2019ನೇ ಇಸವಿಯಲ್ಲಿ ಭಾರತೀಯರು ಸ್ವಿಗ್ಗಿ ಮೂಲಕ ಅತಿ ಹೆಚ್ಚು ಆರ್ಡರ್ ಮಾಡಿದ್ದು ಏನು ಎಂಬುದರ ಲೆಕ್ಕಾಚಾರವನ್ನು ತೆರೆದಿಡಲಾಗಿದೆ. ಪೈನಾಪಲ್ ಟಾಪ್ಡ್ ಪಿಜ್ಜಾದಿಂದ ಫಲೂಡಾ ಐಸ್ ಕ್ರೀಮ್ ತನಕ ಅತಿಹೆಚ್ಚು ಆರ್ಡರ್ ಮಾಡಿದ್ದು ಏನು ಎಂಬ ಮಾಹಿತಿಯನ್ನು ಫುಡ್ ಆರ್ಡರ್ ಅಪ್ಲಿಕೇಷನ್ ಸ್ವಿಗ್ಗಿ ಬಿಡುಗಡೆ ಮಾಡಿದೆ. ಡಿಸೆಂಬರ್ 23, 2019ರ ತನಕದ ಮಾಹಿತಿ ಇದಾಗಿದೆ.
ಆದರೆ, ಭಾರತೀಯರು ಅತಿ ಹೆಚ್ಚು ಆರ್ಡರ್ ಮಾಡಿರುವುದು ಬಿರಿಯಾನಿ. ಸತತವಾಗಿ ಮೂರನೇ ವರ್ಷ ಅತಿ ಹೆಚ್ಚು ಆರ್ಡರ್ ಮಾಡಲಾದ ಆಹಾರ ಪದಾರ್ಥದ ಪಟ್ಟಿಯಲ್ಲಿ ಬಿರಿಯಾನಿ ಟಾಪ್ ಒನ್ ಸ್ಥಾನದಲ್ಲಿದೆ. ಜನವರಿಯಿಂದ ನವೆಂಬರ್ ಮಧ್ಯೆ ಹತ್ತಾರು ಲಕ್ಷ ಆರ್ಡರ್ ಗಳನ್ನು ಪಡೆದಿದೆ. ಅಂದ ಹಾಗೆ ಐನೂರಾ ಮೂವತ್ತು ನಗರಗಳಲ್ಲಿ ತನ್ನ ಪ್ರತಿಸ್ಪರ್ಧಿ ಝೊಮ್ಯಾಟೋ ಜತೆಗೆ ಸ್ಪರ್ಧಿಸುತ್ತಿದೆ. ಒಂದು ಲಕ್ಷದ ಅರವತ್ತು ಸಾವಿರ ರೆಸ್ಟೋರೆಂಟ್ ಗಳಿಂದ ಆರ್ಡರ್ ಒದಗಿಸುತ್ತಿದೆ.
ಇಡೀ ದೇಶಾದ್ಯಂತ ಆರ್ಡರ್ ಮಾಡಿರುವ ಪದಾರ್ಥಗಳ ಸಂಖ್ಯೆಯ ಆಧಾರದಲ್ಲಿ ಹೇಳಬೇಕೆಂದರೆ, ಬಿರಿಯಾನಿ ಮತ್ತು ಗುಲಾಬ್ ಜಾಮೂನ್ ಖ್ಯಾತಿ ಗಳಿಸಿದೆ.

