ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2019ರ ಸ್ಟಾರ್ಟ್ಅಪ್ ರ್ಯಾಂಕಿಗ್‌ನಲ್ಲಿ ಕರ್ನಾಟಕವು ಗುಜರಾತ್ ನಂತರದ ಸ್ಥಾನ ಪಡೆದಿದ್ದು ಎರಡನೇ ಸ್ಥಾನವನ್ನು ಹೊಂದಿದೆ.
ಶುಕ್ರವಾರ ಬಿಡುಗಡೆಗೊಂಡ ರ್ಯಾಂಕಿಂಗ್‌ನಲ್ಲಿ ಸ್ಟಾರ್ಟ್‌ಅಪ್ ಹಬ್ ಎಂದೇ ಖ್ಯಾತಿಯ ಕರ್ನಾಟಕವು ದ್ವಿತೀಯ ಸ್ಥಾನದಲ್ಲಿದ್ದು, ಕೇರಳವು ಉನ್ನತ ಪ್ರದರ್ಶನ ನೀಡಿದ ರಾಜ್ಯವಾಗಿದೆ.
ರಾಜ್ಯಗಳನ್ನು ಉದ್ಯಮಸ್ನೇಹಿಗಳನ್ನಾಗಿ ಉತ್ತೇಜಿಸುವ ಉದ್ದೇಶದಿಂದ ಈ ಸ್ಟಾರ್ಟಪ್ ರ್ಯಾಂಕಿಂಗ್ ಅನ್ನು ಬಿಡುಗಡೆ ಮಾಡುವ ಪರಿಪಾಠವನ್ನು ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಆರಂಭಿಸಿತ್ತು. ಹೊಸ ಹೊಸ ಅನ್ವೇಷಣೆಗಳು, ಉದ್ಯಮದ ಭಿನ್ನ ಆಲೋಚನೆಗಳಿಗೆ ರಾಜ್ಯಮಟ್ಟದಲ್ಲಿಯೇ ಸೂಕ್ತ ಬೆಂಬಲ ಸಿಗುವಂತೆ ಮಾಡುವುದು ಇದರ ಒಟ್ಟು ಉದ್ದೇಶ.

ಈ ಸ್ಪರ್ಧೆಯಲ್ಲಿ ಒಟ್ಟು 22 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಪಾಲ್ಗೊಂಡಿದ್ದವು. ರ್ಯಾಂಕಿಂಗ್‌ನ ಜೊತೆ ಜೊತೆಗೆ ಯಾವ ವಿಭಾಗಳಲ್ಲಿ ಸುಧಾರಣೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆಯೂ ಸಲಹೆಯನ್ನು ನೀಡಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ರ್ಯಾಂಕಿಂಗ್ ಪಡೆದ ರಾಜ್ಯಗಳನ್ನು ಅಭಿನಂದಿಸಿದ್ದಾರೆ.
ಇನ್ನು ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನಕಾರರಾಗಿ ಆಯ್ಕೆಯಾದವು.
"ಏಕರೂಪತೆಯನ್ನು ಸ್ಥಾಪಿಸಲು ಮತ್ತು ಶ್ರೇಯಾಂಕ ಪ್ರಕ್ರಿಯೆಯಲ್ಲಿ ಪ್ರಮಾಣೀಕರಣವನ್ನು ಖಚಿತಪಡಿಸಿಕೊಳ್ಳಲು, 'ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವನ್ನು' ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
"ದೆಹಲಿಯನ್ನು ಹೊರತುಪಡಿಸಿ ಕೇಂದ್ರಾಡಳಿತ ಪ್ರದೇಶಗಳು ಮತ್ತು ಅಸ್ಸಾಂ ಹೊರತುಪಡಿಸಿ ಈಶಾನ್ಯ ಭಾರತದ ಎಲ್ಲಾ ರಾಜ್ಯಗಳನ್ನು 'ವೈ' ವರ್ಗದಲ್ಲಿ ಇರಿಸಲಾಗಿದೆ. ದೆಹಲಿ ಸೇರಿ ಇತರೆ ಎಲ್ಲಾ ರಾಜ್ಯಗಳು 'ಎಕ್ಸ್' ವರ್ಗದಲ್ಲಿವೆ."
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications