ಭಾರತೀಯ ಮಾರುಕಟ್ಟೆಗಳು 54,000 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಹೂಡಿಕೆದಾರರು ಈಗ ಅತ್ಯಂತ ಬೇಗನೇ ಬದಲಾಗುತ್ತಿದ್ದಾರೆ. ಕೊಂಚ ದಿನಗಳ ಹಿಂದೆ ಸ್ಟಾಕ್ ಮಾರುಕಟ್ಟೆಯ ಒಲವನ್ನ ಕಳೆದುಕೊಂಡಿದ್ದ ಹೂಡಿಕೆದಾರರು ಈಗ ಕೊಂಚ ಹಿಂತಿರುಗುತ್ತಿದ್ದಾರೆ.
ಉದಾಹರಣೆಗೆ ಐಟಿಯು ಯುಎಸ್‌ನಲ್ಲಿನ ಆರ್ಥಿಕ ಹಿಂಜರಿತದ ಭಯ ಮತ್ತು ಬೆಳವಣಿಗೆಯ ದರಗಳು ಕುಸಿಯುವ ಸಾಧ್ಯತೆಯ ನಡುವೆ ಮಾರಾಟದ ಒತ್ತಡಕ್ಕೆ ಸಿಲುಕಿದೆ. ಈ ನಡುವೆ ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿವೆ.
ಈ ಕುಸಿತ ಕಂಡ ಷೇರು ಮೌಲ್ಯಮಾಪನದಲ್ಲಿ ಅತೀ ಅಗ್ಗದ ಷೇರಾಗಿದೆ. ಹಾಗಾದರೆ ನಾವು ಈ ಷೇರನ್ನು ಖರೀದಿ ಮಾಡಬಹುದೇ?, ನಷ್ಟದಲ್ಲಿ ಇರುವ ಈ ಸ್ಟಾಕ್ ಅನ್ನು ಖರೀದಿ ಮಾಡಬಹುದೇ ಎಂದು ತಿಳಿಯಲು ಮುಂದೆ ಓದಿ..
ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಷೇರು ಭಾರೀ ಕುಸಿತ
ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್‌ನಲ್ಲಿನ ಷೇರುಗಳು ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಹೊಸ 52 ವಾರದ ಕನಿಷ್ಠ ಮಟ್ಟವನ್ನು ತಲುಪಿದೆ. ಸದ್ಯ ಸ್ಟಾಕ್ ಬೆಲೆ ರೂ 615 ಆಗಿದೆ. ಷೇರುಗಳು ರೂ 622 ಕ್ಕೆ ಸ್ವಲ್ಪ ಚೇತರಿಸಿಕೊಂಡಿವೆ. ಆದರೆ 52 ವಾರಗಳ ಕನಿಷ್ಠ ಮಟ್ಟದಿಂದ ಕೊಂಚವಷ್ಟೇ ಚೇತರಿಕೆ ಕಂಡಿದೆ. ವಾಸ್ತವವಾಗಿ, ಕಂಪನಿಯ ಸ್ಟಾಕ್ ಈಗ 52 ವಾರಗಳ ಗರಿಷ್ಠ ಮಟ್ಟವಾದ ರೂ 1174 ರಿಂದ ಭಾರೀ ಕೆಳಗಿದೆ.
