ಭಾರತದ ಷೇರು ಮಾರುಕಟ್ಟೆಯ ಹತ್ತು ಅತ್ಯಂತ ಮೌಲ್ಯಯುವ ಕಂಪೆನಿಗಳ ಪೈಕಿ ನಾಲ್ಕು ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು (ಮಾರ್ಕೆಟ್ ಕ್ಯಾಪಿಟಲೈಸೇಷನ್) ಸೆಪ್ಟೆಂಬರ್ 7ರಿಂದ 11, 2020ರ ಮಧ್ಯೆ 3,01,847.99 ಕೋಟಿ ರುಪಾಯಿ ಏರಿಕೆ ಕಂಡಿವೆ. ಐದು ದಿನದ ಷೇರು ಮಾರ್ಕೆಟ್ ವ್ಯವಹಾರದಲ್ಲಿ ನಾಲ್ಕು ಕಂಪೆನಿಯ ಮೌಲ್ಯ ಮೂರು ಲಕ್ಷ ಕೋಟಿಗೂ ಹೆಚ್ಚು ಏರಿಕೆ ಕಂಡಿವೆ. ಈ ಹೆಚ್ಚಳದ ಮುಂಚೂಣಿಯಲ್ಲಿ ಇದ್ದ ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 15 ಲಕ್ಷ ಕೋಟಿ ರುಪಾಯಿಯನ್ನು ದಾಟಿತು.
ದೇಶದ ಅತ್ಯಂತ ಮೌಲ್ಯಯುತ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 2,51,067.2 ಕೋಟಿ ಹೆಚ್ಚಳವಾಗಿ, ಕಳೆದ ಶುಕ್ರವಾರಕ್ಕೆ ಬಂಡವಾಳ ಮೌಲ್ಯ 15,68,015.09 ಕೋಟಿ ರುಪಾಯಿಯನ್ನು ತಲುಪಿತು. ರಿಲಯನ್ಸ್ ಇಂಡಸ್ಟ್ರೀಸ್ ನ ರೀಟೇಲ್ ವ್ಯವಹಾರದಲ್ಲಿ ಶೇಕಡಾ ನಲವತ್ತರಷ್ಟು ಪಾಲನ್ನು, ಅಂದರೆ ಎರಡು ಸಾವಿರ ಕೋಟಿ ಅಮೆರಿಕನ್ ಡಾಲರ್ ಗೆ ಅಮೆಜಾನ್ ಗೆ ಮಾರಾಟ ಮಾಡುವ ಚರ್ಚೆ ನಡೆದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದ ಮೇಲೆ ಷೇರಿನ ಬೆಲೆಯಲ್ಲಿ ಹೆಚ್ಚಳ ಕಂಡಿತು.
ಟಿಸಿಎಸ್, ಎಚ್ ಯುಎಲ್ ಮತ್ತಿತರ ಕಂಪೆನಿ
ಅದಕ್ಕೂ ಮುನ್ನ ರಿಲಯನ್ಸ್ ರೀಟೇಲ್ ನಲ್ಲಿ ಸಿಲ್ವರ್ ಲೇಕ್ ನಿಂದ 7500 ಕೋಟಿ ರುಪಾಯಿ ಹೂಡಿಕೆ ಆಗಲಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಕಳೆದ ವಾರ ಮಾರುಕಟ್ಟೆ ಬಂಡವಾಳ ಹೆಚ್ಚಳವಾದ ಇತರ ಕಂಪೆನಿ ಷೇರುಗಳೆಂಡರೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಹಿಂದೂಸ್ತಾನ್ ಯುನಿಲಿವರ್ ಹಾಗೂ ಇನ್ಫೋಸಿಸ್. ಇನ್ನು ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ, ಭಾರ್ತಿ ಏರ್ ಟೆಲ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಟಿಸಿ ಕಂಪೆನಿ ಷೇರುಗಳು ನಷ್ಟ ಅನುಭವಿಸಿ, 54,801.02 ಕೋಟಿ ಇಳಿಕೆ ಕಂಡವು.
ನಷ್ಟ ಅನುಭವಿಸಿದ ಷೇರುಗಳು ಯಾವುವು?
ಟಿಸಿಎಸ್ 31.501.27 ಕೋಟಿ ರುಪಾಯಿ, ಇನ್ಫೋಸಿಸ್ 11,138.31 ಕೋಟಿ ರುಪಾಯಿ ಹಾಗೂ ಹಿಂದೂಸ್ತಾನ್ ಯುನಿಲಿವರ್ 8,141.21 ಕೋಟಿ ರುಪಾಯಿ ಮಾರುಕಟ್ಟೆ ಮೌಲ್ಯ ಹೆಚ್ಚಾದವು. ಎಚ್ ಡಿಎಫ್ ಸಿ ಬ್ಯಾಂಕ್ 22,727.92 ಕೋಟಿ, ಭಾರ್ತಿ ಏರ್ ಟೆಲ್ 17,157.73 ಕೋಟಿ, ಕೊಟಕ್ ಮಹೀಂದ್ರಾ ಬ್ಯಾಂಕ್ 9,608.05 ಕೋಟಿ, ಐಟಿಸಿ 3,383.8 ಕೋಟಿ, ಐಸಿಐಸಿಐ ಬ್ಯಾಂಕ್ 1823.57 ಕೋಟಿ, ಎಚ್ ಡಿಎಫ್ ಸಿ 99.95 ಕೋಟಿ ರುಪಾಯಿ ಇಳಿಕೆ ಆದವು. ಸೆನ್ಸೆಕ್ಸ್ 497.37 ಪಾಯಿಂಟ್ ಗಳಿಕೆ ಕಂಡಿತು.
ಭಾರತದ ಟಾಪ್ ಟೆನ್ ಕಂಪೆನಿಗಳು
ಭಾರತದ ಷೇರು ಮಾರುಕಟ್ಟೆಯಲ್ಲಿ ಅತ್ಯಂತ ಮೌಲ್ಯಯುತ ಟಾಪ್ ಟೆನ್ ಷೇರುಗಳಿವು: ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಯುಎಲ್, ಇನ್ಫೋಸಿಸ್, ಎಚ್ ಡಿಎಫ್ ಸಿ, ಭಾರ್ತಿ ಏರ್ ಟೆಲ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಐಟಿಸಿ. ಇವುಗಳನ್ನು ಮಾರುಕಟ್ಟೆ ಬಂಡವಾಳ ಮೌಲ್ಯದ ಆಧಾರದ ಮೇಲೆ ಗಣನೆಗೆ ತೆಗೆದುಕೊಳ್ಳಲಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications