ಯುಎಸ್, ಯುರೋಪ್ ರಾಷ್ಟ್ರಗಳಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಬಿಕ್ಕಟ್ಟು ಕಂಡು ಬಂದಿದೆ. ಯುಎಸ್‌ನ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಲಾಗಿದೆ. ಈ ನಡುವೆ ಆಸ್ತಿ-ಬಾಧ್ಯತೆಯ ಅಸಮತೋಲನದ ಬಗ್ಗೆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಕೆ ನೀಡಿದ್ದಾರೆ. ಬೇರೆ ಸಹಾಯ ಲಭ್ಯವಾಗದೆ ಕಾರ್ಯ ನಿರ್ವಹಣೆ ಮಾಡುವ ಹಣಕಾಸು ಸ್ಥಿತಿಯಲ್ಲಿ ಇಲ್ಲದ, ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾಪೋರೇಷನ್ ವಶಕ್ಕೆ ಪಡೆದುಕೊಂಡಿದೆ.
2008ರ ಹಣಕಾಸು ಬಿಕ್ಕಟ್ಟಿನ ಬಳಿಕ ಯುಎಸ್‌ನಲ್ಲಿ ನಡೆದ ಅತೀ ದೊಡ್ಡ ಬ್ಯಾಂಕಿಂಗ್ ವೈಫಲ್ಯ ಇದಾಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಿಕ್ಕಟ್ಟಿನ ಬಳಿಕ ಮತ್ತೊಂದು ಬ್ಯಾಂಕ್ ಆದ ಸಿಗ್ನೇಚರ್ ಬ್ಯಾಂಕ್ ಕೂಡಾ ಮುಚ್ಚಲ್ಪಟ್ಟಿದೆ. 2022ರ ಕೊನೆಯ ವೇಳೆಗೆ ಎಸ್‌ವಿಬಿ ಆಸ್ತಿ ರೂಪದಲ್ಲಿ ಬ್ಯಾಂಕ್‌ನಲ್ಲಿ 209 ಬಿಲಿಯನ್ ಯುಎಸ್ ಡಾಲರ್ ಇದ್ದರೆ, ಡೆಪಾಸಿಟ್ ರೂಪದಲ್ಲಿ 175.4 ಬಿಲಿಯನ್ ಯುಎಸ್ ಡಾಲರ್ ಇತ್ತು. ಈ ಆಧಾರದಲ್ಲಿ ನೋಡಿದಾಗ ಯುನೈಟೆಡ್ ಸ್ಟೇಟ್ಸ್‌ನ 16ನೇ ಅತೀ ದೊಡ್ಡ ಬ್ಯಾಂಕ್ ಇದಾಗಿತ್ತು.

ಭಾರತದಲ್ಲಿಯೂ ಎಚ್ಚರಿಕೆಯ ಕರೆಗಂಟೆ
ಸಿಲಿಕಾನ್ ವ್ಯಾಲಿ ಬ್ಯಾಂಕ್, ಸಿಗ್ನೇಚರ್ ಬ್ಯಾಂಕ್ ಮುಚ್ಚಲ್ಪಟ್ಟ ಬಳಿಕ ಬೇರೆ ದೇಶಗಳಲ್ಲಿಯೂ ಆತಂಕ ಸೃಷ್ಟಿಯಾಗಿದೆ. ಇದರಂತೆಯೇ ಆರ್‌ಬಿಐ ಕೂಡಾ ಭಾರತದ ಬ್ಯಾಂಕ್‌ಗಳಿಗೆ ಎಚ್ಚರಿಕೆಯನ್ನು ನೀಡಿದೆ. ಎಸ್‌ವಿಬಿ ಕುಸಿತವು ಭಾರತದ ಸ್ಟಾರ್ಟ್‌ಅಪ್‌ಗಳು ಇತರೆ ಸಂಸ್ಥೆಗಳ ಮೇಲೆಯೂ ಪ್ರಭಾವ ಬೀರಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್, "ಕೆಲವು ಭಾರತೀಯ ಸಂಸ್ಥೆಯು ಬಿಲಿಯನ್ ಡಾಲರ್‌ಗೂ ಅಧಿಕ ಸಂಪತ್ತು ಎಸ್‌ವಿಬಿಯಲ್ಲಿದೆ," ಎಂದು ತಿಳಿಸಿದ್ದು, ಪ್ರಭಾವಕ್ಕೆ ಒಳಗಾದ ಸಂಸ್ಥೆಗಳಿಗೆ ಭರವಸೆ ನೀಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿರುವುದಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್ ತಿಳಿಸಿದ್ದಾರೆ. ಚಂದ್ರಶೇಖರ್ ಪ್ರಕಾರ, ಭಾರತೀಯ ಬ್ಯಾಂಕ್‌ಗಳು ಹಣಕಾಸು ಸಚಿವರಿಗೆ ನೀಡಿದ ಸಲಹೆಯನ್ನು ಅನುಸರಿಸಿದರೆ ಎಸ್‌ವಿಬಿಯಲ್ಲಿ ಕ್ಯಾಪಿಟಲ್‌ನೊಂದಿಗೆ ಸ್ಟಾರ್ಟ್‌ಅಪ್‌ಗಳಿಗೆ ಠೇವಣಿ ಬೆಂಬಲಿತ ಕ್ರೆಡಿಟ್ ಲೈನ್ ಅನ್ನು ಒದಗಿಸಬಹುದು.
