ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ (ಸೆಪ್ಟೆಂಬರ್ 28, 2020) ಭರ್ಜರಿ ಏರಿಕೆ ಕಂಡವು. ಸೆನ್ಸೆಕ್ಸ್ ಸೂಚ್ಯಂಕವು 593 ಪಾಯಿಂಟ್ ಗಳ ಏರಿಕೆ ಕಂಡು 37,981 ಪಾಯಿಂಟ್ ನೊಂದಿಗೆ ದಿನಾಂತ್ಯದ ವ್ಯವಹಾರ ಮುಗಿಸಿದರೆ, ನಿಫ್ಟಿ 50 ಸೂಚ್ಯಂಕವು 177 ಪಾಯಿಂಟ್ ಹೆಚ್ಚಳವಾಗಿ, ದಿನದ ಕೊನೆಗೆ 11,227 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು.
ಹೂಡಿಕೆದಾರರ ಸಂಪತ್ತು 3 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಯಿತು. ಬಿಎಸ್ ಇ ಸೂಚ್ಯಂಕದಲ್ಲಿ ಲಿಸ್ಟ್ ಆಗಿರುವ ಕಂಪೆನಿಗಳ ಸರಾಸರಿ ಮಾರುಕಟ್ಟೆ ಬಂಡವಾಳ ಮೌಲ್ಯವು ಸೆಪ್ಟೆಂಬರ್ 25ನೇ ತಾರೀಕಿನಂದು 152.28 ಲಕ್ಷ ಕೋಟಿ ರುಪಾಯಿ ಇದ್ದದ್ದು, 155.10 ಲಕ್ಷ ಕೋಟಿ ರುಪಾಯಿಗೆ ಹೆಚ್ಚಳವಾಯಿತು.
ಸಕಾರಾತ್ಮಕವಾದ ಜಾಗತಿಕ ಪ್ರಭಾವ, ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರ ಆಸಕ್ತಿ ಹೆಚ್ಚಾಗಿದೆ. ಬ್ಯಾಂಕಿಂಗ್ ಹಾಗೂ ಹಣಕಾಸು ಷೇರುಗಳು ಹೆಚ್ಚಿನ ಗಳಿಕೆ ಕಂಡವು. ಪವರ್, ಬ್ಯಾಂಕಿಂಗ್, ಸಾರ್ವಜನಿಕ ವಲಯ, ವಾಹನ ಹಾಗೂ ರಿಯಾಲ್ಟಿ ವಲಯದಲ್ಲಿ ಚಟುವಟಿಕೆ ಕಂಡುಬಂತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಇಂಡಸ್ ಇಂಡ್ ಬ್ಯಾಂಕ್
ಬಜಾಜ್ ಫೈನಾನ್ಸ್
ಆಕ್ಸಿಸ್ ಬ್ಯಾಂಕ್
ಪವರ್ ಗ್ರಿಡ್ ಕಾರ್ಪೊರೇಷನ್
ಟಾಟಾ ಮೋಟಾರ್ಸ್

ನಿಫ್ಟಿಯಲ್ಲಿ ಭಾರೀ ಇಳಿಕೆ ಕಂಡ ಪ್ರಮುಖ ಷೇರುಗಳು
ಹಿಂದೂಸ್ತಾನ್ ಯುನಿಲಿವರ್
ವಿಪ್ರೋ
ನೆಸ್ಟ್ಲೆ
ಇನ್ಫೋಸಿಸ್


Click it and Unblock the Notifications