For Quick Alerts
ALLOW NOTIFICATIONS  
For Daily Alerts

ಬಿಗ್‌ಬಾಸ್ಕೆಟ್‌ ಖರೀದಿಸಿದ ಟಾಟಾ: ಫ್ಲಿಪ್‌ಕಾರ್ಟ್‌, ಅಮೆಜಾನ್‌ಗೆ ಸ್ಪರ್ಧೆ!

|

ಆನ್‌ಲೈನ್ ಪ್ಲಾಟ್‌ಫಾರ್ಮ್ ಬಿಗ್‌ಬಾಸ್ಕೆಟ್‌ನಲ್ಲಿ, ಟಾಟಾ ಗ್ರೂಪ್ ಸುಮಾರು 9500 ಕೋಟಿ ರೂಪಾಯಿ ಹೂಡಿಕೆ ಮೂಲಕ ಬಹುದೊಡ್ಡ ಪಾಲನ್ನು ತನ್ನದಾಗಿಸಿಕೊಂಡಿದೆ ಎಂದು ರಾಯಿಟರ್ಸ್ ಶುಕ್ರವಾರ ವರದಿ ಮಾಡಿದೆ. ಈ ಮೂಲಕ ಅತಿದೊಡ್ಡ ಉದ್ಯಮ ಸಮೂಹ ಹೊಂದಿರುವ ಟಾಟಾ ಅಮೆಜಾನ್, ಫ್ಲಿಪ್‌ಕಾರ್ಟ್‌, ರಿಲಯನ್ಸ್‌ಗೆ ಸ್ಪರ್ಧೆಯೊಡ್ಡಲಿದೆ.

ಟಾಟಾ ಸನ್ಸ್ನ ಅಂಗಸಂಸ್ಥೆ ಟಾಟಾ ಡಿಜಿಟಲ್ ಲಿಮಿಟೆಡ್ ಈ ಪಾಲನ್ನು ಖರೀದಿಸಿದೆ. ಒಪ್ಪಂದದ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಟಾಟಾ ನಿರಾಕರಿಸಿದೆ, ಆದರೆ ಬಿಗ್‌ಬಾಸ್ಕೆಟ್ ರಾಯಿಟರ್ಸ್ ಕೋರಿಕೆಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.

ಬಿಗ್‌ಬಾಸ್ಕೆಟ್‌ ಖರೀದಿಸಿದ ಟಾಟಾ: ಶೇ. 64.3ರಷ್ಟು ಪಾಲು ಸ್ವಾಧೀನ?

ಟಾಟಾ ಡಿಜಿಟಲ್ ಬಿಗ್‌ಬಾಸ್ಕೆಟ್‌ನಲ್ಲಿ ಶೇಕಡಾ 64.3ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಭಾರತದ ಆ್ಯಂಟಿಟ್ರಸ್ಟ್‌ ಬಾಡಿ ಮಾರ್ಚ್‌ನಲ್ಲಿ ಅನುಮೋದನೆ ನೀಡಿತ್ತು. ಈ ಒಪ್ಪಂದವು ಸುಮಾರು 95 ಬಿಲಿಯನ್ ರೂಪಾಯಿಗಳ ( $1.31 ಬಿಲಿಯನ್) ಮೌಲ್ಯದ್ದಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಉಪ್ಪಿನಿಂದ ಆರಂಭಿಸಿ ಐಷಾರಾಮಿ ಕಾರುಗಳು, ಸಾಫ್ಟ್‌ವೇರ್ ಉತ್ಪನ್ನಗಳವರೆಗೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಟಾಟಾ ಸಮೂಹವು ಎಲ್ಲಾ ಸೇವೆ ಒಂದೆಡೆ ಸಿಗುವಂತಹ 'ಸೂಪರ್ ಆ್ಯಪ್' ಅಭಿವೃದ್ಧಿಗೆ ಚಿಂತನೆ ನಡೆಸಿದೆ.

ಇನ್ನು ಟಾಟಾ ಗ್ರೂಪ್ ಹಾಗೂ ಬಿಗ್‌ ಬಾಸ್ಕೆಟ್‌ ನಡುವಿನ ಈ ಒಪ್ಪಂದದಿಂದಾಗಿ ಜಾಕ್‌ ಮಾ ನಿಯಂತ್ರಿತ ಅಲಿಬಾಬಾ ಸೇರಿದಂತೆ ಹಲವು ಹೂಡಿಕೆದಾರರು ಬಿಗ್‌ ಬಾಸ್ಕೆಟ್‌ನಿಂದ ಹೂಡಿಕೆಯನ್ನು ಹಿಂಪಡೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಬಗ್ಗೆ ಟಾಟಾ ಗ್ರೂಪ್, ಬಿಗ್‌ ಬಾಸ್ಕೆಟ್, ಅಲಿಬಾಬಾ ಗ್ರೂಪ್ ಪ್ರತಿಕ್ರಿಯೆಗೆ ನಿರಾಕರಿಸಿದೆ.

English summary

Tata buys majority stake in online grocery BigBasket

Tata sons has acquired a majority stake in online grocery seller BigBasket, putting the Indian conglomerate in a direct race with e-commerce players Amazon, Flipkart And RIL
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X