ಟ್ರಾಕ್ಸಿನ್‌ನ ಡೇಟಾ ಪ್ರಕಾರ, ಎಸ್‌ವಿಬಿ ಭಾರತದಲ್ಲಿನ ಸುಮಾರು 21 ಸಂಸ್ಥೆಗಳ ಮೇಲೆ ಹಣ ಹೂಡಿಕೆ ಮಾಡಿದೆ. ಬ್ಲ್ಯೂಸ್ಟೋನ್, ಕಾರ್‌ವೇಲ್, ಇನ್‌ಮೋಬಿ, ಲೋಯಲ್ಟಿ ರಿವಾರ್ಡ್ಸ್ ಕೂಡಾ ಎಸ್‌ವಿಬಿಯಿಂದ ಹಣವನ್ನು ಪಡೆದಿದ್ದಾರೆ. ಟ್ರಾಕ್ಸಿನ್ ಪ್ರಕಾರ 2011ರಿಂದ ಎಸ್‌ವಿಬಿ ಭಾರತದ ಮೇಲೆ ಅತೀ ಮುಖ್ಯವಾದ ಹೂಡಿಕೆ ಯಾವುದನ್ನು ಮಾಡಿಲ್ಲ.ಟ್ರಾಕ್ಸಿನ್ ಪೇಟಿಎಂ, ಪೇಟಿಎಂ ಮಾಲ್ ಮೊದಲಾದವುಗಳೊಂದಿಗಿನ ಸ್ಪರ್ಧಾತ್ಪಕ ಸೇವೆಯಯಾಗಿದೆ.
ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಪ್ರಕಾರ, ಸಿಲಿಕಾನ್ ವ್ಯಾಲಿ ಬ್ಯಾಂಕ್ (ಎಸ್‌ವಿಬಿ) ಕಂಪನಿಯಲ್ಲಿ ತನ್ನ ಆರಂಭಿಕ 1.7 ಮಿಲಿಯನ್ ಯುಎಸ್‌ಡಿ ಹೂಡಿಕೆಯ ಆದಾಯವನ್ನು ಸೃಷ್ಟಿ ಮಾಡಿದೆ. ಇದಾದ ಬಳಿಕ ಹಲವಾರು ವರ್ಷಗಳು ಕಳೆದ ಈಗ ಎಸ್‌ವಿಬಿ ಪೇಟಿಎಂನ ಭಾಗವಾಗಿಲ್ಲ ಎಂದು ಶರ್ಮಾ ಖಚಿತಪಡಿಸಿದ್ದಾರೆ. ಇನ್ನು ಮಾಹಿತಿ ಪ್ರಕಾರ ಕನಿಷ್ಠ 40 YC-ಬ್ಯಾಕ್‌ಡ್ ಭಾರತೀಯ ಸಂಸ್ಥೆಗಳು ಎಸ್‌ವಿಬಿಯಲ್ಲಿ 250,000 ಯುಎಸ್ ಡಾಲರ್‌ನಿಂದ 1 ಮಿಲಿಯನ್ ಯುಎಸ್ ಡಾಲರ್‌ವರೆಗಿನ ಖಾತೆಯನ್ನು ಹೊಂದಿದೆ. ಈ ಪೈಕಿ 20ಕ್ಕೂ ಅಧಿಕ ಸಂಸ್ಥೆಗಳ ಖಾತೆಯ ಮೊತ್ತ 1 ಮಿಲಿಯನ್ ಯುಎಸ್ ಡಾಲರ್‌ಗೂ ಅಧಿಕವಾಗಿದೆ. ಇಂಡಿಯನ್ ಸ್ಟಾರ್ಟ್‌ಅಪ್ಸ್‌ಗಳಾದ ರೋಜರ್‌ಪೇ, ಮೀಶೋ, ಜೆಪ್ಟೋ ಎಸ್‌ವಿಬಿಯೊಂದಿಗೆ ಯಾವುದೇ ಹಣಕಾಸು ಸಂಬಂಧವನ್ನು ಹೊಂದಿಲ್ಲ.


Click it and Unblock the Notifications