ಟಾಟಾ ಮೋಟಾರ್ಸ್ ಕಂಪೆನಿಯ ವಾಣಿಜ್ಯ ವಾಹನಗಳ ಬೆಲೆಯನ್ನು 2021ರ ಜನವರಿಯಿಂದ ಏರಿಕೆ ಮಾಡಲಾಗುವುದು ಎಂದು ಸೋಮವಾರ ತಿಳಿಸಲಾಗಿದೆ. ನಿರಂತರವಾಗಿ ವಸ್ತುಗಳ ಬೆಲೆ ಮತ್ತು ಇತರ ಇನ್ ಪುಟ್ ವೆಚ್ಚಗಳ ಏರಿಕೆ, ವಿದೇಶಿ ವಿನಿಮಯದ ಮೇಲಿನ ಪರಿಣಾಮ ಹಾಗೂ ಬಿಎಸ್ 6ಗೆ ಬದಲಾವಣೆ ಆಗಿರುವುದು ಇವೆಲ್ಲ ಸೇರಿಸಿಕೊಂಡು, ವಾಹನ ಉತ್ಪಾದನೆಯ ವೆಚ್ಚವನ್ನು ಹೆಚ್ಚಿಸಿದೆ.
ಈ ಬೆಲೆ ಏರಿಕೆಯನ್ನು ಭಾಗಶಃ ಸರಿದೂಗಿಸುವ ಸಲುವಾಗಿ ವಾಹನಗಳ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. "ಟಾಟಾ ಮೋಟಾರ್ಸ್ ನ ಎಲ್ಲ ವಾಣಿಜ್ಯ ವಾಹನಗಳ ದರವನ್ನು ಏರಿಕೆ ಮಾಡಲಾಗುವುದು, ಜನವರಿ 01, 2021ರಿಂದ ಇದು ಜಾರಿಗೆ ಬರಲಿದೆ," ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಾಸ್ತವದಲ್ಲಿನ ದರ ಬದಲಾವಣೆಯು ಆಯಾ ಮಾಡೆಲ್, ವೇರಿಯೆಂಟ್ ಹಾಗೂ ಪೆಟ್ರೋಲ್ ಅಥವಾ ಡೀಸೆಲ್ ವಾಹನವೇ ಎಂಬುದರ ಮೇಲೆ ಆಧಾರವಾಗಿರುತ್ತದೆ ಎಂದು ಕಂಪೆನಿ ತಿಳಿಸಿದೆ. ಈ ವರೆಗೆ ಕಂಪೆನಿಯೇ ಹೆಚ್ಚುವರಿ ವೆಚ್ಚವನ್ನು ಭರಿಸುತ್ತಿತ್ತು. ಆದರೆ ಈಗ ಸ್ವಲ್ಪ ಭಾಗವನ್ನಾದರೂ ಹೊರೆ ಇಳಿಸಿಕೊಳ್ಳಬೇಕಿದೆ. ಆದ್ದರಿಂದ ದರ ಪರಿಷ್ಕರಣೆ ಮೂಲಕ ಸ್ವಲ್ಪ ಮಟ್ಟಿಗಾದರೂ ವೆಚ್ಚವನ್ನು ತಗ್ಗಿಸಿಕೊಳ್ಳಬಹುದು ಎನ್ನಲಾಗಿದೆ.

ಮಧ್ಯಮ ಗಾತ್ರದ ವಾಹನಗಳಿಂದ ಭಾರೀ ವಾಣಿಜ್ಯ ವಾಹನಗಳು, ಲಘು ವಾಣಿಜ್ಯ ವಾಹನಗಳು ಹಾಗೂ ಬಸ್ ಗಳ ದರ ಏರಿಕೆಯನ್ನು ನಿರೀಕ್ಷಿಸಬಹುದು ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.


Click it and Unblock the Notifications