ದುಡಿಯುವ ಮನಸ್ಸು ಹಾಗೂ ಛಲ ಒಂದೊಂದಿದ್ದರೆ ಎಂತಹದ್ದೇ ಸಮಸ್ಯೆಯನ್ನು ಬೇಕಾದರೂ ಬಗೆಹರಿಸಬಲ್ಲರು ಎಂಬುದಕ್ಕೆ ಈ ಮಹಿಳೆ ಬೆಸ್ಟ್ ಉದಾಹರಣೆ. ಮಹಿಳೆ ಆಗಿದ್ದರಿಂದಲೇ ಅವರಿಗೆ ತಮ್ಮ ಇಷ್ಟದ ಕೆಲಸ ಸಿಗಲಿಲ್ಲ. ಅಲ್ಲದೆ ಯಾವುದೇ ಬ್ಯಾಂಕ್‌ಗಳು ಸಹ ಸಾಲವನ್ನು ಸಹ ನೀಡಲಿಲ್ಲ. ತನ್ನ ಬಳಿ ಇದ್ದ ಕೂಡಿಟ್ಟ ಹಣವನ್ನೇ ಹಾಕಿ ದೊಡ್ಡ ಕಂಪನಿಯನ್ನು ನಿರ್ಮಿಸಿದ್ದಾರೆ.
ಅಂದು ತಮ್ಮ ಬಳಿ ಇದ್ದ 10 ಸಾವಿರ ರೂಪಾಯಿಯನ್ನು ಹೂಡಿಕೆ ಮಾಡಿದ ಕಂಪನಿ, ಇಂದು ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿದೆ. ಸದ್ಯ ಇವರ ಬಳಿ 347000000000 ಹಣ ವಿದ್ದು, ಕಳೆದ ವರ್ಷ 960000000 ದಾನವನ್ನು ಮಾಡಿದ್ದಾರೆ. ಅಂದಹಾಗೆ ಈ ಮಹಿಳೆ ಯಾರು ಎಂಬ ಪ್ರಶ್ನೆ ನಿಮಗೆ ಕಾಡದೇ ಇರದು. ಅವರೇ ಬೆಂಗಳೂರು ಮೂಲದ ಕಿರಣ್ ಮಜುಂದಾರ್ ಶಾ.

ಬಯೋಕಾನ್‌ನ ಸಂಸ್ಥಾಪಕರಾದ ಕಿರಣ್ ಅವರು ಭಾರತದ ಉನ್ನತ ವ್ಯಾಪಾರ ಉದ್ಯಮಿಗಳಲ್ಲಿ ಒಬ್ಬರು. ಕಿರಣ್ ತನ್ನ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬುದ್ಧಿವಂತಿಕೆಯಿಂದ ಮಹಿಳೆಯರೂ ಉತ್ತಮವಾಗಿ ವ್ಯಾಪಾರ ಮಾಡಬಹುದು ಎಂದು ಕಿರಣ್ ಅವರು ಸಾಬೀತುಪಡಿಸಿದ್ದಾರೆ. ಇಂದು ಎಲ್ಲರಿಗೂ ಕಿರಣ್ ಮಜುಂದಾರ್ ಶಾ ತಿಳಿದಿದೆ. ಫೋರ್ಬ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಕಿರಣ್ ಅವರಿಗೂ ಸ್ಥಾನವಿದೆ.
ಕಿರಣ್ ಮುಜುಂದಾರ್ ಶಾ ಅವರು ದಾನಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು. ಇವರು ಕಳೆದ ವರ್ಷ 96 ಕೋಟಿ ರೂಪಾಯಿಗಳನ್ನು ದಾನ ಮಾಡಿದ್ದಾರೆ. ಇವರು ಹೆಚ್ಚಾಗಿ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ತಮ್ಮ ದಾನವನ್ನು ಮಾಡುತ್ತಾರೆ.
ಬಯೋಕಾನ್ ಕಂಪನಿ ಆರಂಭಿಸುದ್ದು ಎಲ್ಲಿ?
ಕಿರಣ ಕೆಲವು ವರ್ಷ ವಿದೇಶದಲ್ಲಿ ಕೆಲಸ ಮಾಡಿ ಭಾರತಕ್ಕೆ ಮರಳಿಸಿದರು. ವ್ಯಾಪಾರ ಮಾಡುವುದು ಅವರ ಉದ್ದೇಶವಾಗಿತ್ತು. ಅವರು ಭಾರತದಲ್ಲಿ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯಮ ಆರಂಭಿಸಲು ಬಯಸಿದ್ದರು. ಇಲ್ಲೂ ಒಂದು ತೊಂದರೆ ಇತ್ತು. ಆ ಸಮಯದಲ್ಲಿ ಜೈವಿಕ ತಂತ್ರಜ್ಞಾನವು ಸಂಪೂರ್ಣವಾಗಿ ಹೊಸ ವಿಷಯ. ಎರಡನೆಯದಾಗಿ, ವ್ಯಾಪಾರವನ್ನು ನಿಭಾಯಿಸುವ ಮಹಿಳೆಯ ಸಾಮರ್ಥ್ಯದ ಬಗ್ಗೆ ಜನರು ಸಂಶಯ ವ್ಯಕ್ತಪಡಿಸಿದ್ದರು. ಈ ಕಾರಣಗಳಿಂದ ಉದ್ಯಮ ಆರಂಭಿಸಲು ಸಾಲ ಸಿಗಲಿಲ್ಲ. 1978 ರಲ್ಲಿ, ಅವರು ಐರ್ಲೆಂಡ್‌ನ ಬಯೋಕಾನ್ ಬಯೋಕೆಮಿಕಲ್ಸ್ ಲಿಮಿಟೆಡ್‌ನ ಸಹಯೋಗದೊಂದಿಗೆ ತಮ್ಮ ಕಂಪನಿಯನ್ನು ಸ್ಥಾಪಿಸಿದರು. ಕೇವಲ 10,000 ರೂ.ನಲ್ಲಿ ಗ್ಯಾರೇಜ್‌ನಲ್ಲಿ ಕಂಪನಿ ಆರಂಭಿಸಿದರು.

