹ್ಞಾಂ, ಅಷ್ಟಕ್ಕೇ ನಿಲ್ಲಲ್ಲ. ಈ ವೇಳೆ ಅಲ್ಲಿನ ಸೇವೆ ಹೇಗಿದೆ, ಇನ್ನೂ ಚೆನ್ನಾಗಿ ಆಗಬೇಕಾದ್ದು ಏನು ಇತ್ಯಾದಿ ವಿಚಾರಗಳನ್ನು ತಿಳಿಸಬೇಕು. ಆದರೆ ಕೆಲವು ಹೋಟೆಲ್ ನವರು ತಮ್ಮದೇ ಸಿಬ್ಬಂದಿಯನ್ನು ಇದಕ್ಕೆ ನಿಯೋಜನೆ ಮಾಡಿದರೆ, ಕೆಲವು ಕಡೆ ಹೊರಗಿನವರನ್ನು ನೇಮಿಸಲಾಗುತ್ತದೆ. ಅಂಥವರನ್ನು 'ಹೋಟೆಲ್ ಟೆಸ್ಟರ್' ಎನ್ನಲಾಗುತ್ತದೆ. ಅವರು ರೂಮ್ ನಲ್ಲಿ ತಂಗಿದ್ದು, ಮರು ದಿನ ತಮ್ಮ ವಿಮರ್ಶೆ ದಾಖಲಿಸುತ್ತಾರೆ.
ರೈಲಿನೊಳಗೆ ಜನರನ್ನು ನೂಕಬೇಕು
ಇನ್ನು ಜಪಾನ್ ನಲ್ಲಿ ಇರುವ ಕೆಲಸ ಇದು. ಅಲ್ಲಿ ರೈಲುಗಳ ತುಂಬ ಬಾಗಿಲು ಸಹ ಹಾಕಲು ಸಾಧ್ಯವಿಲ್ಲದಷ್ಟು ಜನ ಕಿಕ್ಕಿರಿದು ಇರುತ್ತಾರೆ. ಅಂಥ ರೈಲುಗಳಲ್ಲಿ ಪ್ರಯಾಣಿಕರು ಬಾಗಿಲ ಬಳಿ ನಿಲ್ಲದಂತೆ ಒಳಗೆ ನೂಕುವುದಕ್ಕೆ ಅಂತಲೇ ಸಿಬ್ಬಂದಿ ನೇಮಿಸಲಾಗುತ್ತದೆ. ಜನರನ್ನು ಬಾಗಿಲ ಬಳಿಯಿಂದ ಒಳಗೆ ನೂಕುವುದೇ ಈ ಸಿಬ್ಬಂದಿ ಕೆಲಸ.
ನಾಯಿಗಳ ಆಹಾರದ ರುಚಿ ಪರೀಕ್ಷೆ
ನಾಯಿಗಳಿಗೆ ಆಹಾರ ಸಿದ್ಧಪಡಿಸುವ ಕಂಪೆನಿಗಳು ಉತ್ಪನ್ನಗಳ ರುಚಿ ಪರಿಶೀಲನೆಗೆ ಅಂತಲೇ ಜನರನ್ನು ನೇಮಿಸುತ್ತದೆ. ನಾಯಿ ಆಹಾರವನ್ನು ಅವರು ರುಚಿ ನೋಡಬೇಕಾಗುತ್ತದೆ. ಸ್ವತಃ ತಾವೇ ಆ ಆಹಾರದ ರುಚಿ ನೋಡಿ, ಅದು ಹೇಗಿದೆ ಎಂದು ತಿಳಿಸಬೇಕಾಗುತ್ತದೆ. ಇದು ಕಷ್ಟವೇ ಅಲ್ಲವಾ? ಆದರೂ ಈ ಕೆಲಸ ಇದೆ.
ಹಾವಿನ ವಿಷ ಸಂಗ್ರಹಿಸಬೇಕು
ಹಾವುಗಳಿಂದ ವಿಷವನ್ನು ಸಂಗ್ರಹಿಸುವುದು ಸುಲಭದ ಕೆಲಸ ಅಲ್ಲ. ಆದರೆ ಕೆಲವರು ಈ ಕೆಲಸಕ್ಕಾಗಿಯೇ ನೇಮಕವಾಗಿರುತ್ತಾರೆ. ಒಂದು ಜಾರ್ ನಲ್ಲಿ ಹಾವಿನ ವಿಷವನ್ನು ಅವರು ಸಂಗ್ರಹಿಸಬೇಕು. ಈ ಹಾವಿನ ವಿಷವನ್ನು ಹಲವು ಬಗೆಯ ಔಷಧ ತಯಾರಿಕೆಗಾಗಿಯೇ ಬಳಸಿಕೊಳ್ಳಲಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications