For Quick Alerts
ALLOW NOTIFICATIONS  
For Daily Alerts

ಟಾಟಾ ನೆಕ್ಸನ್ ಎಲೆಕ್ಟ್ರಿಕಲ್ ವಾಹನ ಬಿಡುಗಡೆ: 13,99,000 ರುಪಾಯಿಯಿಂದ ಬೆಲೆ ಆರಂಭ

|

ಟಾಟಾ ಗ್ರೂಪ್ ನಿಂದ ಮಂಗಳವಾರ ಟಾಟಾ ನೆಕ್ಸನ್ ಇವಿ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಎಕೋ ಸಿಸ್ಟಮ್ ಬಿಡುಗಡೆ ಮಾಡಲಾಗಿದೆ. ಎಕೋಸಿಸ್ಟಮ್ ಅಂದರೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು, ಬ್ಯಾಟರಿ ಉತ್ಪಾದನೆ ವ್ಯವಸ್ಥೆ, ಮಾರಾಟ ಜಾಲ ಮತ್ತು ಹಣಕಾಸು ಸಾಲ ವ್ಯವಸ್ಥೆ ಕೂಡ ಇಲ್ಲಿ ದೊರೆಯಲಿದೆ.

 

ಈ ಎಲೆಕ್ಟ್ರಿಕ್ ವಾಹನದ ಆರಂಭಿಕ ಬೆಲೆ 13,99,000 ರುಪಾಯಿ ಇದ್ದರೆ, ಹೈಯರ್ ಎಂಡ್ ಗೆ 15,99,000 ರುಪಾಯಿ ಆಗುತ್ತದೆ. ಇವಿ ಎಕೋ ಸಿಸ್ಟಮ್ ಅನ್ನು Tata UniEVerse ಎಂದು ಕರೆಯಲಾಗುತ್ತದೆ. ಇದರಲ್ಲಿ ಟಾಟಾ ಪವರ್, ಟಾಟಾ ಕೆಮಿಕಲ್ಸ್, ಟಾಟಾ ಆಟೋಕಾಂಪ್, ಟಾಟಾ ಮೋಟಾರ್ಸ್ ಫೈನಾನ್ಸ್ ಮತ್ತು ಕ್ರೋಮಾ ಒಳಗೊಂಡಿರುತ್ತವೆ.

 

ಒಮ್ಮೆ ಚಾರ್ಜ್ ಮಾಡಿದರೆ 300 ಕಿ.ಮೀ. ವಾಹನ ಓಡಿಸಬಹುದು. ಬ್ಯಾಟರಿ ಹಾಗೂ ಮೋಟಾರ್ ಮೇಲೆ 8 ವರ್ಷ ಅಥವಾ 1,60,000 ಕಿ.ಮೀ. ಯಾವುದು ಮೊದಲೋ ಅಷ್ಟು ವಾರಂಟಿ ಇರುತ್ತದೆ.

ಟಾಟಾ ನೆಕ್ಸನ್ ಎಲೆಕ್ಟ್ರಿಕಲ್ ವಾಹನ ಬಿಡುಗಡೆ:ಬೆಲೆ 13.99 ಲಕ್ಷ

ಈ ವರ್ಷದ ಮಾರ್ಚ್ ಹೊತ್ತಿಗೆ ಟಾಟಾ ಪವರ್ ನಿಂದ ಮುನ್ನೂರು ಸಾರ್ವಜನಿಕ ಫಾಸ್ಟ್ ಚಾರ್ಜರ್ಸ್ ಅನ್ನು ದೇಶಾದ್ಯಂತ ಆರಂಭಿಸಲು ಉದ್ದೇಶಿಸಿದ್ದು, ಆ ಸಂಖ್ಯೆಯನ್ನು 2021ರ ಮಾರ್ಚ್ ಹೊತ್ತಿಗೆ 650ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಬ್ಯಾಟರಿ ಪ್ಯಾಕ್ ಅನ್ನು ಟಾಟಾ ಆಟೋಕಾಂಪ್ ಉತ್ಪಾದಿಸಿದರೆ, ಬ್ಯಾಟರಿ ಸೆಲ್ ಗಳನ್ನು ಟಾಟಾ ಕೆಮಿಕಲ್ಸ್ ತಯಾರಿಸಲಿದೆ.

ಟಾಟಾ ಮೋಟಾರ್ಸ್ ನಿಂದ ನೆಕ್ಸಾನ್ ಎಲೆಕ್ಟ್ರಿಕ್ ವಾಹನ; ಒಂದು ಚಾರ್ಜ್ ಗೆ 300 ಕಿ.ಮೀ.ಟಾಟಾ ಮೋಟಾರ್ಸ್ ನಿಂದ ನೆಕ್ಸಾನ್ ಎಲೆಕ್ಟ್ರಿಕ್ ವಾಹನ; ಒಂದು ಚಾರ್ಜ್ ಗೆ 300 ಕಿ.ಮೀ.

ಆಯ್ದ ಕ್ರೋಮಾ ಮಳಿಗೆಗಳಲ್ಲಿ ಕಾರಿನ ಮಾರಾಟ ಮಾಡಲಾಗುತ್ತದೆ. ಮುಂದಿನ ಎರಡು ವರ್ಷಗಳಲ್ಲಿ ಟಾಟಾದಿಂದ ಇನ್ನೂ ನಾಲ್ಕು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.

English summary

Tata Nexon Electric Vehicle Launched By Tata Group

Tata group launched nexon electric vehicle. Here is the complete details.
Story first published: Tuesday, January 28, 2020, 17:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X