For Quick Alerts
ALLOW NOTIFICATIONS  
For Daily Alerts

ಬಿಗ್ ಬ್ಯಾಸ್ಕೆಟ್ ಕೊಳ್ಳಲು ಮುಂದಾದ ಟಾಟಾ ಸಮೂಹ

|

ಬೆಂಗಳೂರು ಮೂಲದ ಆನ್ ಲೈನ್ ದಿನಸಿ ಅಂಗಡಿ ಬಿಗ್ ಬ್ಯಾಸ್ಕೆಟ್ ಖರೀದಿಗೆ ಟಾಟಾ ಸಮೂಹ ಮುಂದಾಗಿದೆ ಎಂಬ ಸುದ್ದಿ ಬಂದಿದೆ. ಸುಮಾರು 1 ಬಿಲಿಯನ್ ಡಾಲರ್ ಮೌಲ್ಯಕ್ಕೆ ಒಪ್ಪಂದವಾಗಲಿದೆ ಎಂಬ ಸುದ್ದಿ ಬಂದಿದೆ.

ಎಕಾನಾಮಿಕ್ ಟೈಮ್ಸ್ ವರದಿಯಂತೆ, ಈ ಒಪ್ಪಂದ ಪೂರೈಸುತ್ತಿದ್ದಂತೆ ಟಾಟಾ ಸಮೂಹ ''ಸೂಪರ್ ಆಪ್'' ಹೊರತರಲಿದ್ದು, ಎಲ್ಲಾ ಬಗೆಯ ಗ್ರಾಹಕ ಸ್ನೇಹಿ ಸೇವೆಗಳು ಇದರಲ್ಲಿ ಲಭ್ಯವಾಗಲಿವೆ. ಇ ಕಾಮರ್ಸ್ ಕ್ಷೇತ್ರದಲ್ಲಿ ಅಮೆಜಾನ್ ಹಾಗೂ ರಿಲಯನ್ಸ್ ವಿರುದ್ಧ ಸ್ಪರ್ಧೆಗಿಳಿಯಲು ಟಾಟಾ ಈ ರೀತಿ ಸಜ್ಜಾಗುತ್ತಿದೆ ಎಂಬ ವರದಿಗಳಿವೆ.

ಕೊವಿಡ್ 19 ಸಂದರ್ಭದಲ್ಲಿ ವಾಲ್ಮಾರ್ಟ್ ಸಂಸ್ಥೆ ಬೆಂಬಲಿತ ಫ್ಲಿಪ್ ಕಾರ್ಟ್, ಅಮೆಜಾನ್ ಫ್ರೆಶ್ ನಡುವೆ ಮೊದಲಿಗೆ ಸುರಕ್ಷಿತ ಸೇವೆ ಒದಗಿಸಿದ್ದು ಬಿಗ್ ಬ್ಯಾಸ್ಕೆಟ್.

ಬಿಗ್ ಬ್ಯಾಸ್ಕೆಟ್ ಕೊಳ್ಳಲು ಮುಂದಾದ ಟಾಟಾ ಸಮೂಹ

ಬಿಗ್ ಬ್ಯಾಸ್ಕೆಟ್ ನಲ್ಲಿ ಚೀನಾದ ಅಲಿಬಾಬಾ ಶೇ 26ರಷ್ಟು ಪಾಲು ಹೊಂದಿದೆ. ಟಾಟಾ ಸಮೂಹಕ್ಕೆ ಎಲ್ಲಾ ಪಾಲನ್ನು ಬಿಟ್ಟುಕೊಡಲು ಬಿಗ್ ಬ್ಯಾಸ್ಕೆಟ್ ಸಿದ್ಧವಾಗಿದೆ ಎಂಬ ಮಾಹಿತಿಯಿದೆ. ಮಿಂಟ್ ವರದಿಯಂತೆ, 500 ರಿಂದ 700 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಟಾಟಾ ಮುಂದಾಗಿದೆ.

English summary

Tata Group to buy majority stake in BigBasket

As per a leading business dailies report BigBasket, Bengaluru-based online-grocery startup is in advanced talks with Tata Group for paring its majority stake worth $1 billion.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X