For Quick Alerts
ALLOW NOTIFICATIONS  
For Daily Alerts

#BoycottChinesProducts ಧ್ವನಿ ಸೇರಿಸಿದ ಸೋನಂ ವಾಂಗ್ ಚುಕ್

|

ಸೋನಂ ವಾಂಗ್ ಚುಕ್ ನಿಮಗೆ ಗೊತ್ತಾ? ಹಿಂದಿಯಲ್ಲಿ ತ್ರೀ ಇಡಿಯಟ್ಸ್ ಸಿನಿಮಾ ಬಂತಲ್ಲ, ಅದರಲ್ಲಿ ಆಮೀರ್ ಖಾನ್ ಪಾತ್ರದ ಸ್ಫೂರ್ತಿ ಇವರೇ. ಈತ ಮೂಲತಃ ಎಂಜಿನಿಯರ್. ಆ ನಂತರ ಶಿಕ್ಷಣ ಸುಧಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಚೀನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವ ಕರೆಯನ್ನು ಬೆಂಬಲಿಸಿ, ಭಾನುವಾರ ವಿಡಿಯೋ ಬಿಡುಗಡೆ ಮಾಡಿದ್ದಾರೆ.

'ಚೀನಾ ಕೋ ಜವಾಬ್' (ಚೀನಾಗೆ ಉತ್ತರ) ಎಂಬ ಶೀರ್ಷಿಕೆಯ ಎರಡು ಸರಣಿ ವಿಡಿಯೋದಲ್ಲಿ ಎರಡನೇ ಭಾಗ ಇದು. ಚೀನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಿ ಎಂಬ ಕರೆಯ ಸಾಧ್ಯಾಸಾಧ್ಯತೆ ಕುರಿತು ಕೇಳುಗರ ಪ್ರಶ್ನೆಗಳಿಗೆ ಅವರು ಉತ್ತರ ಹೇಳಿದ್ದಾರೆ.

ಚೀನಾದ ಮಂತ್ರಕ್ಕೆ, ಭಾರತದ ತಿರುಮಂತ್ರ :ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತವೇ ಫೇವರಿಟ್ಚೀನಾದ ಮಂತ್ರಕ್ಕೆ, ಭಾರತದ ತಿರುಮಂತ್ರ :ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತವೇ ಫೇವರಿಟ್

ಚೀನಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡುವುದರಿಂದ ದ್ವೇಷ ಬಿತ್ತಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ಈ ನಿರ್ಧಾರ ಚೀನಾ ಸರ್ಕಾರದ ಧೋರಣೆ ವಿರುದ್ಧವೇ ಹೊರತು ಅಲ್ಲಿನ ಜನರ ವಿರುದ್ಧ ಅಲ್ಲ ಎಂದು ಹೇಳಿದ್ದಾರೆ.

#BoycottChinesProducts ಧ್ವನಿ ಸೇರಿಸಿದ ಸೋನಂ ವಾಂಗ್ ಚುಕ್

ಲಕ್ಷಾಂತರ ಮಂದಿ ಜೀತದಾಳುಗಳನ್ನು ಶೋಷಣೆ ಮಾಡಿದಂತೆ ಆಗಲ್ಲ. ಟಿಬೆಟನ್ ಬೌದ್ಧರನ್ನು ಕೊಂದಿದ್ದು, ಅಲ್ಲಿ ದೇವಾಲಯಗಳ ನಾಶ ಮಾಡಿದ್ದು, ಕ್ಸಿನ್ ಜಿಯಾಂಗ್ ನಲ್ಲಿ ಉಯ್ಘರ್ ಮುಸ್ಲಿಮರು ಅನುಭವಿಸುತ್ತಿರುವುದು ಇವೆಲ್ಲ ಚೀನಾದ ಶೋಷಣೆಯೇ ಎಂದು ಅವರು ಹೇಳಿದ್ದಾರೆ.

ಸಾಲಕ್ಕೆ ಸಿಲುಕಿಸುವ ಚೀನಾದ ತಂತ್ರಕ್ಕೆ ಶ್ರೀಲಂಕಾದ ಹಂಬನ್ ತೋಟ ಬಂದರು ಉದಾಹರಣೆ. ಅದನ್ನು ಈಗ ಚೀನೀ ಕೈಗಾರಿಕೆಗಳಿಗೆ ಮಾರಾಟ ಮಾಡಲಾಗಿದೆ. ಇನ್ನು ಪಾಕಿಸ್ತಾನವು ಅದ್ಯಾವ ಪರಿಯ ಸಾಲದಲ್ಲಿ ಸಿಲುಕಿದೆ ಅಂದರೆ, ಅದೀಗ ಚೀನೀಯರ ಆಳ್ವಿಕೆಯಲ್ಲಿ ಗುಲಾಮನಂತೆ ಬದುಕುತ್ತಿದೆ ಎಂದಿದ್ದಾರೆ.

1962ರ ಇಂಡೋ- ಚೀನಾ ಯುದ್ಧದ ನಂತರ ಚೀನೀ ಸೇನೆ ಹತ್ತಾರು ಕಿಲೋಮೀಟರ್ ನಷ್ಟು ಲಡಾಖ್ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾ ಬರುತ್ತಿದೆ. ಲಡಾಖ್ ಜನರಿಗೆ ಕುರಿ, ಮೇಕೆಗಳನ್ನು ಮೇಯಿಸುವುದಕ್ಕೆ ಹುಲ್ಲುಗಾವಲೇ ಇಲ್ಲದಂತಾಗಿದೆ ಎಂದು ವಾಂಗ್ ಚುಕ್ ಹೇಳಿದ್ದಾರೆ.

English summary

Sonam Wang Chuk Supports Boycott China Products Campaign

#BoycottChinesProducts now supported by education reformer Sonam Wang Chuk. He also mentioned Pakistan and Sri Lanka situation.
Story first published: Monday, June 1, 2020, 10:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X