ಬೆಂಗಳೂರು, ಜನವರಿ 07: ಕರ್ನಾಟಕದ ಕೋಲಾರ ಸಮೀಪದ ಮಾಲೂರಿನಲ್ಲಿರುವ ವಿಸ್ಟ್ರಾನ್ ಇಂಡಿಯಾ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡ ಕೇವಲ ಎರಡು ತಿಂಗಳ ನಂತರ ಸ್ವದೇಶಿ ನಿರ್ಮಿತ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ತನ್ನ ಹೊಸೂರು ಘಟಕದ ವಿಸ್ತರಣೆಗಾಗಿ 7,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಸಿದ್ಧವಾಗಿದೆ.
ಇದರಲ್ಲಿ ಐಫೋನ್ ಉತ್ಪನ್ನಗಳ ಜೋಡಣಾ ಘಟಕವನ್ನು ಸ್ಥಾಪಿಸುವುದು ಸೇರಿದೆ ಎಂದು ಡಿಎಚ್ ವರದಿ ಮಾಡಿದೆ. ಹೂಡಿಕೆಯು ಆರು ವರ್ಷಗಳ ಅವಧಿಯಲ್ಲಿ ಮಾಡಲಾಗುವುದು. ಇದರಿಂದ 30,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಜನವರಿ 7 ಮತ್ತು 8 ರಂದು ತಮಿಳುನಾಡು ಸರ್ಕಾರವು ಆಯೋಜಿಸಿರುವ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಈ ಯೋಜನೆಯ ಔಪಚಾರಿಕ ಘೋಷಣೆಯನ್ನು ಮಾಡಲಾಗುವುದು ಎಂದು ತಿಳಿದು ಬಂದಿದೆ.

