ಸಾಮಾನ್ಯವಾಗಿ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಒಂದಲ್ಲ ಎರಡಲ್ಲ ಸಾಕಷ್ಟು ತೊಂದರೆ ಕಾಣುತ್ತದೆ. ಸ್ಟಾಕ್ ಮಾರುಕಟ್ಟಯಲ್ಲಿ ಹೂಡಿಕೆ ಮಾಡುವಾಗ ತಜ್ಞರ ಅಭಿಪ್ರಾಯವನ್ನು ಪಡೆಯುವುದು ಅತೀ ಮುಖ್ಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ನೀವು ಆರಂಭಿಕವಾಗಿ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಾದರೆ, ಮಾರುಕಟ್ಟೆ ಬಗ್ಗೆ ಅಧಿಕ ಮಾಹಿತಿ ತಿಳಿದಿರುವುದು ಮುಖ್ಯವಾಗುತ್ತದೆ.
ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅತೀ ಅಪಾಯಕಾರಿಯಾದರೂ ಕೂಡಾ ಹೂಡಿಕೆಯಿಂದ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಇಂದಿನ ಯುವಕರು ತಜ್ಞರ ಅಭಿಪ್ರಾಯವನ್ನು ಪಡೆದು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಆದರೆ ಹೂಡಿಕೆಗೂ ಮುನ್ನ ಕೆಲವೊಂದು ವಿಚಾರ ತಿಳಿದಿರುವುದು ಮುಖ್ಯವಾಗುತ್ತದೆ.
ಸಾಮಾನ್ಯವಾಗಿ ಜನರು ಹೂಡಿಕೆ ಮಾಡುವಾಗ ತಾವು ಯಾವ ತಪ್ಪನ್ನು ಮಾಡಬಾರದೋ ಅದನ್ನೇ ಮಾಡಿರುವ ನಿದರ್ಶನಗಳನ್ನು ನಾವು ನೋಡಿದ್ದೇವೆ. ಹೂಡಿಕೆ ಜ್ಞಾನ ಇಲ್ಲದ ಕಾರಣ ಹಲವಾರು ತಪ್ಪುಗಳನ್ನು ಮಾಡುತ್ತಾರೆ. ಷೇರುಪೇಟೆಯಲ್ಲಿ ಆರಂಭಿಕವಾಗಿ ಹೂಡಿಕೆ ಮಾಡುವಾಗ ನೀವು ಪ್ರಮುಖವಾಗಿ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
1. ಉಚಿತ ಹೂಡಿಕೆ ಟಿಪ್ಸ್ ಹಿಂದೆ ಬೀಳಬೇಡಿ
ಒಂದು ಸ್ಟಾಕ್‌ನಲ್ಲಿ ಬೇರೆ ಜನರು ಕೂಡಾ ಹೂಡಿಕೆ ಮಾಡುತ್ತಾರೆ ಎಂದು ನಾವು ಕೂಡಾ ಹೂಡಿಕೆ ಮಾಡುವುದು ಅತೀ ಕೆಟ್ಟ ಐಡಿಯಾ. ಉಚಿತ ಹೂಡಿಕೆ ಟಿಪ್ಸ್ ಅನ್ನು ನೀವು ನಂಬಬೇಡಿ. ಈಕ್ವಿಟೀಸ್‌ನಲ್ಲಿ ಹೂಡಿಕೆ ಮಾಡುವಾಗ ಅದರ ಬಗ್ಗೆ ಅಧಿಕ ಮಾಹಿತಿ ತಿಳಿದಿರುವುದು ಅತೀ ಮುಖ್ಯವಾಗಿದೆ. ಸ್ಟಾಕ್ ಮಾರುಕಟ್ಟೆ ಹೂಡಿಕೆ ಎಂದಿಗೂ ಅಪಾಯಕಾರಿ. ಆದರೆ ನೀವು ಹೂಡಿಕೆ ಮಾಡುವ ಸ್ಟಾಕ್ ಸುರಕ್ಷಿತ ಎಂಬ ಬಗ್ಗೆ ನಿಮಗೆ ಭರವಸೆ ಉಂಟಾದ ಬಳಿಕ ಮಾತ್ರ ಹೂಡಿಕೆ ಮಾಡಿ. ರಿಸರ್ಚ್ ಮಾಡಿಯೇ ಹೂಡಿಕೆ ಮಾಡಿ.
2. ಅಧಿಕ ಮೊತ್ತ ಹೂಡಿಕೆ ಮಾಡಬೇಡಿ
ನೀವು ನಿರಂತರವಾಗಿ ಟ್ರೇಡಿಂಗ್ ಮಾಡುವಾಗ ಬ್ರೋಕರೇಜ್ ಮತ್ತು ಇತರೆ ಶುಲ್ಕವನ್ನು ಕೂಡಾ ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದಾಗಿ ನಿರಂತರವಾಗಿ ಟ್ರೇಡಿಂಗ್ ಮಾಡುವುದನ್ನು ತಪ್ಪಿಸಿ. ವಿಶ್ವಾಸದಿಂದ ನಿರ್ಧಾರವನ್ನು ಕೈಗೊಳ್ಳಿ, ಆ ಬಳಿಕವೇ ವಹಿವಾಟು ನಡೆಸಿ. ಹಾಗೆಯೇ ಯಾವುದೇ ಹೂಡಿಕೆ ಮಾಡುವಾಗ ಆ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಿ. ನೀವು ಅಧಿಕ ಮೊತ್ತವನ್ನು ಹೂಡಿಕೆ ಮಾಡದಿದ್ದರೆ, ನಿಯಮಿತ ಮೊತ್ತವನ್ನು ಹೂಡಿಕೆ ಮಾಡಿದರೆ ನಿಮಗೆ ತೊಂದರೆ ಉಂಟಾಗಲಾರದು. 3-4 ಇಂಡಸ್ಟ್ರಿಯಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಸುರಕ್ಷಿತ.
