ಭಾರತದ ಹತ್ತು ಮೌಲ್ಯಯುತ ಕಂಪೆನಿಗಳ ಪೈಕಿ 9ರ ಮಾರುಕಟ್ಟೆ ಮೌಲ್ಯವು ನವೆಂಬರ್ 2ರಿಂದ 6ರ ಮಧ್ಯೆ 2,30,219.82 ಕೋಟಿ ರುಪಾಯಿ ಹೆಚ್ಚಳವಾಗಿದೆ. ಕಳೆದ ವಾರ ಎಚ್ ಡಿಎಫ್ ಸಿ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಭರ್ಜರಿ ಏರಿಕೆ ದಾಖಲಿಸಿವೆ. ಕಳೆದ ವಾರ ಸೆನ್ಸೆಕ್ಸ್ ಸೂಚ್ಯಂಕ 2,278.99 ಪಾಯಿಂಟ್ ಗಳು ಅಥವಾ 5.75 ಪರ್ಸೆಂಟ್ ಹೆಚ್ಚಳವಾಗಿದೆ.
ಅಂದ ಹಾಗೆ, ದೇಶದ ಅತ್ಯಂತ ಮೌಲ್ಯಯುತ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಒಂದನ್ನು ಹೊರತುಪಡಿಸಿ, ಉಳಿದ ಒಂಬತ್ತು ಕಂಪೆನಿಗಳ ಮೌಲ್ಯದಲ್ಲಿ ಇಳಿಕೆ ಆಗಿದೆ. ಯಾವ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂಬ ವಿವರ ಹೀಗಿದೆ.
ಎಚ್ ಡಿಎಫ್ ಸಿ ಬ್ಯಾಂಕ್ 68,430.18 ಕೋಟಿ
ಎಚ್ ಡಿಎಫ್ ಸಿ 38,484.05 ಕೋಟಿ
ಐಸಿಐಸಿಐ ಬ್ಯಾಂಕ್ 34,892.98 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 33,649.7 ಕೋಟಿ
ಇನ್ಫೋಸಿಸ್ 22,489.7 ಕೋಟಿ
ಟಿಸಿಎಸ್ 16,285.35 ಕೋಟಿ
ಭಾರ್ತಿ ಏರ್ ಟೆಲ್ 8,810.72 ಕೋಟಿ
ಹಿಂದೂಸ್ತಾನ್ ಯೂನಿಲಿವರ್ 5,169.03 ಕೋಟಿ
ಎಚ್ ಸಿಎಲ್ ಟೆಕ್ನಾಲಜೀಸ್ 2008.11 ಕೋಟಿ

ಆದರೆ, ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಕೆಟ್ ವ್ಯಾಲ್ಯೂ 17,141.77 ಕೋಟಿ ರುಪಾಯಿ ಇಳಿಕೆ ಆಗಿದೆ.


Click it and Unblock the Notifications