ಟಾಟಾ ಗ್ರೂಪ್‌ನ ಈ ಕ್ರಮವು ತಮಿಳುನಾಡಿಗೆ ಮಹತ್ವದ ಅನುಕೂಲ ಮಾಡಿಕೊಟ್ಟಿದೆ. ಇದು 2023 ರಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ 5.37 ಶತಕೋಟಿ ಡಾಲರ್ ಗಳಿಸುವ ಮೂಲಕ ಉತ್ತರ ಪ್ರದೇಶ ಮತ್ತು ಕರ್ನಾಟಕವನ್ನು ಹಿಂದಿಕ್ಕಿ ದೇಶದ ಅಗ್ರಗಣ್ಯ ರಾಜ್ಯವಾಗಿ ಬೆಳವಣಿಗೆಗೆ ಸಹಾಯವಾಗಿದೆ. ಇದು 2023-2024ರ ಹಣಕಾಸು ವರ್ಷದಲ್ಲಿ ಮೊದಲ ಆರು ತಿಂಗಳಿಗೆ ಉತ್ತರ ಪ್ರದೇಶದ ($2.5 ಶತಕೋಟಿ)ಗೆ ಎರಡು ಪಟ್ಟು ತಮಿಳುನಾಡಿನ ಎಲೆಕ್ಟ್ರಾನಿಕ್ಸ್ ರಫ್ತು $4.8 ಬಿಲಿಯನ್ ಆಗಿತ್ತು.
ನವೆಂಬರ್‌ನಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಆಪಲ್‌ನ ಐಫೋನ್‌ನ ಗುತ್ತಿಗೆ ತಯಾರಕರಾಗುವ ಮೊದಲ ಭಾರತೀಯ ಕಂಪನಿಯಾಗಿದೆ. ಈಗ ಇದು ತಮಿಳುನಾಡಿನಲ್ಲಿ ಐಫೋನ್‌ಗಳನ್ನು ಜೋಡಿಸುವ ಮೂರನೇ ಕಂಪೆನಿಯಾಗಲಿದೆ. ಇದು ಈಗಾಗಲೇ ತೈವಾನ್‌ನ ಫಾಕ್ಸ್‌ಕಾನ್ ಮತ್ತು ಪೆಗಾಟ್ರಾನ್‌ಗೆ ನೆಲೆಯಾಗಿದೆ. ಇದು ಚೆನ್ನೈ ಬಳಿ ಪ್ರಮುಖ ಅಸೆಂಬ್ಲಿಂಗ್ ಘಟಕಗಳನ್ನು ನಿರ್ಮಿಸಿದೆ.
ಎಲೆಕ್ಟ್ರಾನಿಕ್ಸ್ ಇಕೋ ಸಿಸ್ಟಮ್ ನಿರ್ಮಿಸಲು 2020 ರಲ್ಲಿ ಹೊಸೂರು ಬಳಿಯ ಉದ್ದಾನಪಲ್ಲಿಯಲ್ಲಿ ಜಿಎಂಆರ್ ಮತ್ತು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್ (TIDCO) ಜಂಟಿ ಉದ್ಯಮವಾದ ಜಿಎಂಆರ್ ಕೃಷ್ಣಗಿರಿ ವಿಶೇಷ ಹೂಡಿಕೆ ಪ್ರದೇಶದಲ್ಲಿ ಟಾಟಾಗೆ 500 ಎಕರೆಗಳನ್ನು ನೀಡಲಾಯಿತು. ದೊಡ್ಡ ಆವರಣದಲ್ಲಿ ನಿರ್ಮಿಸಲಾಗುವ ಈ ಹೊಸ ಸ್ಥಾವರವು ಪ್ರಾಥಮಿಕವಾಗಿ ಐಫೋನ್‌ಗಳನ್ನು ಜೋಡಿಸುತ್ತದೆ ಎಂದು ವರದಿ ತಿಳಿಸಿದೆ.
ಹೊಸೂರು ಸ್ಥಾವರವು ಒಂದು ವರ್ಷದಲ್ಲಿ ನಿರ್ಮಿಸಲ್ಪಟ್ಟು 2021 ರಲ್ಲಿ ಕಾರ್ಯಾಚರಣೆಗೆ ಬಂದಿದೆ. ಇದು ಪ್ರಸ್ತುತ ಐಫೋನ್‌ಗಳು ಮತ್ತು ಹ್ಯಾಂಡ್‌ಸೆಟ್‌ಗಳಿಗೆ ಹೋಗುವ ಇತರ ಎಲೆಕ್ಟ್ರಾನಿಕ್ ಘಟಕಗಳನ್ನು ಒಳಗೊಂಡಂತೆ ಸ್ಮಾರ್ಟ್‌ಫೋನ್‌ಗಳಿಗೆ ಕೇಸಿಂಗ್‌ಗಳನ್ನು ತಯಾರಿಸುತ್ತದೆ. 10,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಘಟಕವು ನಿರಂತರ ನೇಮಕಾತಿ ಚಾಲನೆಯಲ್ಲಿದೆ.
ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸೆಮಿಕಂಡಕ್ಟರ್‌ಗಳ ದೇಶೀಯ ಉತ್ಪಾದನೆಯ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡುವ ಉದ್ದೇಶದಿಂದ ಈ ಮಾದರಿಯ ಉತ್ಪಾದನೆಯನ್ನು ಉತ್ತೇಜಿಸುವ ಕೇಂದ್ರದ ಯೋಜನೆಯಡಿಯಲ್ಲಿ ಟಾಟಾ ಗ್ರೂಪ್ ಘಟಕದಲ್ಲಿ 5,000 ಕೋಟಿಗಳಷ್ಟು ಹೂಡಿಕೆ ಮಾಡಿದ್ದಾರೆ.
ಕಳೆದ ವರ್ಷ ಆಪಲ್ ತನ್ನ ಐಪೋನ್ 15 ಅನ್ನು ಬಿಡುಗಡೆ ಮಾಡಿದಾಗ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರಸ್ತುತಪಡಿಸಲಾದ ಉತ್ಪನ್ನವನ್ನು ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣವಾಗಿ ಜೋಡಿಸಲಾಗಿತ್ತು. ವಾಸ್ತವವಾಗಿ ದೇಶದಿಂದ ಆಪಲ್‌ನ ಸ್ಮಾರ್ಟ್‌ಫೋನ್ ರಫ್ತುಗಳು 2020 ರಲ್ಲಿ 1% ರಿಂದ 2023 ರಲ್ಲಿ 7% ಕ್ಕೆ ಏರಿತು. ವಾಸ್ತವವಾಗಿ ಭಾರತದಿಂದ ಆಪಲ್‌ನ ರಫ್ತುಗಳು ಏಪ್ರಿಲ್ ಮತ್ತು ಮೇ 2023 ರಲ್ಲಿ 20,000 ಕೋಟಿ ರೂ.ಗೆ ಏರಿತು. ಕಳೆದ ಇದೇ ಅವಧಿಯಲ್ಲಿ 9,066 ಕೋಟಿ ರೂ. ಮಾತ್ರವೇ ಇತ್ತು.
More From GoodReturns

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!



Click it and Unblock the Notifications