ಸವರನ್ ಗೋಲ್ಡ್ ಬಾಂಡ್ ಸ್ಕೀಮ್: ಆ. 3ರಿಂದ ಖರೀದಿ, ಗ್ರಾಮ್ ಗೆ 5334 ರು.

ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2020- 21 ಸಿರೀಸ್ Vಕ್ಕೆ ಚಂದಾದಾರರು ಆಗಲು ಆಗಸ್ಟ್ 3ರಿಂದ ಆಗಸ್ಟ್ 7, 2020ರ ತನಕ ಅವಕಾಶ ಇದೆ. ವಿತರಣೆ ಬೆಲೆ ಎಂದು ಪ್ರತಿ ಗ್ರಾಮ್ ಗೆ 5334 ರುಪಾಯಿಯನ್ನು ನಿಗದಿ ಮಾಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಏಪ್ರಿಲ್- ಸೆಪ್ಟೆಂಬರ್ ಮಧ್ಯೆ ಆರು ಕಂತಿನಲ್ಲಿ ಸವರನ್ ಗೋಲ್ಡ್ ಬಾಂಡ್ ಬಿಡುಗಡೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು.

ಚಂದಾದಾರರಾಗಲು ದರ ನಿಗದಿ ಮಾಡುವುದಕ್ಕೆ ಒಂದು ಪದ್ಧತಿ ಅನುಸರಿಸಲಾಗುತ್ತಿದೆ. ಯಾವ ದಿನದಿಂದ ಸಬ್ ಸ್ಕ್ರಿಪ್ಷನ್ ಶುರುವಾಗುತ್ತದೋ ಅದರ ಹಿಂದಿನ ವಾರದ ಮೂರು ಬಿಜಿನೆಸ್ (ಕಾರ್ಯ ನಿರ್ವಹಣೆ ಇರುವ) ದಿನದಲ್ಲಿ 999 ಶುದ್ಧತೆ ಇರುವ ಚಿನ್ನದ ಮುಕ್ತಾಯ ಬೆಲೆ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಈ ಹಿಂದೆ ಅಂದರೆ ಜೂನ್ 3ರಿಂದ 5ನೇ ತಾರೀಕು ಪ್ರತಿ ಗ್ರಾಮ್ ಗೆ 4677 ರುಪಾಯಿ ಆಗಿತ್ತು ಎಂದು ಆರ್ ಬಿಐ ಹೇಳಿದೆ.

ಹಿಂದಿನ ರೀತಿಯಂತೆಯೇ ಈ ಸಲವೂ ಆನ್ ಲೈನ್ ನಲ್ಲಿ ಹೂಡಿಕೆಗೆ ಪ್ರತಿ ಗ್ರಾಮ್ ಗೆ 50 ರುಪಾಯಿ ರಿಯಾಯಿತಿ ದೊರೆಯುತ್ತದೆ. ಆದ್ದರಿಂದ ಈ ಹೂಡಿಕೆದಾರರಿಗೆ ಪ್ರತಿ ಗ್ರಾಮ್ 5284 ರುಪಾಯಿ ಆಗುತ್ತದೆ. ಈ ಬಾಂಡ್ ನಲ್ಲಿ ಕನಿಷ್ಠ ಹೂಡಿಕೆ ಅಂದರೆ 1 ಗ್ರಾಮ್ ಚಿನ್ನ. ಇನ್ನು ಅವಧಿ ಎಂಟು ವರ್ಷಗಳು. ಐದು ವರ್ಷದ ನಂತರ ಹೂಡಿಕೆ ಹಿಂತೆಗೆದುಕೊಳ್ಳಬಹುದು.

ಸವರನ್ ಗೋಲ್ಡ್ ಬಾಂಡ್ ಸ್ಕೀಮ್: ಆ. 3ರಿಂದ ಖರೀದಿ, ಗ್ರಾಮ್ ಗೆ 5334 ರು

ಅರ್ಹ ಹಿಂದೂ ಅವಿಭಕ್ತ ಕುಟುಂಬ (HUF), ಟ್ರಸ್ಟ್, ವಿಶ್ವವಿದ್ಯಾಲಯಗಳು ಹಾಗೂ ಚಾರಿಟಬಲ್ ಟ್ರಸ್ಟ್ ಗಳು ಸಹ ಈ ಬಾಂಡ್ ಗಳ ಮೇಲೆ ಹೂಡಿಕೆ ಮಾಡಬಹುದು. ಆರ್ಥಿಕ ವರ್ಷದಲ್ಲಿ (ಏಪ್ರಿಲ್- ಮಾರ್ಚ್) ಹೂಡಿಕೆದಾರರು ಕನಿಷ್ಠ 1 ಗ್ರಾಮ್ ಹೂಡಿಕೆ ಮಾಡಬೇಕು. ಗರಿಷ್ಠ ಹೂಡಿಕೆ ಎಂದಲ್ಲಿ ವೈಯಕ್ತಿಕವಾಗಿ 4 ಕೇಜಿ, ಹಿಂದೂ ಅವಿಭಕ್ತ ಕುಟುಂಭ 4 ಕೇಜಿ ಮತ್ತು ಟ್ರಸ್ಟ್ ಹಾಗೂ ಅಂಥ ಸಂಸ್ಥೆಗಳು 20 ಕೇಜಿ ಖರೀದಿ ಮಾಡಬಹುದು.

ಹೂಡಿಕೆದಾರರು ಚಿನ್ನದ ಗಟ್ಟಿಯಲ್ಲಿ (ಫಿಸಿಕಲ್ ಗೋಲ್ಡ್) ಹೂಡಿಕೆ ಮಾಡುವ ಬದಲಿಗೆ ಹಣಕಾಸು ಉಳಿತಾಯ ಸ್ವರೂಪದಲ್ಲಿ ಆಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಶುರು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+