ಭಾರತೀಯ ಷೇರು ಮಾರುಕಟ್ಟೆ ಸೋಮವಾರ (ಮಾರ್ಚ್ 23, 2020) ಮಾಮೂಲಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಸೆಕ್ಯೂರಿಟೀಸ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ವಕ್ತಾರರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ಎನ್ ಎಸ್ ಇ ಹಾಗೂ ಬಿಎಸ್ ಇ ಎರಡೂ ಪ್ರತ್ಯೇಕವಾಗಿ ಈ ಬಗ್ಗೆ ತಿಳಿಸಿದ್ದು, ಎಲ್ಲ ಸೆಗ್ಮೆಂಟ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂಬ ಮಾಹಿತಿ ದೊರೆತಿದೆ.
ಕೊರೊನಾ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಕಾರ್ಯ ನಿರ್ವಹಿಸುವ ಅವಧಿ ಕಡಿಮೆ ಮಾಡಬಹುದು ಎಂಬ ಮಾತು ಚಾಲ್ತಿಯಲ್ಲಿದೆ. ಇನ್ನು ಆರ್ಥಿಕ ರಾಜಧಾನಿ ಮುಂಬೈ ಅನ್ನು ಮಾರ್ಚ್ 31ನೇ ತಾರೀಕಿನ ತನಕ ಬಂದ್ ಮಾಡಬೇಕು ಎಂದು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಷೇರುಪೇಟೆ ಕಾರ್ಯ ನಿರ್ವಹಿಸುವ ಬಗ್ಗೆ ಅನುಮಾನಗಳಿದ್ದವು.
ಸೆಬಿ ಮತ್ತು ಆರ್ಥಿಕ ಸಚಿವಾಲಯವು ಷೇರುಪೇಟೆಯ ಕಾರ್ಯ ನಿರ್ವಹಿಸುವ ಅವಧಿ ಕಡಿಮೆ ಮಾಡಬಹುದು ಅಥವಾ ಕೊನೆ ಆಯ್ಕೆಯಾಗಿ ಮಾರ್ಕೆಟ್ ಕಾರ್ಯ ನಿರ್ವಹಿಸುವುದನ್ನೇ ಸ್ಥಗಿತ ಮಾಡುವ ಬಗ್ಗೆ ಆಲೋಚಿಸುತ್ತಿದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿತ್ತು.

ಒಂದು ವೇಳೆ ಮಾರ್ಕೆಟ್ ಕಾರ್ಯ ಚಟುವಟಿಕೆ ನಿಲ್ಲಿಸುವುದು ಅಂತಾದರೆ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಕಾಂಟ್ರ್ಯಾಕ್ಟ್ ಮುಂಚಿತವಾಗಿಯೇ ಮುಗಿಸಬಹುದು ಎಂದು ತಿಳಿಸಲಾಗಿತ್ತು.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ



Click it and Unblock the Notifications