ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿ, ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡಿದೆ. ದೀರ್ಘಾವಧಿಯ ಸಾಲ, ಕಡಿಮೆ ಮಾಸಿಕ ಕಂತುಗಳು, ಹಾಗೆಯೇ ಸದ್ಯ ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆಲ್ಲ ಬಂಪರ್ ಆಫರ್ ಘೋಷಿಸಿದೆ.
ಕೊರೊನಾ ವಾರಿಯರ್ ಟಾಟಾ ಟಿಯಾಗೊ ಕೊಂಡರೆ, (5 ಲಕ್ಷ ರುಪಾಯಿ ಸಾಲ ಎಂದುಕೊಂಡರೆ) ಆರಂಭದ 6 ತಿಂಗಳು ತಲಾ 5,000 ರುಪಾಯಿ ಮಾತ್ರ ಕಟ್ಟಿದರೆ ಸಾಕು. ಮುಂದಿನ ತಿಂಗಳಲ್ಲಿ ಅದು ಏರುತ್ತಾ ಹೋಗುತ್ತದೆ. ಒಂದು ವೇಳೆ ಆರ್ಥಿಕ ಮುಗ್ಗಟ್ಟು ಎದುರಾದರೆ, ವಾಹನವನ್ನು ಟಾಟಾ ಮೋಟಾರ್ಸ್ ಫೈನಾನ್ಸ್‌ಗೆ ಹಿಂದಿರುಗಿಸಬಹುದು. ಕೋವಿಡ್ ಯೋಧರಿಗೆ 45,000 ರುಪಾಯಿವರೆಗೆ ಲಾಭಗಳನ್ನು ನೀಡಲಾಗುತ್ತದೆ.

ಅಲ್ಲದೆ, ತನ್ನ ಸಂಪೂರ್ಣ ಶ್ರೇಣಿಯ ಕಾರುಗಳು ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲಿ ಕಂಪನಿಯು 100 ಪರ್ಸೆಂಟ್ ಆನ್-ರೋಡ್ ಫಂಡಿಂಗ್ ನೀಡುತ್ತಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
"ಪ್ರಸ್ತುತ ಕಾಲದಲ್ಲಿ, ಸುರಕ್ಷತೆಯೊಂದಿಗೆ ಮೊದಲ ಆದ್ಯತೆಯಾಗಿ, ಗ್ರಾಹಕರು ಕೈಗೆಟುಕುವ ಮತ್ತು ಪಡೆಯಲು ಅನುಕೂಲಕರವಾದ ವೈಯಕ್ತಿಕ ಚಲನಶೀಲತೆ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಅದರ ಪ್ರಕಾರ, ಆಯ್ಕೆಯನ್ನು ನೀಡಲು ಮತ್ತು ನಮ್ಮ ಸಂಪೂರ್ಣ ಶ್ರೇಣಿಯನ್ನು ಹೊಂದುವ ಮತ್ತು ಕಾರುಗಳು ಮತ್ತು ಎಸ್‌ಯುವಿಗಳನ್ನು ಚಾಲನೆ ಮಾಡುವ ಅವರ ಸಂಪೂರ್ಣ ಅನುಭವವನ್ನು ಹೆಚ್ಚಿಸಲು ನಾವು ಈ ಪ್ಯಾಕೇಜ್ ಅನ್ನು ವಿನ್ಯಾಸಗೊಳಿಸಿದ್ದೇವೆ. "ಎಂದು ಟಾಟಾ ಮೋಟಾರ್ಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ (ಪ್ರಯಾಣಿಕರ ವಾಹನಗಳ ವ್ಯಾಪಾರ ಘಟಕ) ವಿವೇಕ್ ಶ್ರೀವತ್ಸ ಹೇಳಿದರು.
ಹೆಚ್ಚುವರಿ ಪ್ರಯೋಜನವಾಗಿ, ಗ್ರಾಹಕರು ತಮ್ಮ ಅಂತಿಮ ಇಎಂಐ ಪಾವತಿಸುವಾಗ ಮೂರು ಮೌಲ್ಯವರ್ಧನೆ ಆಯ್ಕೆಗಳಿಂದ ಆಯ್ಕೆ ಮಾಡಬಹುದು ಎಂದು ಕಂಪನಿ ತಿಳಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications