ಬೆಂಗಳೂರು, ಜುಲೈ 12: ಟಾಟಾ ಸ್ಟಾರ್ ಬಕ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಬೆಂಗಳೂರಿನ ಗ್ರಾಹಕರಿಗಾಗಿ ಸ್ಥಳೀಯವಾಗಿ -ಸಂಬಂಧಿತ ಅನುಭವವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಪಾನೀಯಗಳು ಮತ್ತು ಆಹಾರ ಪದಾರ್ಥಗಳ ಅತ್ಯಾಕರ್ಷಕ ಶ್ರೇಣಿಯನ್ನು ಇಂದು ಪ್ರಕಟಿಸಿದೆ.
ಪಿಕ್ಕೊ ಕಪ್ ಗಾತ್ರದ ಪಾನೀಯಗಳು, ರುಚಿಕಟ್ಟಾದ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ, ಅತ್ಯಾಕರ್ಷಕವಾದ ಮಿಲ್ಕ್ ಶೇಕ್ ಗಳ ಶ್ರೇಣಿ. ಮಸಾಲ ಚಾಯ್, ಏಲಕ್ಕಿ ಚಾಯ್ ಮತ್ತು ಬೈಟ್-ಸೈಜ್ಡ್ ಸ್ನ್ಯಾಕ್ಸ್, ಹಂಚಿಕೊಳ್ಳಬಹುದಾದ ಆಹಾರ ಮತ್ತು ಸ್ಯಾಂಡ್‌ವಿಚ್‌ಗಳ ಶ್ರೇಣಿ ಹೀಗೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸುತ್ತಿದೆ. ಈ ಉತ್ಪನ್ನಗಳ ಬಿಡುಗಡೆ ಮೂಲಕ ಕಂಪನಿಯು ತನ್ನ ಗ್ರಾಹಕರಿಗಾಗಿ ಆಕರ್ಷಕವಾದ ಬೆಲೆಯಲ್ಲಿ ಒದಗಿಸಲಿದೆ.
ಬ್ರ್ಯಾಂಡ್ 'ಪಿಕ್ಕೊ' ಹೆಸರಿನಲ್ಲಿ ಅತ್ಯಾಕರ್ಷಕವಾದ ಬೆಲೆಯಲ್ಲಿ ಹೊಸ ಕಪ್ ಗಾತ್ರದ ಪಾನೀಯವನ್ನು ಪರಿಚಯಿಸಿದೆ. ಪಿಕ್ಕೊ ಎಂದರೆ ಇಟಾಲಿಯನ್ ಬಾಷೆಯಲ್ಲಿ ಚಿಕ್ಕದು ಎಂದರ್ಥ. ಇದು ಹೊಸ ಮತ್ತು ಮೊದಲ ಬಾರಿಗೆ ಕಾಫಿ ಕುಡಿಯುವವರಿಗೆ ಒಂದು ಸಿಪ್ ರುಚಿಯನ್ನು ಸವಿಯುವ ಅವಕಾಶವನ್ನು ನೀಡುತ್ತದೆ. ಇದಲ್ಲದೇ ಗ್ರಾಹಕರು ಕ್ಯಾಪುಸಿನೊ ಅಥವಾ ಲ್ಯಾಟ್ಟೆಯನ್ನು ಸವಿಯಬಹುದಾಗಿದೆ. ಅದೇ ರೀತಿ 175 ರೂಪಾಯಿಗಳಿಂದ ಆರಂಭವಾಗುವ ಸಗ್ನೇಚರ್ ಹಾಟ್ ಚಾಕೊಲೇಟ್, ಏಲಕ್ಕಿ ಚಹಾ ಅಥವಾ ಮಸಾಲ ಚಹಾ, ಫಿಲ್ಟರ್ ಕಾಫಿಯ ರೀಫ್ರೇಸ್ ಕಪ್ ಅನ್ನು ಆನಂದಿಸಬಹುದಾಗಿದೆ.

* ಕಾಫಿಯನ್ನು ಇಷ್ಟಪಡುವ ನಗರದಲ್ಲಿ ಈ ಮೆನು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಬೆಂಗಳೂರಿನಲ್ಲಿ ದಕ್ಷಿಣ ಭಾರತೀಯರ ನೆಚ್ಚಿನ ಫಿಲ್ಟರ್ ಕಾಫಿಯನ್ನು ಪರಿಚಯಿಸಿದ್ದು, ಇದರ ಬೆಲೆ 180 ರೂಪಾಯಿಗಳಿಂದ ಆರಂಭವಾಗಲಿದೆ.
* ನಮ್ಮ ಸಿಗ್ನೇಚರ್ ಮಿಲ್ಕ್ ಶೇಕ್ ಗಳ ಶ್ರೇಣಿಯನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಚಾಕೊಲೇಟ್, ಸ್ಟ್ರಾಬೆರಿ ಮತ್ತು ವೆನಿಲ್ಲಾ ಫ್ಲೇವರ್ ಗಳಲ್ಲಿ ಈ ಮಿಲ್ಕ್ ಶೇಕ್ ಗಳು ಲಭ್ಯವಿವೆ. ಇವುಗಳ ಬೆಲೆ 175 ರೂಪಾಯಿಗಳಿಂದ ಆರಂಭವಾಗುತ್ತದೆ.
* ಸ್ಥಳೀಯ ಫ್ಲೇವರ್ ಗಳನ್ನು ಪರಿಚಯಿಸುತ್ತಿದ್ದು, ಹೊಚ್ಚ ಹೊಸದಾದ ಮಸಾಲ ಚಹಾ ಮತ್ತು ಏಲಕ್ಕಿ ಚಹಾವನ್ನು ನಿಮ್ಮ ದೈನಂದಿನ ಆಹ್ಲಾದಕರಕ್ಕಾಗಿ ನೀಡುತ್ತಿದ್ದೇವೆ. ನಿಮ್ಮ ಸ್ನೇಹಿತರು, ಸಹಪಾಠಿಗಳು ಮತ್ತು ಕುಟುಂಬ ಸದಸ್ಯರು ಇಷ್ಟಪಡುವಂತಹ ಚಹಾ ಇದಾಗಿದ್ದು, ಇದರ ಬೆಲೆ 180 ರೂಪಾಯಿಗಳಿಂದ ಆರಂಭವಾಗಲಿದೆ.
* ಅತ್ಯಾಕರ್ಷಕವಾದ ಹೊಸ ಆಹಾರ ಮೆನುವು ತ್ರೀ ಡಿಪ್ ನ್ಯಾಚೋಸ್, ಹ್ಯಾಜೆಲ್ ನಟ್ ಟ್ರಯಾಂಗಲ್, ಭುನಾ ಚಿಕನ್ ಪಫ್, ಮಲಬಾರಿ ಚಿಕನ್ Rap ಮತ್ತು ಚಾಕೊಲೇಟ್ ಎಕ್ಲೇರ್‌ನಿಂದ ಕೂಡಿದೆ. ಇವುಗಳ ಬೆಲೆ 150 ರೂಪಾಯಿಗಳಿಂದ ಆರಂಭವಾಗುತ್ತದೆ.
* ಇದೇ ಮೊದಲ ಬಾರಿಗೆ, ಗ್ರೀನ್ ಗುಡ್ ನೆಸ್ ಸ್ಪಿನಾಚ್ ಪಾನಿನಿ ಸ್ಯಾಂಡ್ ಚಿವ್, ಮಸಾಲೆಯುಕ್ತ ಕಾಟೇಜ್ ಚೀಸ್ ಫೊಕಾಸಿಯಾ ಸ್ಯಾಂಡ್ ವಿಚ್, ಹರ್ಬೆಡ್ ಚಿಕನ್ ಫೋಕಾಸಿಯಾ ಸ್ಯಾಂಡ್ ವಿಚ್ ಮತ್ತು ತಂದೂರಿ ಚಿಕನ್ ಪಾನಿನಿ ಸ್ಯಾಂಡ್ ವಿಚ್ ನಂತಹ ಹೊಸ ಸ್ಯಾಂಡ್ ವಿಚ್ ಗಳು ಸ್ಟೋರ್ ನಲ್ಲಿ ಲಭ್ಯವಿವೆ. ಇವುಗಳ ಬೆಲೆ 360 ರೂಪಾಯಿಗಳಿಂದ ಆರಂಭವಾಗುತ್ತವೆ.
ಈ ಬಗ್ಗೆ ಮಾತನಾಡಿದ ಟಾಟಾ ಸ್ಟಾರ್ ಬಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಸುಶಾಂತ್ ದಾಸ್ ಅವರು, ''ಟಾಟಾ ಸ್ಟಾರ್ ಬಕ್ಸ್ ನಲ್ಲಿ ನಾವು ಕೇವಲ ಗ್ರಾಹಕರನ್ನು ನೋಡುವುದಿಲ್ಲ. ನಾವು ಜನರನ್ನು ನೋಡುತ್ತೇವೆ. ನಮ್ಮ ಸ್ಟೋರ್ ಗಳಲ್ಲಿ ಸೌಹಾರ್ದತೆಯ ವಾತಾವರಣ ಮತ್ತು ಸಂಸ್ಕೃತಿಯನ್ನು ನಿರ್ಮಾಣ ಮಾಡುತ್ತೇವೆ. ನಾವು ನಮ್ಮ ಸೇವೆಯಲ್ಲಿ ಸ್ಥಳೀಯವಾದ ಸೂಕ್ಷ್ಮ ವಿಚಾರಗಳನ್ನು ಸೇರ್ಪಡೆ ಮಾಡುವ ಮೂಲಕ ನಮ್ಮ ಕೊಡುಗೆಗಳಲ್ಲಿ ಗಣನೀಯ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಆಹಾರ ಪದಾರ್ಥಗಳು ಮತ್ತು ರೂಪಾಂತರಗಳ ಮೂಲಕ ನಮ್ಮ ಗ್ರಾಹಕರು ಪ್ರತಿ ಬಾರಿ ಭೇಟಿ ಮಾಡಿದಾಗಲೂ ಅವರಿಗೆ ಅತ್ಯುತ್ತಮ ಸ್ಟಾರ್ ಬಕ್ಸ್ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಆವಿಷ್ಕಾರಗಳು ಮತ್ತು ಹೊಸ ಉತ್ಪನ್ನಗಳ ಬಿಡುಗಡೆಗಳು ದೇಶಾದ್ಯಂತ ಮುಂಚಿನ ಪೀಳಿಗೆಯ ಕಾಫಿ ಪ್ರೇಮಿಗಳಿಗೆ ಉತ್ತೇಜನ ನೀಡುತ್ತದೆ'' ಎಂದು ತಿಳಿಸಿದರು.


Click it and Unblock the Notifications