3. ಅನವಶ್ಯಕ ರಿಸ್ಕ್ ತೆಗೆದುಕೊಳ್ಳಬೇಡಿ
ಯಾವುದೇ ಅಪಾಯಕಾರಿ ಸ್ಟಾಕ್‌ನಲ್ಲಿ ನಿಮ್ಮ ಎಲ್ಲ ಮೊತ್ತವನ್ನು ಹೂಡಿಕೆ ಮಾಡುವುದು ಅತೀ ಉತ್ತಮವಲ್ಲ. ಅತೀ ಹೆಚ್ಚು ರಿಟರ್ನ್ ಅನ್ನು ಪಡೆಯಬೇಕು ಎಂಬ ಆಸೆಯಲ್ಲಿ ಅನವಶ್ಯಕ ರಿಸ್ಕ್ ತೆಗೆದುಕೊಳ್ಳಬೇಡಿ. ಅಧಿಕ ಲಾಭವನ್ನು ಪಡೆಯಬೇಕೆಂಬ ಆಸೆಯು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುವುದಕ್ಕಿಂತ ಅಧಿಕ ಮುಖ್ಯವಲ್ಲ. ನೀವು ಹೂಡಿಕೆ ಮಾಡುವಾಗ ಅನವಶ್ಯಕವಾದ ರಿಸ್ಕ್ ಅನ್ನು ನಿಮ್ಮ ಮೈಮೇಲೆ ಎಳೆದುಕೊಳ್ಳುವುದು ಉತ್ತಮವಲ್ಲ. ಅಪಾಯವನ್ನು ಎಂದಿಗೂ ಕೂಡಾ ಸರಿದೂಗಿಸಬೇಕು.
4. ಹೂಡಿಕೆಯನ್ನೇ ಗ್ಯಾಬ್ಲಿಂಗ್ ಮಾಡಬೇಡಿ
ಹೂಡಿಕೆ ಮಾಡುವುದು ಗ್ಯಾಬ್ಲಿಂಗ್ ಅಲ್ಲ. ಹೂಡಿಕೆ ಮಾಡುವಾಗ ಜನರು ಎಂದಿಗೂ ಗ್ಲಾಬ್ಲಿಂಗ್ ಅನ್ನು ಬದಿಗಿಟ್ಟು ಹೂಡಿಕೆ ಮಾಡುವುದು ಉತ್ತಮ. ಸರಿಯಾದ ಮಾಹಿತಿಯನ್ನು ಪಡೆದ ಬಳಿಕವೇ ಹೂಡಿಕೆಯ ನಿರ್ಧಾರವನ್ನು ಮಾಡುವುದು ಉತ್ತಮ. ಒಟ್ಟಾರೆಯಾಗಿ ಯಾವುದೋ ಸ್ಟಾಕ್ ಅನ್ನು ಖರೀದಿ ಮಾಡದಿರಿ. ತಿಂಗಳುಗಳಲ್ಲಿ ದುಪ್ಪಟ್ಟು ರಿಟರ್ನ್ ಪಡೆಯುವ ಬಯಕೆಯಲ್ಲಿ ಯಾವುದೋ ಸ್ಟಾಕ್‌ನಲ್ಲಿ ಹೂಡಿಕೆ ಮಾಡದಿರಿ.
5. ಅವಾಸ್ತವಿಕ ನಿರೀಕ್ಷೆಯನ್ನು ಹೊಂದಿರಬೇಡಿ
ನೀವು ಅವಾಸ್ತವಿಕ ನಿರೀಕ್ಷೆಯನ್ನು ಹೊಂದಿರುವುದು ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಕೆಲವೊಮ್ಮೆ ನೀವು ಅದೃಷ್ಟದಿಂದ ಉತ್ತಮ ರಿಟರ್ನ್ ಅನ್ನು ಪಡೆಯಬಹುದು. ಅತೀ ಸುಲಭವಾಗಿ ಉತ್ತಮ ರಿಟರ್ನ್ ಅನ್ನು ಕೂಡಾ ಪಡೆಯಲು ಸಾಧ್ಯವಾಗಬಹುದು. ಆದರೆ ಬಳಿಕ ಭಾರೀ ನಷ್ಟ ಉಂಟಾಗಬಹುದು. ಹಲವಾರು ವರ್ಷಗಳಿಂದ ಒಂದು ಸ್ಟಾಕ್‌ನಲ್ಲಿ ಹೂಡಿಕೆ ಮಾಡುತ್ತಿರುವವರು ಪಡೆಯುವ ರಿಟರ್ನ್ ಅನ್ನು ನೀವು ಕೂಡಾ ಪಡೆಯಬಹುದು ಎಂಬ ನಂಬಿಕೆಯನ್ನು ಇಟ್ಟುಕೊಳ್ಳಬೇಡಿ. ಯಾವುದೇ ಸಂದರ್ಭದಲ್ಲಿ ನಷ್ಟ ಉಂಟಾಗಬಹುದು.


Click it and Unblock the Notifications