ಭಾರತದ ಈಕ್ವಿಟಿ ಮಾರ್ಕೆಟ್ ಸೂಚ್ಯಂಕಗಳಾದ ಬಿಎಸ್ ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಸತತ ಏಳನೇ ದಿನವಾದ ಶುಕ್ರವಾರ (ಅಕ್ಟೋಬರ್ 9, 2020) ಏರಿಕೆ ದಾಖಲಿಸಿತು. ಸೆನ್ಸೆಕ್ಸ್ ಸೂಚ್ಯಂಕ 327 ಪಾಯಿಂಟ್ ಏರಿಕೆ ಕಂಡು, 40,509 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು. ಇನ್ನು ನಿಫ್ಟಿ 50 ಸೂಚ್ಯಂಕವು 80 ಪಾಯಿಂಟ್ ಹೆಚ್ಚಳ ಆಗುವುದರೊಂದಿಗೆ 11,914 ಪಾಯಿಂಟ್ ನೊಂದಿಗೆ ವ್ಯವಹಾರ ಪೂರ್ಣಒಳಿಸಿತು.
ಬ್ಯಾಂಕ್ ಷೇರುಗಳು ಇಂದಿನ ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಎಲ್ ಅಂಡ್ ಟಿ, ಒಎನ್ ಜಿಸಿ, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಏರಿಕೆಯನ್ನು ದಾಖಲಿಸಿದವು.
ಸನ್ ಫಾರ್ಮಾ, ಏಷ್ಯನ್ ಪೇಂಟ್, ನೆಸ್ಟ್ಲೆ ಇಂಡಿಯಾ, ಅಲ್ತ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್ ಕಂಪೆನಿಯ ಷೇರುಗಳು ಸೆನ್ಸೆಕ್ಸ್ ನಲ್ಲಿ ಇಳಿಕೆ ಕಂಡವು. ನಿಫ್ಟಿಯ ಪಿಎಸ್ ಯು ಬ್ಯಾಂಕ್ ಸೂಚ್ಯಂಕ 3%ಗೂ ಹೆಚ್ಚು ಏರಿಕೆ ಕಂಡಿತು. ನಿಫ್ಟಿಯ ಹಣಕಾಸು ಸೇವೆಗಳು, ನಿಫ್ಟಿ ಐಟಿ ಸೂಚ್ಯಂಕಗಳು ಏರಿದವು. ಇಂದಿನ ಸೆಷನ್ ನಲ್ಲಿ ನಿಫ್ಟಿ ಫಾರ್ಮಾಸ್ಯುಟಿಕಲ್ ಷೇರುಗಳು ಭಾರೀ ನಷ್ಟ ಅನುಭವಿಸಿದವು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು 9.5% ಕುಗ್ಗಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಅಭಿಪ್ರಾಯ ಪಟ್ಟಿದೆ. ಇನ್ನು ಪ್ರಥಮ ತ್ರೈಮಾಸಿಕದಲ್ಲಿ ಜಿಡಿಪಿ 23.9 ಪರ್ಸೆಂಟ್ ಕುಗ್ಗಿದೆ.


Click it and Unblock the Notifications