ಚಿನ್ನದ ಬೆಲೆ ಇಳಿಕೆ: ಭಾರತದಿಂದ ಸ್ವಿಸ್ ಸ್ವರ್ಣದ ಆಮದು ಹೆಚ್ಚಳ

ನವದೆಹಲಿ, ಅ. 21: ಹಣದುಬ್ಬದರದ ಪರಿಣಾಮವಾಗಿ ಜಗತ್ತು ಡಾಲರ್ ಹಿಂದೆ ಬೀಳುತ್ತಿದೆ. ಇದರ ಪರಿಣಾಮವಾಗಿ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗಿದೆ. ಅದರ ಫಲ ಎಂಬಂತೆ ಚಿನ್ನದ ಬೆಲೆ ಕಡಿಮೆ ಆಗುತ್ತಿದೆ. ಚಿನ್ನಕ್ಕೆ ಹೆಚ್ಚು ಬೇಡಿಕೆ ಇರುವ ಭಾರತದಂತಹ ದೇಶಗಳಿಗೆ ಸ್ವರ್ಣ ಪಡೆಯಲು ಸಕಾಲ. ಅಂತೆಯೇ, ಸ್ವಿಸ್ ಚಿನ್ನವನ್ನು ಭಾರತ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಆಮದು ಮಾಡಿಕೊಂಡಿರುವುದು ತಿಳಿದುಬಂದಿದೆ

ಬಹಳ ಏರುಗತಿಯಲ್ಲಿದ್ದ ಚಿನ್ನದ ಬೆಲೆ ಈ ವರ್ಷ ತಗ್ಗುತ್ತಿರುವುದರಿಂದ ಭಾರತ ಮಾತ್ರವಲ್ಲ, ಏಷ್ಯಾದ ಅನೇಕ ದೇಶಗಳಲ್ಲಿ ಬೆಲೆ ಏರಿಕೆ ನಡುವೆಯೂ ಚಿನ್ನಕ್ಕೆ ಬೇಡಿಕೆ ಬಂದಿದೆ. ಭಾರತ, ಚೀನಾ, ಟರ್ಕಿ ಸೇರಿದಂತೆ ಹಲವು ದೇಶಗಳಿಗೆ ಸ್ವಿಸ್ ಚಿನ್ನದ ರಫ್ತು ಸೆಪ್ಟೆಂಬರ್‌ನಲ್ಲಿ ಹೆಚ್ಚಾಗಿದೆ. ಸ್ವಿಸ್ ಕಸ್ಟಮ್ಸ್‌ನ ದತ್ತಾಂಶದ ಪ್ರಕಾರ ಟರ್ಕಿಯಲ್ಲಿ ಕಳೆದ ಒಂದು ದಶಕದಲ್ಲೇ ಗರಿಷ್ಠ ಎನಿಸುವಷ್ಟು ಚಿನ್ನದ ಆಮದಾಗಿದೆ.

ಸುರಕ್ಷಿತ ಹೂಡಿಕೆ

ಸುರಕ್ಷಿತ ಹೂಡಿಕೆ

ಟರ್ಕಿಯಲ್ಲಿ ಆರ್ಥಿಕ ದುಸ್ಥಿತಿ ಇದೆ. ಹೀಗಾಗಿ ಅಲ್ಲಿನ ಜನರಿಗೆ ಚಿನ್ನ ಒಂದು ಸುರಕ್ಷಿತ ಹೂಡಿಕೆ ಮಾಧ್ಯಮವಾಗಿ ತೋರುತ್ತಿದೆ. ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿರುವ ಚಿನ್ನ ಯಾವತ್ತಿದ್ದರೂ ಅಮೂಲ್ಯವೇ. ಅದರ ಮೌಲ್ಯ ಕುಂದುವ ಸಾಧ್ಯತೆ ಕಡಿಮೆ. ಭಾರತೀಯರು ಚಿನ್ನವನ್ನು ಹೂಡಿಕೆಯಾಗಿ ನೋಡುವುದಕ್ಕಿಂತ ಆಭರಣವಾಗಿ ಧರಿಸಲು ಇಷ್ಟಪಡುತ್ತಾರೆ. ಹೀಗಾಗಿ, ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇಲ್ಲ.

ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತದ್ದು ನಂತರದ ಸ್ಥಾನ. ಭಾರತ ಒಂದು ವರ್ಷದಲ್ಲಿ ಸುಮಾರು ಒಂದು ಸಾವಿರ ಟನ್‌ಗಳಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ.

