ನವದೆಹಲಿ, ಏಪ್ರಿಲ್ 12: ಭಾರತೀಯ ರೈಲ್ವೇಯು ಸಮಗ್ರವಾದ 'ಸೂಪರ್ ಅಪ್ಲಿಕೇಶನ್' ಅನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಇದು ರೈಲ್ವೆ ಪ್ರಯಾಣಿಕರಿಗೆ ಒನ್ ಸ್ಟಾಪ್ ಪರಿಹಾರವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.
ಭಾರತೀಯ ರೈಲ್ವೆಯ ಈ ಸೂಪರ್ ಅಪ್ಲಿಕೇಶನ್ ಟಿಕೆಟ್ ಬುಕಿಂಗ್, ರೈಲು ಟ್ರ್ಯಾಕಿಂಗ್ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಗುರಿಯನ್ನು ಹೊಂದಿರುವ ಇತರ ರೈಲ್ವೆ ಸಂಬಂಧಿತ ಕಾರ್ಯಗಳನ್ನು ಒಳಗೊಂಡಂತೆ ಹಲವಾರು ಸೇವೆಗಳನ್ನು ಒದಗಿಸುತ್ತದೆ.

ಭಾರತೀಯ ರೈಲ್ವೇಯು 2024 ರ ಲೋಕಸಭಾ ಚುನಾವಣೆಯ ಮೊದಲು ಹಲವಾರು ಅಪಡೇಟ್‌ಗಾಗಿ ಕಾರ್ಯನಿರ್ವಹಿಸುತ್ತಿದೆ. ಈ 'ಸೂಪರ್ ಅಪ್ಲಿಕೇಶನ್' ಆ ಪ್ರಮುಖ ತಾಂತ್ರಿಕ ನವೀಕರಣಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ಈ ಬಳಕೆ ಪ್ರಾರಂಭಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಈ ಅಪಡೇಟ್ ಮೂಲಕ 24 ಗಂಟೆಗಳ ಟಿಕೆಟ್ ಮರುಪಾವತಿ ಯೋಜನೆಯನ್ನು ಪರಿಚಯಿಸುವುದು ಅವುಗಳಲ್ಲಿ ಒಂದಾಗಿದೆ. ರೈಲ್ವೆಯ ಹೊಸ ಯೋಜನೆಯು ಮರುಪಾವತಿ ಪ್ರಕ್ರಿಯೆಯನ್ನು ನೀಡುವ ಮೂಲಕ ಟಿಕೆಟ್ ರದ್ದತಿಯನ್ನು ಸರಳೀಕರಿಸುವ ಗುರಿಯನ್ನು ಹೊಂದಿದೆ.
ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಅಪ್ಲಿಕೇಶನ್ 100 ಮಿಲಿಯನ್ ಡೌನ್‌ಲೋಡ್‌ಗಳೊಂದಿಗೆ ಹೆಚ್ಚು ಜನಪ್ರಿಯವಾಗಿದೆ. 'ಸೂಪರ್ ಅಪ್ಲಿಕೇಶನ್' ಅಡಿಯಲ್ಲಿ ತರಲು ನಿರೀಕ್ಷಿಸಲಾದ ಅಪ್ಲಿಕೇಶನ್‌ಗಳ ಪಟ್ಟಿಯು ರೈಲ್ ಮದದ್, ಯುಟಿಎಸ್, ಸತಾರ್ಕ್, ಟಿಎಂಎಸ್-ನಿರೀಕ್ಷನ್, ಐಆರ್‌ಸಿಟಿಸಿ ಏರ್ ಮತ್ತು ಪೋರ್ಟ್ ರೀಡ್ ಇತರವುಗಳಾಗಿವೆ.
4.46 ಲಕ್ಷ ಆಂಡ್ರಾಯ್ಡ್ ಬಳಕೆದಾರರು
ಕೋಲ್ಕತ್ತಾ ಮೆಟ್ರೋದ ಮೊಬೈಲ್ ಅಪ್ಲಿಕೇಶನ್ ಅನ್ನು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಮೆಟ್ರೋ ರೈಡ್ ಕೋಲ್ಕತ್ತಾ' ಎಂಬ ಈ ಆ್ಯಪ್ ಅನ್ನು ಸೆಂಟರ್ ಫಾರ್ ರೈಲ್ವೇ ಇನ್ಫರ್ಮೇಷನ್ ಸಿಸ್ಟಮ್ಸ್ (CRIS) ಅಭಿವೃದ್ಧಿಪಡಿಸಿದೆ ಎಂದು ಮೆಟ್ರೋ ರೈಲ್ವೇ ವಕ್ತಾರ ಕೌಶಿಕ್ ಮಿತ್ರ ಭಾನುವಾರ ಹೇಳಿದ್ದಾರೆ.
"ಮೆಟ್ರೋ ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಅಥವಾ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್‌ಗಳನ್ನು ಯಾವುದೇ ಸಮಯದಲ್ಲಿ ಎಲ್ಲಿಂದಲಾದರೂ ಬುಕ್ ಮಾಡಲು ಅನುವು ಮಾಡಿಕೊಡಲು ಇಂತಹ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವ ಕಲ್ಪನೆಯನ್ನು ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 'ಮೆಟ್ರೋ ರೈಡ್ ಕೋಲ್ಕತ್ತಾ' ಅಪ್ಲಿಕೇಶನ್ ಅನ್ನು ಮಾರ್ಚ್ 5, 2022 ರಂದು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತು ಮಾರ್ಚ್ 22, 2024 ರಂದು ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಮಿತ್ರ ಹೇಳಿದರು.


Click it and Unblock the Notifications