ಕೇಂದ್ರ ಬಜೆಟ್ 2021 ಮಂಡಿಸಿದ ಮರು ದಿನ ಕೂಡ ಷೇರು ಪೇಟೆಯಲ್ಲಿ ಭರ್ಜರಿ ಓಟ ಮುಂದುವರಿದಿದೆ. ಮಂಗಳವಾರದ ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್ 1318.64 ಪಾಯಿಂಟ್ ಗಳಷ್ಟು ಮೇಲೇರಿ 49,919.25ರಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 50 ಸೂಚ್ಯಂಕವು 378.05 ಪಾಯಿಂಟ್ ನಷ್ಟು ಹೆಚ್ಚಳವಾಗಿ, 14,659.25 ಪಾಯಿಂಟ್ ನಲ್ಲಿತ್ತು. ಆ ಮೂಲಕ ಸೋಮವಾರದ ಗೂಳಿ ಓಟ ಮುಂದುವರಿದಿದೆ.
34,300 ಪಾಯಿಂಟ್ ಗಡಿ ದಾಟಿ ವ್ಯವಹಾರ ನಡೆಸುತ್ತಿರುವ ಬ್ಯಾಂಕ್ ನಿಫ್ಟಿ ಹೊಸ ಎತ್ತರಕ್ಕೆ ಏರಿದೆ. ಜಾಗತಿಕ ಮಾರುಕಟ್ಟೆಗಳ ಪ್ರಭಾವದಿಂದ ಭಾರತದ ಷೇರುಪೇಟೆಯಲ್ಲೂ ಉತ್ಸಾಹ ಕಂಡುಬರುತ್ತಿದೆ. ಬಹುತೇಕ ಎಲ್ಲ ವಲಯದ ಷೇರುಗಳು ಏರಿಕೆ ಹಾದಿಯಲ್ಲಿ ಇರುವುದು ಕಂಡುಬರುತ್ತದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಟಾಟಾ ಮೋಟಾರ್ಸ್ 9.33%
ಲಾರ್ಸನ್ ಅಂಡ್ ಟೂಬ್ರೋ 7.27%
ಎಚ್ ಡಿಎಫ್ ಸಿ ಬ್ಯಾಂಕ್ 5.20%
ಯುಪಿಎಲ್ 5.29%
ಆಕ್ಸಿಸ್ ಬ್ಯಾಂಕ್ 4.56%

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ ಷೇರುಗಳು ಮತ್ತು ಪರ್ಸೆಂಟ್
ಹೀರೋ ಮೋಟೋಕಾರ್ಪ್ -0.96%
ಎಚ್ ಡಿಎಫ್ ಸಿ ಲೈಫ್ -0.46%
ಡಾ. ರೆಡ್ಡೀಸ್ ಲ್ಯಾಬ್ಸ್ -0.26%


Click it and Unblock the Notifications