ಯುಎಸ್ ಫೆಡ್ ಬಡ್ಡಿದರಗಳ ಬಡ್ಡಿದರ ಏರಿಕೆಗೆ ವಿರಾಮ ಹಾಕಿದ ಬಳಿಕ ಭಾರತೀಯ ಷೇರುಪೇಟೆಯು ಗುರುವಾರ, ನವೆಂಬರ್ 2 ರಂದು ಏರಿಕೆಯಾಗಿದೆ. ಸ್ಟಾಕ್ ಮಾರುಕಟ್ಟೆಯಲ್ಲಿ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಗಮನಾರ್ಹವಾಗಿ ಲಾಭ ಕಂಡಿದೆ.
ಕಳೆದ ರಾತ್ರಿ, ಫೆಡ್ ಶೇಕಡ 5.25-5.50 ರಷ್ಟು ಪಾಲಿಸಿ ದರವನ್ನು ಇರಲಿದೆ. ಜೆರೋಮ್ ಪೊವೆಲ್ ಮತ್ತೊಂದು ದರ ಹೆಚ್ಚಳದ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕದಿದ್ದರೂ, ಏರಿಕೆಯ ಬಗ್ಗೆ ನೇರವಾಗಿ ಸುಳಿವು ನೀಡಿಲ್ಲ. ಇದು ಭಾರತೀಯ ಷೇರು ಪೇಟೆಯ ಮೇಲೆ ಪ್ರಭಾವ ಬೀರಿದೆ.

"ಮಾರುಕಟ್ಟೆಯ ಮುಂದಿನ ದೊಡ್ಡ ಕೇಂದ್ರಬಿಂದುವು ಶುಕ್ರವಾರದ ವೇತನದಾರರ ಡೇಟಾವಾಗಿದೆ. ಇದು ಆರ್ಥಿಕತೆಯು ಅಕ್ಟೋಬರ್‌ನಲ್ಲಿ 180,000 ಉದ್ಯೋಗಗಳನ್ನು ಸೇರಿಸಲಾಗಿದೆ ಎಂದು ತೋರಿಸುವ ನಿರೀಕ್ಷೆಯಿದೆ. ಹಿಂದಿನ ತಿಂಗಳು 336,000 ಹೆಚ್ಚಳಕ್ಕಿಂತ ಕಡಿಮೆಯಾಗಲಿದೆ," ಎಂದು ರಾಯಿಟರ್ಸ್ ವರದಿ ಮಾಡಿದೆ.
ನಿಫ್ಟಿ 50 ಇಂದು ಹಿಂದಿನ ಮುಕ್ತಾಯದ 18,989.15 ರಿಂದ 19,120 ಕ್ಕೆ ಏರಿಕೆಯಾಗಿ ಇಂದು ವಹಿವಾಟು ಆರಂಭಿಸಿದೆ. ಇಂಟ್ರಾಡೇ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 19,175.25 ಮತ್ತು 19,064.15 ಆಗಿದೆ. ನಿಫ್ಟಿ 50 ಸುಮಾರು 144 ಪಾಯಿಂಟ್‌ಗಳು ಅಥವಾ ಶೇಕಡ 0.76 ರಷ್ಟು ಏರಿಕೆಯಾಗಿ 19,133.25 ಕ್ಕೆ ವಹಿವಾಟು ಅಂತ್ಯ ಮಾಡಿದೆ.
ಸೆನ್ಸೆಕ್ಸ್ ಇಂದು ಹಿಂದಿನ ಮುಕ್ತಾಯದ 63,591.33 ರಿಂದ 64,033.40ಕ್ಕೆ ಏರಿಕೆಯಾಗಿ ವಹಿವಾಟು ಆರಂಭಿಸಿದೆ. ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 64,202.64 ಮತ್ತು 64,202.64 ಆಗಿದೆ. ಸೆನ್ಸೆಕ್ಸ್ 490 ಅಂಕಗಳು ಅಥವಾ ಶೇಕಡ 0.77 ರಷ್ಟು ಏರಿಕೆಯಾಗಿ 64,080.90ಕ್ಕೆ ಸ್ಥಿರವಾಗಿದೆ.
ಮಿಡ್ ಮತ್ತು ಸ್ಮಾಲ್‌ಕ್ಯಾಪ್‌ಗಳು ಹೆಚ್ಚಿನ ಲಾಭವನ್ನು ಗಳಿಸಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ.1.20ರಷ್ಟು ಜಿಗಿದಿದ್ದು, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ.0.97ರಷ್ಟು ಏರಿಕೆ ಕಂಡಿದೆ. ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು ಹಿಂದಿನ ಸೆಷನ್‌ನಲ್ಲಿ ಸುಮಾರು 310.2 ಲಕ್ಷ ಕೋಟಿ ರೂಪಾಯಿಯಿಂದ 313.2 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಹೂಡಿಕೆದಾರರನ್ನು ಒಂದೇ ಸೆಷನ್‌ನಲ್ಲಿ ಸುಮಾರು 3 ಲಕ್ಷ ಕೋಟಿ ರೂಪಾಯಿಯಷ್ಟು ಶ್ರೀಮಂತರಾಗಿದ್ದಾರೆ.
ಇಂಡಸ್‌ಇಂಡ್ ಬ್ಯಾಂಕ್, ಕೋಲ್ಗೇಟ್ ಪಾಮೊಲಿವ್ (ಇಂಡಿಯಾ), ವೊಡಾಫೋನ್ ಐಡಿಯಾ, ಮ್ಯಾಕ್ರೋಟೆಕ್ ಡೆವಲಪರ್‌ಗಳು, ಒಬೆರಾಯ್ ರಿಯಾಲ್ಟಿ ಮತ್ತು ಪರ್ಸಿಸ್ಟೆಂಟ್ ಸಿಸ್ಟಮ್ಸ್ ಸೇರಿದಂತೆ 170 ಸ್ಟಾಕ್‌ಗಳು ಬಿಎಸ್‌ಇಯಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ಈ ನಡುವೆ ಯುಎಸ್ ಫೆಡ್ ಪಾಲಿಸಿ ನಿರ್ಧಾರವು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ್ದರಿಂದ 4 ಗಂಟೆ ಸುಮಾರಿಗೆ ಬ್ರೆಂಟ್ ಕ್ರೂಡ್ ಶೇಕಡಾ 1.29 ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 85.72 ಡಾಲರ್‌ಗೆ ತಲುಪಿದೆ. ಭಾರತೀಯ ರೂಪಾಯಿ ಯುಎಸ್ ಡಾಲರ್ ಎದುರು ಸುಮಾರು 4 ಪೈಸೆ ಏರಿಕೆಯಾಗಿ 83.25ಕ್ಕೆ ತಲುಪಿದೆ ಎಂದು ಬ್ಲೂಮ್‌ಬರ್ಗ್ ಅಂಕಿಅಂಶಗಳು ತೋರಿಸಿವೆ.


Click it and Unblock the Notifications