ಆತಿ ಹೆಚ್ಚು ಆರ್ಡರ್ ಮಾಡಲಾದ ಆಹಾರ
* ಚಿಕನ್ ಬಿರಿಯಾನಿ
* ಮಸಾಲೆ ದೋಸೆ
* ಪನ್ನೀರ್ ಬಟರ್ ಮಸಾಲ
* ಚಿಕನ್ ಫ್ರೈಡ್ ರೈಸ್
* ಮಟನ್ ಬಿರಿಯಾನಿ
* ಚಿಕನ್ ದಮ್ ಬಿರಿಯಾನಿ
* ವೆಜ್ ಫ್ರೈಡ್ ರೈಸ್
* ವೆಜ್ ಬಿರಿಯಾನಿ
* ತಂದೂರಿ ಚಿಕನ್
* ದಾಲ್ ಮಖಾನಿ
ಅತಿ ಹೆಚ್ಚು ಆರ್ಡರ್ ಮಾಡಿದ ಸಿಹಿ
* ಗುಲಾಬ್ ಜಾಮೂನ್
* ಹಲ್ವಾ
ಒಂದು ನಿಮಿಷಕ್ಕೆ ಸರಾಸರಿ ತೊಂಬತ್ತೈದು ಬಿರಿಯಾನಿಯಂತೆ ಆರ್ಡರ್ ಮಾಡಲಾಗಿದೆ. ಅನ್ನದಿಂದ ಮಾಡಲಾದ ಖಾದ್ಯದಲ್ಲಿ ಬೋನ್ ಲೆಸ್ ಚಿಕನ್ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ಮಟನ್ ಬಿರಿಯಾನಿ, ಎಗ್ ಬಿರಿಯಾನಿ, ವೆಜ್ ಬಿರಿಯಾನಿ ಮತ್ತು ಪನ್ನೀರ್ ಬಿರಿಯಾನಿ ಅತಿ ಹೆಚ್ಚು ಆರ್ಡರ್ ಮಾಡಲಾಗಿದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾಗಿದೆ.
ಇನ್ನು ಥಾಲಿಗಳಾದ ಮೇಥಿ ಮಲಾಯ್ ಪನ್ನೀರ್, ಧಾಬಾ ದಾಲ್ ಜತೆಗೆ ಅನ್ನ, ಚಪಾತಿ ಥಾಲಿ, ಮಿನಿ ದೋಸೆ, ಇಡ್ಲಿ, ವಡೆ ಮತ್ತು ಸಾಂಬಾರ್ ಥಾಲಿಗಳಿಗೆ ಕೂಡ ಬೇಡಿಕೆ ಇರುವುದು ಕಂಡುಬಂದಿದೆ. ಕೆಟೋ ಬ್ರೌನೀಸ್, ಕೆಟೋ ಫ್ರೆಂಡ್ಲಿ ಟಸ್ಕನ್ ಚಿಕನ್, ಆರೋಗ್ಯಪೂರ್ಣ ಕೆಂಪು ಅಕ್ಕಿಯ ಪೋಹಾ ಆರ್ಡರ್ ನಲ್ಲಿ ಮುನ್ನೂರು ಪ್ರತಿ ಶತ ಹೆಚ್ಚು ಆರ್ಡರ್ ಬಂದಿದೆ.
ದಕ್ಷಿಣ ಭಾರತದ ರಾಜ್ಯಗಳ ಸಣ್ಣ ಪಟ್ಟಣ- ನಗರಗಳಲ್ಲಿ ಸ್ವಿಗ್ಗಿ ಬಳಕೆ ಮಾಡಿ, ಆಹಾರ ಪದಾರ್ಥಗಳನ್ನು ಆರ್ಡರ್ ಮಾಡುವುದು ಹೆಚ್ಚಾಗಿದೆ. ಗುಂಟೂರು, ವಾರಂಗಲ್, ಮದುರೈ ಮತ್ತು ವಿಶಾಖಪಟ್ಟಣದಲ್ಲಿ ಸ್ವಿಗ್ಗಿ ಅಪ್ಲಿಕೇಷನ್ ಹೆಚ್ಚು ಬಳಸಲಾಗಿದೆ. ಸ್ವಿಗ್ಗಿ ಸೇವೆ ಆರಂಭಿಸಿದ ಮೊದಲ ವಾರದಿಂದಲೇ ದಿನಕ್ಕೆ ಸಾವಿರ ಆರ್ಡರ್ ನಂತೆ ಬಂದಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಸ್ವಿಗ್ಗಿ ಆರಂಭವಾದ ಮೊದಲ ದಿನವೇ ಎರಡೂವರೆ ಸಾವಿರ ಆರ್ಡರ್ ಬಂದಿತ್ತು.


Click it and Unblock the Notifications