ಸ್ವಿಸ್ ಚಿನ್ನಕ್ಕೆ ಬೇಡಿಕೆ

ಸ್ವಿಸ್ ಚಿನ್ನಕ್ಕೆ ಬೇಡಿಕೆ

ಚಿನ್ನದ ಮಾರುಕಟ್ಟೆಯಲ್ಲಿ ಸ್ವಿಸ್ ಚಿನ್ನಕ್ಕೆ ಅತಿ ಹೆಚ್ಚು ಬೇಡಿಕೆ ಇದೆ. ಸ್ವಿಸ್ ಗೋಲ್ಡ್ ಎಂದರೆ ಚಿನ್ನದ ಪರಿಶುದ್ಧತೆ ಮತ್ತು ಉತ್ತಮ ಗುಣಮಟ್ಟದ ಪ್ಯಾಕೇಜಿಂಗ್‌ಗೆ ಹೆಸರುವಾಸಿ. ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಚಿನ್ನದ ಉತ್ಪಾದನೆ ಬಹಳ ಹೆಚ್ಚು, ಉಚ್ಚತಮ ಗುಣಮಟ್ಟದಲ್ಲಿ ಚಿನ್ನವನ್ನು ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ಈ ಸೆಪ್ಟೆಂಬರ್ ತಿಂಗಳಲ್ಲಿ ಸ್ವಿಟ್ಜರ್ಲ್ಯಾಂಡ್ 1,74,184 ಕಿಲೋ ಚಿನ್ನವನ್ನು ರಫ್ತು ಮಾಡಿದೆ. ಭಾರತಕ್ಕೆ 34,600 ಕಿಲೋ ಚಿನ್ನವನ್ನು ಸ್ವಿಟ್ಜರ್‌ಲೆಂಡ್ ರಫ್ತು ಮಾಡಿದೆ. ಕುತೂಹಲವಂದರೆ ಕಳೆದ ವರ್ಷ ಚೀನಾ ಸೇರಿದಂತೆ ಹಲವು ದೇಶಗಳು ಚಿನ್ನದ ಆಮದನ್ನು ಕಡಿಮೆ ಮಾಡಿದ್ದವು. ಆದರೆ, ಭಾರತದಿಂದ ಚಿನ್ನದ ಆಮದು ಹೆಚ್ಚಾಗಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಭಾರತ 50,448 ಕಿಲೋ ಸ್ವಿಸ್ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತದಿಂದ ಸ್ವಿಸ್ ಚಿನ್ನದ ಆಮದು ಕಡಿಮೆ ಆಗಿರುವುದು ನಿಜ. ಆದರೆ, ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಭಾರತ ಸೆಪ್ಟೆಂಬರ್‌ನಲ್ಲಿ ಹೆಚ್ಚು ಚಿನ್ನ ಆಮದು ಮಾಡಿಕೊಂಡಿದೆ.

ಭಾರತದಿಂದ ಎಚ್ಚರಿಕೆಯ ಹೆಜ್ಜೆ

ಭಾರತದಿಂದ ಎಚ್ಚರಿಕೆಯ ಹೆಜ್ಜೆ

ಭಾರತದಲ್ಲಿ ಹಣದುಬ್ಬರ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಹರಸಾಹಸ ಮಾಡುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೂಪಾಯಿ ಹಿನ್ನಡೆಗೆ ಪ್ರಮುಖವಾಗಿ ಕಾರಣವಾಗಿರುವುದು ಆಮದು ಅಂಶ. ಪೆಟ್ರೋಲ್ ಮತ್ತು ಚಿನ್ನವನ್ನು ಭಾರತ ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಇದು ಚಾಲ್ತಿ ಖಾತೆ ಕೊರತೆ, ಹಣದುಬ್ಬರ, ರೂಪಾಯಿ ಕುಸಿತ ಇತ್ಯಾದಿ ಅನೇಕ ಆರ್ಥಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಹೀಗಾಗಿ, ಭಾರತ ಆಮದನ್ನು ಆದಷ್ಟೂ ಕಡಿಮೆ ಮಾಡುವ ಇರಾದೆಯಲ್ಲಿದೆ. ಆದರೆ, ಸೆಪ್ಟೆಂಬರ್ ಅಸುಪಾಸು ಕಾಲಘಟ್ಟವು ಹಬ್ಬದ ಸೀಸನ್ ಆದ್ದರಿಂದ ಭಾರತೀಯರು ಚಿನ್ನವನ್ನು ಹೆಚ್ಚು ಖರೀದಿಸುತ್ತಾರೆ. ಹೀಗಾಗಿ, ಭಾರತದಿಂದ ಈ ಸಂದರ್ಭದಲ್ಲಿ ಚಿನ್ನದ ಆಮದು ಹೆಚ್ಚೇ ಇರುತ್ತದೆ.

ಗೋಲ್ಡ್ ರೇಟ್:

ಇವತ್ತು ಶುಕ್ರವಾರ ಭಾರತದಲ್ಲಿ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,710 ರೂ ಇದೆ. ಅಪರಂಜಿ ಚಿನ್ನ ಎಂದರೆ 24 ಕೆರಟ್‌ನ ಶುದ್ಧ ಚಿನ್ನ. ಆಭರಣ ಚಿನ್ನ ಸಾಮಾನ್ಯವಾಗಿ 22 ಕೆರಟ್ ಇರುತ್ತದೆ. ಕೆಲವೊಂದು ಆಭರಣಗಳಿಗೆ 18 ಅಥವಾ 16 ಕೆರಟ್ ಚಿನ್ನವನ್ನು ಉಪಯೋಗಿಸಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+