ಐರ್ಲೆಂಡ್‌ನಲ್ಲಿ ಉದ್ಯೋಗ
ದೆಹಲಿ ಮತ್ತು ಬೆಂಗಳೂರಿನಲ್ಲಿ ಬ್ರೂಮಾಸ್ಟರ್ ಆಗಿ ಕೆಲಸ ಹುಡುಕುತ್ತಿರುವಾಗ, ಕಿರಣ್ ಐರಿಶ್ ಉದ್ಯಮಿ ಲೆಸ್ ಆಚಿನ್‌ಕ್ಲೋಸ್ ಅವರನ್ನು ಭೇಟಿಯಾದರು. ಉದ್ಯಮ ಆರಂಭಿಸುವಂತೆ ಕಿರಣ್ ಗೆ ಸಲಹೆ ನೀಡಿದರು. ಇದು ಕಿರಣ್‌ಗೆ ಇಷ್ಟವಾಗಲಿಲ್ಲ.ಆಚಿನ್‌ಕ್ಲೋಸ್ ಅವರಿಗೆ ಐರ್ಲೆಂಡ್‌ನ ಬಯೋಕಾನ್ ಬಯೋ ಕೆಮಿಕಲ್ಸ್‌ನಲ್ಲಿ ಕೆಲಸ ಕಲಿಯಲು ಅವಕಾಶ ನೀಡಿದರು. ಐರ್ಲೆಂಡ್‌ನ ಬಯೋಕಾನ್ ಬಯೋ ಕೆಮಿಕಲ್ಸ್ ಲಿಮಿಟೆಡ್‌ನಲ್ಲಿ ಟ್ರೈನಿ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದರು.
ಕಿರಣ್ ಕಂಪನಿ ಆರಂಭಿಸಿದ ಮೊದಲ ಕೆಲಸವೆಂದರೆ ಪಪ್ಪಾಯಿ ಜ್ಯೂಸ್ ನಿಂದ ಕಿಣ್ವಗಳನ್ನು ತಯಾರಿಸುವುದು. ಕಿರಣ್‌ನ ವ್ಯವಹಾರವು ಆರಂಭದಲ್ಲಿ ಜನರನ್ನು ಆಕರ್ಷಿಸಿತು. ಬಯೋಕಾನ್ ತನ್ನ ಉತ್ಪನ್ನಗಳನ್ನು ಅಮೇರಿಕಾ ಮತ್ತು ಅನೇಕ ಯುರೋಪಿಯನ್ ದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸಿತು. ಇದರ ನಂತರ ಬಯೋಕಾನ್ ಐಸಿಂಗ್ಲಾಸ್ ಅನ್ನು ಹೊರತೆಗೆಯಲು ಪ್ರಾರಂಭಿಸಿತು. ಬಿಯರ್ ಅನ್ನು ಸ್ಪಷ್ಟಪಡಿಸಲು ಇದನ್ನು ಬಳಸಲಾಗುತ್ತದೆ. ಇದಾದ ನಂತರ ಕಿರಣ್ ಹಿಂತಿರುಗಿ ನೋಡಲಿಲ್ಲ. ಇಂದು ಬಯೋಕಾನ್ ಭಾರತದ ಅತಿದೊಡ್ಡ ಲಿಸ್ಟೆಡ್ ಬಯೋಫಾರ್ಮಾಸ್ಯುಟಿಕಲ್ ಕಂಪನಿಯಾಗಿದೆ. ಬಯೋಕಾನ್‌ನ ಮೌಲ್ಯ ಸುಮಾರು 34700 ಕೋಟಿ ರೂ. ಈಗ ಇವರ ಕಂಪನಿ ದೇಶ ವಿದೇಶಗಳಲ್ಲಿಯೂ ಹೆಸರು ವಾಸಿ.


Click it and Unblock the Notifications