ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಈಗ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಈಗಾಗಲೇ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಮಾರ್ಚ್ 31 ಕೊನೆಯ ಗಡುವಾಗಿದೆ. ಈಗ ಮಾರುಕಟ್ಟೆ ನಿಯಂತ್ರಕರು ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಎಲ್ಲ ಷೇರುಪೇಟೆ ಹೂಡಿಕೆದಾರರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಮಾರ್ಚ್ ಅಂತ್ಯದೊಳಗೆ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.
ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ, ಕೆವೈಸಿ ಪೂರ್ಣವಾಗಿಲ್ಲ ಎಂದು ಪರಿಗಣನೆ ಮಾಡಲಾಗುತ್ತದೆ. ಹಾಗೆಯೇ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವವರೆಗೆ ಸೆಕ್ಯೂರಿಟಿಗಳಿಗೆ ಮತ್ತು ಇತರೆ ವಹಿವಾಟುಗಳಿಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ. ಹಾಗೆಯೇ ಗಡುವಿಗೂ ಮುನ್ನ ಅಂದರೆ ಮಾರ್ಚ್ 31ಕ್ಕೂ ಮುನ್ನ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಸೆಬಿ ಸೂಚನೆ ನೀಡಿದ್ದು ಯಾಕೆ ನೋಡಿ...

ಸೆಬಿ ಸೂಚನೆ ನೀಡಿದ್ದು ಯಾಕೆ?
ಭಾರತದ ಮಾರುಕಟ್ಟೆ ನಿಯಂತ್ರಕರು ಆದ ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೂಡಿಕೆದಾರರು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ತಿಳಿಸಿದ್ದಾರೆ. ಪ್ರಮುಖವಾಗಿ ಮಾರ್ಚ್ ಬಳಿಕವೂ ವಹಿವಾಟು ಸರಳವಾಗಿ ನಡೆಸಲು ಸಾಧ್ಯವಾಗಲು, ವಹಿವಾಟನ್ನು ಸುಗಮವಾಗಿ ನಡೆಸಲು ಸಾಧ್ಯವಾಗಬೇಕಾದರೆ, ಈ ಎರಡೂ ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ ಎಂದು ಸೆಬಿ ತಿಳಿಸಿದೆ.
ಸಿಬಿಡಿಟಿ ಪ್ಯಾನ್ ಕಾರ್ಡ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಸೇರಿದಂತೆ ಸರ್ಕಾರದ ಹಲವಾರು ಸೇವೆಗಳನ್ನು ನಾವು ಪಡೆಯಬೇಕಾದರೆ, ನಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದು ಅತೀ ಮುಖ್ಯವಾಗಿದೆ. ಪ್ರಸ್ತುತ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದಕ್ಕೆ ಕೇಂದ್ರ ಸರ್ಕಾರವು ಮಾರ್ಚ್ 31 ಕೊನೆಯ ದಿನಾಂಕ ಎಂದು ಹೇಳಿದೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸಸ್ (ಸಿಬಿಡಿಟಿ) ಪ್ರಕಾರ ಮಾರ್ಚ್ 31, 2024ಕ್ಕೂ ಮುನ್ನವೇ ಪ್ಯಾನ್ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ನೀವು ಮಾರ್ಚ್ 31ರವರೆಗೆ 1000 ರೂಪಾಯಿ ದಂಡವನ್ನು ಪಾವತಿಸಿ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದು. ಇದಕ್ಕೂ ಮುನ್ನ 500 ರೂಪಾಯಿ ದಂಡವಾಗಿತ್ತು. ಅದಕ್ಕೂ ಮುನ್ನ ಪ್ಯಾನ್ ಆಧಾರ್ ಲಿಂಕ್ ಮಾಡಲು ಯಾವುದೇ ಶುಲ್ಕ ಇರಲಿಲ್ಲ.
ಮಾರ್ಚ್ 31ಕ್ಕೂ ಮುನ್ನ ಪ್ಯಾನ್ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ನಿಮಗೆ ಯಾವುದೇ ಹಣಕಾಸು ಕಾರ್ಯ ನಡೆಸಲು ತೊಂದರೆಯಾಗಲಿದೆ. ಆಧಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಸಾಧ್ಯವಾಗದು. ಯಾರು ಡೆಡ್‌ಲೈನ್‌ಗೂ ಮುನ್ನ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದಿದ್ದರೆ, 10 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.


Click it and Unblock the Notifications