For Quick Alerts
ALLOW NOTIFICATIONS  
For Daily Alerts

ಏರ್ ಇಂಡಿಯಾ ಖರೀದಿಗೆ ಈ ತನಕ ಏಕೈಕ ಬಿಡ್ಡರ್ ಟಾಟಾ ಗ್ರೂಪ್

|

ಏರ್ ಇಂಡಿಯಾ ಖರೀದಿಗೆ ಬಿಡ್ಡಿಂಗ್ ಮಾಡುವುದಕ್ಕೆ ಇನ್ನೊಂದು ತಿಂಗಳಿಗೆ ಕಾಲಾವಕಾಶ ಕೊನೆಯಾಗುತ್ತದೆ. ಆದರೆ ಇಲ್ಲಿಯ ತನಕ ಖರೀದಿಗೆ ಆಸಕ್ತಿ ತೋರಿರುವ ಏಕೈಕ ಬಿಡ್ಡರ್ ಟಾಟಾ ಗ್ರೂಪ್. ಈ ಕಂಪೆನಿಗೆ ಈಗಾಗಲೇ ಏರ್ ಲೈನ್ಸ್ ವ್ಯವಹಾರದಲ್ಲಿ ಅನುಭವ ಇದೆ. ಒಂದು ಕಾಲಕ್ಕೆ ಟಾಟಾ ಸಮೂಹದ ಭಾಗವೇ ಆಗಿದ್ದ ಏರ್ ಇಂಡಿಯಾವನ್ನು ಖರೀದಿ ಮಾಡುವುದಕ್ಕೆ ಆಸಕ್ತಿ ವ್ಯಕ್ತಪಡಿಸಿದೆ.

 

ಇನ್ನು ಬೇರೆ ಬಿಡ್ಡರ್ ಗಳ ಬಗ್ಗೆ ಮಾಹಿತಿ ಗೊತ್ತಾಗಬೇಕಿದೆ. ಏಕೆಂದರೆ ಕೊರೊನಾದ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿಯೇ ವಿಮಾನ ಯಾನ ಕ್ಷೇತ್ರ ಸಂಕಷ್ಟದಲ್ಲಿದೆ. ಅಷ್ಟೇ ಅಲ್ಲ, ಪ್ರವಾಸೋದ್ಯಮವೇ ಸಮಸ್ಯೆಗೆ ಸಿಲುಕಿದೆ. ಇನ್ನು ಈ ಏರ್ ಇಂಡಿಯಾ ಬಿಡ್ಡಿಂಗ್ ನಲ್ಲಿ ಟಾಟಾ ಸಮೂಹ ಏಕಾಂಗಿಯಾಗಿ ಮುಂದುವರಿಯಲಿದೆ.

 

ಕೇಳುವವರು ಇಲ್ಲ: ಏರ್ ಇಂಡಿಯಾ ಹರಾಜು ಪ್ರಕ್ರಿಯೆ ಮತ್ತೆ ಮುಂದಕ್ಕೆಕೇಳುವವರು ಇಲ್ಲ: ಏರ್ ಇಂಡಿಯಾ ಹರಾಜು ಪ್ರಕ್ರಿಯೆ ಮತ್ತೆ ಮುಂದಕ್ಕೆ

ವಿಮಾನಯಾನ ಕ್ಷೇತ್ರದಲ್ಲಿ ಟಾಟಾ ಜತೆಗೆ ಸಹಭಾಗಿತ್ವ ಹೊಂದಿರುವ ಸಿಂಗಪೂರ್ ಏರ್ ಲೈನ್ಸ್ ಸಂಸ್ಥೆಯು ಏರ್ ಇಂಡಿಯಾ ಬಿಡ್ ನಿಂದ ಹಿಂದೆ ಸರಿದಿದೆ. ಅದಕ್ಕೆ ಕಾರಣ ಆಗಿರುವುದು ಮತ್ತದೇ ಕೊರೊನಾ. ಏರ್ ಇಂಡಿಯಾ ಖರೀದಿಗೆ ಬಿಡ್ ಮಾಡುವುದಕ್ಕೆ ಆಗಸ್ಟ್ 31, 2020 ಕೊನೆ ದಿನ. ಅದರ ಆಚೆಗೂ ದಿನಾಂಕ ವಿಸ್ತರಣೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ.

ಏರ್ ಇಂಡಿಯಾ ಖರೀದಿಗೆ ಈ ತನಕ ಏಕೈಕ ಬಿಡ್ಡರ್ ಟಾಟಾ ಗ್ರೂಪ್

ಕೊರೊನಾ ಬಿಕ್ಕಟ್ಟಿಗೂ ಮುಂಚಿನಿಂದಲೂ ಏರ್ ಇಂಡಿಯಾ ಆರ್ಥಿಕ ಸ್ಥಿತಿ ಗಂಭೀರವಾಗಿಯೇ ಇತ್ತು. ಕೊರೊನಾ ನಂತರವಂತೂ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ಆರ್ಥಿಕ ಸ್ಥಿತಿ ಬಿಗಡಾಯಿಸಿತು. ಟಾಟಾ ಏರ್ ಲೈನ್ಸ್ ಮತ್ತು ಏರ್ ಇಂಡಿಯಾದಿಂದ ವಿಸ್ತಾರಾ ಹಾಗೂ ಏರ್ ಏಷ್ಯಾ ಇಂಡಿಯಾ ಭಾರತದ ವಿಮಾನ ಯಾನ ಕ್ಷೇತ್ರದಲ್ಲಿ ಟಾಟಾ ಸಮೂಹ ಅತಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ.

English summary

Tata Group Sole Bidder for Air India

National carrier Air India got sole bidder Tata group for purchase. August 31, 2020 is last day for bidding.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X