ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಈ ರೈತರಿಗೆ ನಾವು ಶೂನ್ಯ ಬಡ್ಡಿದರದಲ್ಲಿ ಬರೋಬ್ಬರಿ 15,841.48 ಕೋಟಿ ರೂಪಾಯಿ ಸಾಲವನ್ನು ನೀಡುವ ಮೂಲಕ ಸರಕಾರ ಆಸರೆಯಾಗಿದೆ. ನಮ್ಮ ಕಾಂಗ್ರೆಸ್ ರೈತಸ್ನೇಹಿ ಸರ್ಕಾರ ಎಂದು ಶಾಸಕ, ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ತಿಳಿಸಿದರು.
ನಾವು ಸರಿಯಾದ ಸಮಯದಲ್ಲಿ ಕೃಷಿ ಸಾಲವನ್ನು ನೀಡುವ ಮೂಲಕ ರೈತರಿಗೆ ಸ್ಪಂದನೆಯನ್ನು ನೀಡಿದೆ. ಆ ಮೂಲಕ ರೈತರ ಅಭ್ಯುದಯಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ. ಕಳೆದ ಬಾರಿಗಿಂತ 775.49 ಕೋಟಿ ಹೆಚ್ಚುವರಿ ಸಾಲ ವಿತರಣೆ ಮಾಡಲಾಗಿದೆ. ಈ ಮೂಲಕ ಅನ್ನದಾತನ ನೆರವಿಗೆ ಸರ್ಕಾರ ಧಾವಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಕಾಂಗ್ರೆಸ್ ಎಂದಿಗೂ ಕೂಡಾ ನುಡಿದಂತೆ ನಡೆಯುವ ಪಕ್ಷವಾಗಿದೆ. ಬೆಲೆ ಏರಿಕೆಯ ಈ ಸಂದರ್ಭದಲ್ಲಿ ನಾವು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಇದರಿಂದಾಗಿ ಜನರಿಗೆ ಸಹಾಯ ಮಾಡಿದ್ದೇವೆ. ಜನರ ಎಲ್ಲ ಸಮಸ್ಯೆ ಬಗೆಹರಿಸುವಲ್ಲಿ ನಮ್ಮ ಸರ್ಕಾರವು ಮುಂದಿದೆ," ಎಂದು ಸಚಿವರು ತಿಳಿಸಿದರು.
ನಾವು ರೈತರಿಗೆ ಸಹಾಯವಾಗುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಈವರೆಗೆ ನಾವು 19,97,607 ರೈತರಿಗೆ 15841.48 ಕೋಟಿ ರೂಪಾಯಿ ಕೃಷಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಣೆ ಮಾಡಿದ್ದೇವೆ. ಅಗತ್ಯ ಸಂದರ್ಭದಲ್ಲಿ ರೈತರ ನಮ್ಮ ಸರ್ಕಾರವು ನೆರವಾಗಿದೆ," ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ
"ರಾಜ್ಯದಲ್ಲಿ ನಾವು ಎಂದೂ ಕೂಡಾ ಇಂತಹ ಭೀಕರ ಬರಗಾಲ ಬಂದಿರಲಿಲ್ಲ. 48 ಸಾವಿರ ಹೆಕ್ಟೇರ್ ಪ್ರದೇಶವು ಬರಗಾಲಕ್ಕೆ ಒಳಗಾಗಿದೆ. ಎಲ್ಲ ರೈತರಿಗೂ ಬರ ಪರಿಹಾರ ಶೀಘ್ರವೇ ನೀಡಲು ನಮ್ಮ ರಾಜ್ಯ ಸರ್ಕಾರ ಮುಂದಾಗಲಿದೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ರೈತರ 72 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಕೇಂದ್ರವಾಗಲಿ, ರಾಜ್ಯವಾಗಲಿ ರೈತರ ಸಂಕಷ್ಟಕ್ಕೆ ಸದಾ ಸ್ಪಂದಿಸುವುದು ನಮ್ಮ ಕಾಂಗ್ರೆಸ್ ಸರ್ಕಾರ," ಎಂದು ದಿನೇಶ್ ಗೂಳಿಗೌಡ ತಿಳಿಸಿದರು.
24600 ಕೋಟಿ ರೂಪಾಯಿ ಬೆಳೆ ಸಾಲ
21 ಡಿಸಿಸಿ ಬ್ಯಾಂಕ್ ಹಾಗೂ 6040 ಪ್ಯಾಕ್ಸ್ (ಕೃಷಿ ಪತ್ತಿನ ಸಹಕಾರ ಸಂಘಗಳು) ರೈತರಿಗೆ 24600 ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಇದರಲ್ಲಿ ಈಗ 19,97,607 ರೈತರಿಗೆ 15841.48 ಕೋಟಿ ರೂಪಾಯಿ ಸಾಲವನ್ನು ನೀಡಲಾಗಿದೆ. ಈ ಗುರಿಯನ್ನು ನಾವು ಶೀಘ್ರವೇ ತಲುಪುವ ನಿರೀಕ್ಷೆ ಹೊಂದಿದ್ದೇವೆ ಎಂದು ಗೂಳಿಗೌಡ ಹೇಳಿದರು.


Click it and Unblock the Notifications