ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸತತ ಐದನೇ ಸೆಷನ್ ಆದ ಗುರುವಾರ (ಜನವರಿ 28, 2021) ಕೂಡ ಭಾರೀ ಇಳಿಕೆ ಕಂಡವು. ಸೆನ್ಸೆಕ್ಸ್ 535.57 ಪಾಯಿಂಟ್ ಗಳ ಕುಸಿತ ಕಂಡು, 46,874.36 ಪಾಯಿಂಟ್ ನೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿತು. ಇನ್ನು ನಿಫ್ಟಿ 50 ಸೂಚ್ಯಂಕವು 150 ಪಾಯಿಂಟ್ ಇಳಿಕೆಯಾಗಿ, 13817.50 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.
ಇನ್ಫರ್ಮೇಷನ್ ಟೆಕ್ನಾಲಜಿ, ವಾಹನ ಹಾಗೂ ಎಫ್ ಎಂಸಿಜಿ ವಲಯದ ಷೇರುಗಳಲ್ಲಿ ಮಾರಾಟ ಕಂಡುಬಂತು. ಈ ದಿನದ ವಹಿವಾಟಿನಲ್ಲಿ 1543 ಕಂಪೆನಿಯ ಷೇರುಗಳು ಏರಿಕೆ ಕಂಡರೆ, 1285 ಕಂಪೆನಿಯ ಷೇರುಗಳ ಬೆಲೆ ಇಳಿಯಿತು. 161 ಕಂಪೆನಿಗಳ ಷೇರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ನಿಫ್ಟಿ ಬ್ಯಾಂಕ್ ಹೊರತುಪಡಿಸಿ ಉಳಿದ ಎಲ್ಲ ವಲಯದ ಸೂಚ್ಯಂಕಗಳು ಇಳಿಕೆ ಕಂಡವು. ಬಿಎಸ್ ಇ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ತಲಾ 0.4 ಪರ್ಸೆಂಟ್ ಇಳಿಕೆ ಕಂಡಿವೆ.
ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಆಕ್ಸಿಸ್ ಬ್ಯಾಂಕ್ 6.11%
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2.43%
ಐಒಸಿ 1.31%
ಶ್ರೀ ಸಿಮೆಂಟ್ಸ್ 1.25%
ಹೀರೋ ಮೋಟೋಕಾರ್ಪ್ 1.16%

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ -3.80%
ಮಾರುತಿ ಸುಜುಕಿ -3.59%
ವಿಪ್ರೋ -3.26%
ಎಚ್ ಡಿಎಫ್ ಸಿ ಬ್ಯಾಂಕ್ -2.71%
ಪವರ್ ಗ್ರಿಡ್ ಕಾರ್ಪೊರೇಷನ್ -2.63%


Click it and Unblock the Notifications