ಸಂಸ್ಥೆಯ ಬಗ್ಗೆ ಮಾಹಿತಿ ಇಲ್ಲಿದೆ
ಕಂಪನಿಯನ್ನು ಮೊದಲು ಟಾಟಾ ಸ್ಪಾಂಜ್ ಐರನ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಹೈ ಅಲಾಯ್ ಸ್ಟೀಲ್ ಅನ್ನು ತಯಾರಿಸುತ್ತದೆ. ಪ್ರಾಥಮಿಕವಾಗಿ ಆಟೋ ಸೆಕ್ಟರ್ ಮತ್ತು ವೈರ್ ರೋಪ್ ಉದ್ಯಮಕ್ಕಾಗಿ ಇದರ ಉತ್ಪನ್ನ ಬಳಕೆಯಾಗುತ್ತದೆ. ಉಕ್ಕಿನ ಸ್ಥಾವರವು ತನ್ನ ಅಧೀನದ ಗಣಿಯಿಂದ ಕಬ್ಬಿಣದ ಅದಿರನ್ನು ಬಳಸುತ್ತದೆ. ಜಮ್ಶೆದ್‌ಪುರದಲ್ಲಿ ಸ್ಥಾಪಿಸಲಾದ ಉಕ್ಕಿನ ಸ್ಥಾವರವು ಎಲೆಕ್ಟ್ರಿಕ್ ಆರ್ಕ್ ಫರ್ನೇಸ್‌ನಲ್ಲಿ ಹಾಟ್ ಮೆಟಲ್ ಅನ್ನು ಬಳಸುವ ಭಾರತದ ಮೊದಲ ಉಕ್ಕಿನ ಸ್ಥಾವರವಾಗಿದೆ. ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ದ್ವಿತೀಯ ಉಕ್ಕಿನ ವಲಯದ ಬಳಕೆಗಾಗಿ ಸ್ಪಾಂಜ್ ಕಬ್ಬಿಣವನ್ನು ತಯಾರಿಸುತ್ತದೆ. ಒಟ್ಟು 0.90 ಮಿಲಿಯನ್ ಟನ್ ಸಾಮರ್ಥ್ಯ ಹೊಂದಿದೆ.
ಟಾಟಾ ಸ್ಟೀಲ್ ಲಾಂಗ್ ಸ್ಟಾಕ್ ಏಕೆ ಖರೀದಿಸಬೇಕು?
ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್‌ನ ಸ್ಟಾಕ್ ಖರೀದಿಸಲು ಉತ್ತಮ ಸ್ಟಾಕ್ ಆಗಿದೆ. ಹಣಕಾಸು ವರ್ಷ 2022 ಕ್ಕೆ, ಕಂಪನಿಯು ಸುಮಾರು 6801 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ. ಹಿಂದಿನ ವರ್ಷ 4749 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಹಣಕಾಸು ವರ್ಷ 2022 ಕ್ಕೆ 630 ಕೋಟಿಗಳ ನಿವ್ವಳ ಲಾಭವನ್ನು ವರದಿ ಮಾಡಿದೆ. ಹಣಕಾಸು ವರ್ಷ 2021 ಕ್ಕೆ 572 ಕೋಟಿ ಲಾಭವನ್ನು ವರದಿ ಮಾಡಿದೆ. ಒಟ್ಟಾರೆಯಾಗಿ, ಇದು ಕಂಪನಿಗೆ ಉತ್ತಮ ವರ್ಷವಾಗಿದೆ. ಕಂಪನಿಯ ಷೇರುಗಳು ಪ್ರತಿ ಷೇರಿಗೆ ರೂ 12.50 ಲಾಭಾಂಶದೊಂದಿಗೆ ಲಭ್ಯವಿದೆ.
ಎಷ್ಟು ಖರೀದಿ ಮಾಡಬಹುದು?
ನಮ್ಮ ಸ್ಟಾಕ್ ಶಿಫಾರಸುಗಳಲ್ಲಿ ವಿಶೇಷವಾಗಿ ಸಣ್ಣ ಹೂಡಿಕೆದಾರರಿಗೆ, ನಾವು ಸಣ್ಣ ಪ್ರಮಾಣದಲ್ಲಿ ಖರೀದಿ ಮಾಡುವುದು ಉತ್ತಮ ಎಂದು ಹೇಳುತ್ತೇವೆ. ಆದ್ದರಿಂದ, ನೀವು ಟಾಟಾ ಸ್ಟೀಲ್ ಲಾಂಗ್ ಉತ್ಪನ್ನಗಳ ಸ್ಟಾಕ್ ಅನ್ನು ಖರೀದಿಸಲು ಬಯಸಿದರೆ, ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಿ. ಆದರೆ ಷೇರು ಮಾರುಕಟ್ಟೆ ಹೂಡಿಕೆ ಅಪಾಯಕಾರಿ ಎಂದು ನೆನಪಿರಲಿ.


Click it and Unblock the Notifications